Thursday 27 August 2020

ಮಹಾಭಾರತ ತಾತ್ಪರ್ಯನಿರ್ಣಯ, ಕನ್ನಡದಲ್ಲಿ 18: 63 -68

 ಕುಮಾರಾನ್ ಗ್ರಹಣೇಪ್ಸೂಮ್ಸ್ತಾನುಪಯಾತಾನುದೀಕ್ಷ್ಯ ಸಃ ।

ಅಕ್ಷೋಹಿಣೀತ್ರಿತಯಯುಙ್ ನಿಸ್ಸೃತೋ ದ್ರುಪದೋ ಗೃಹಾತ್ ॥೧೮.೬೩॥

ಕುಮಾರರು ತನ್ನನ್ನು ಹಿಡಿಯಲು ಬಂದಿರುವುದನ್ನು ದ್ರುಪದರಾಜ ಮನಗಂಡ ,

ತನ್ನ ಮೂರು ಅಕ್ಷೋಹಿಣೀ ಸೈನ್ಯದ ಒಡಗೂಡಿ ಅರಮನೆಯಿಂದ ಹೊರಬಂದ .

 

ತೇ ಶರೈರಭಿವರ್ಷನ್ತಃ ಪರಿವಾರ್ಯ್ಯ ಕುಮಾರಕಾನ್ ।

ಅರ್ದ್ದಯಾಮಾಸುರುದ್ವೃತ್ತಾನ್ ಸ್ತ್ರಿಯೋ ಬಾಲಾಶ್ಚ ಸರ್ವಶಃ ॥೧೮.೬೪॥

ದ್ರುಪದನ ಸೈನಿಕರಿಂದ ಕುಮಾರರ ಮೇಲೆ ಆಕ್ರಮಣದ ವೇದನೆ ,

ಸೈನಿಕರಿಂದ ತಪ್ಪಿಸಿಕೊಂಡವರಿಗೆ ಹೆಂಗಸರು ಮಕ್ಕಳಿಂದ ಪೀಡನೆ .

 

ಹರ್ಮ್ಯಸಂಸ್ಥಾಃ ಸ್ತ್ರಿಯೋ ಬಾಲಾ ಗ್ರಾವಭಿರ್ಮ್ಮುಸಲೈರಪಿ ।

ಅತ್ಯರ್ತ್ಥಮರ್ದ್ದಯಾಮಾಸುಃ ಕುಮಾರಾನ್ ಸುಸುಖೇಧಿತಾನ್ ॥೧೮.೬೫॥

ಅತ್ಯಂತ ಸುಖವಾಗಿ ಬೆಳೆದ ಈ ಕುಮಾರರಿಗೆ ಒದಗಿದ ಸ್ಥಿತಿ ,

ಹೆಂಗಸು ಮಕ್ಕಳಿಂದ ಕಲ್ಲು ಒನಕೆಗಳ ಹೊಡೆತ ತಿನ್ನುವ ಗತಿ .

 

ದ್ರುಪದಸ್ಯ ವರೋ ಹ್ಯಸ್ತಿ ಸೂರ್ಯ್ಯದತ್ತಸ್ತಪೋಬಲಾತ್ ।

ಆ ಯೋಜನಾತ್ ಪುರಮುಪ ನ ತ್ವಾ ಜೇಷ್ಯತಿ ಕಶ್ಚನ ॥೧೮.೬೬॥

ದ್ರುಪದನ ತಪೋಬಲಕ್ಕೆ ಮೆಚ್ಚಿ ಸೂರ್ಯ ಕೊಟ್ಟ ವರದ ಬಲ ,

ಆ ನಗರದ್ಯೋಜನದೊಳಗೆ ಯಾರೂ ನಿನ್ನನ್ನು ಗೆಲ್ಲಲಿಕ್ಕೆ ಆಗಲ್ಲ .

 

ಇತಿ ತೇನ ವರೇಣೈವ ಸುಖಸಂವರ್ದ್ಧಿತಾಶ್ಚ ತೇ ।

ಭಗ್ನಾಃ ಕುಮಾರಾ ಆವೃತ್ಯ ದುದ್ರುವುರ್ಯ್ಯತ್ರ ಪಾಣ್ಡವಾಃ ॥೧೮.೬೭॥

ಈ ತೆರನಾಗಿ ಕೊಡಲ್ಪಟ್ಟ ವರದ ಪ್ರಭಾವ ,

ಸುಖದಿ ಬೆಳೆದ ಕುಮಾರರಿಗಾಯ್ತು ಪರಾಭವ .

ತಿರುಗಿ ಓಡಿ ಸೇರಿದರು ಪಾಂಡವರಿದ್ದ ಠಾವ .

 

ಸ್ತ್ರೀಬಾಲಾವೃದ್ಧಸಹಿತೈಃ ಪಾಞ್ಚಾಲೈರಪ್ಯನುದ್ರುತಾಃ ।

ಭೀಮಾರ್ಜ್ಜುನೇತಿ ವಾಶನ್ತೋ ಯಯುರ್ಯ್ಯತ್ರ ಸ್ಮ ಪಾಣ್ಡವಾಃ ॥೧೮.೬೮॥

ಹೆಂಗಸರು ಮಕ್ಕಳು ಮುದುಕರು ಸೈನಿಕರಿಂದ ಬೆನ್ಹತ್ತಲ್ಪಟ್ಟ ಕುಮಾರರು,

'ಭೀಮಾ ಅರ್ಜುನಾ'ಎಂದರಚುತ್ತಾ ಪಾಂಡವರು ಇದ್ದಲ್ಲಿಗೆ ಓಡಿ ಬಂದರು .

No comments:

Post a Comment

ಗೋ-ಕುಲ Go-Kula