Friday, 14 August 2020

ಮಹಾಭಾರತ ತಾತ್ಪರ್ಯನಿರ್ಣಯ, ಕನ್ನಡದಲ್ಲಿ 17: 257 - 265

 ಸಮಸ್ತಯಾದವಾನ್ ರಣೇ ವಿಧೂಯ ತೌ ಜನಾರ್ದ್ದನಮ್ ।

ಉಪೇತ್ಯ ಚಾಂಸಗೌ ಹರೇರದಂಶತಾಂ ಸುಕರ್ಣ್ಣಕೌ ॥೧೭.೨೫೭॥

ಆ ಎರಡು ಭೂತಗಳು ಯಾದವರನ್ನೆಲ್ಲಾ ಜಾಡಿಸಿ ಓಡಿಸಿದವು ,

ಕೃಷ್ಣನ ಬಳಿಸಾರಿ ಅವನ ಹೆಗಲೇರಿ ಚೆಲುಕಿವಿಗಳನ್ನು ಕಚ್ಚಿದವು .

 

ಸ ತೌ ಭುಜಪ್ರವೇಗತೋ ವಿಧೂಯ ಶಙ್ಕರಾಲಯೇ ।

ನ್ಯಪಾತಯದ್ ಬಲಾರ್ಣ್ಣವೋsಮಿತಸ್ಯ ಕಿಂ ತದುಚ್ಯತೇ ॥೧೭.೨೫೮॥

ಭುಜಗಳ ಜಾಡಿಸಿ ಭೂತಗಳ ಕೈಲಾಸದಿ ಕೆಡವಿದನವ ಕೃಷ್ಣನೆಂಬ ಧೀರ ,

ಬಲಸಾಗರನಾದ ಸಾಟಿಯಿರದ ಸರ್ವೋತ್ತಮನಿಗೆ ಇದೇನು ಆಶ್ಚರ್ಯ .

 

ಪ್ರಭಕ್ಷಯನ್ತಮೋಜಸಾ ಹಿಡಿಮ್ಬಮುದ್ಧತಂ ಬಲಮ್ ।

ಸಹೋಗ್ರಸೇನಕೋ ಯಯೌ ಪಿತಾ ಹರೇಃ ಶರಾನ್ ಕ್ಷಿಪನ್ ॥೧೭.೨೫೯॥

ಆನಂತರ ದುರಹಂಕಾರಿ ಹಿಡಿಂಬ ಅತಿವೇಗದಿಂದ ಯಾದವಸೈನ್ಯವ ತಿನ್ನುತ್ತಿದ್ದ ,

ಉಗ್ರಸೇನನೊಡಗೂಡಿದ ಕೃಷ್ಣಪಿತ ವಸುದೇವ ಬಾಣ ಬಿಡುತ್ತಾ ಅವನಿಗೆದುರಾದ .

 

ತಯೋ ರಥೌ ಸಹಾಯುಧೌ ಪ್ರಭಕ್ಷ್ಯ ರಾಕ್ಷಸೋ ಬಲೀ ।

ಪ್ರಗೃಹ್ಯ ತಾವಭಾಷತ ಪ್ರಯಾತಮಾಶು ಮೇ ಮುಖಮ್ ॥೧೭.೨೬೦॥

 ಉಗ್ರಸೇನ ವಸುದೇವರ ರಥಗಳನ್ನು ಹಿಡಿಂಬ ತಿಂದುಹಾಕಿದ ,

ಅವರಿಬ್ಬರ ಹಿಡಿದು ನನ್ನ ಬಾಯಿಗೆ ಬಂದು ಬೀಳಿ ಎಂದ್ಹೇಳಿದ .

 

ತದಾ ಗದಾವರಾಯುಧಃ ಸಹೈವ ಹಂಸಭೂಭೃತಾ ।

ಪ್ರಯುದ್ಧ್ಯಮಾನ ಆಯಯೌ ವಿಹಾಯ ತಂ ಹಲಾಯುಧಃ ॥೧೭.೨೬೧॥

ಆಗ ಹಂಸನೊಂದಿಗೆ ಕಾದಾಡುತ್ತಿದ್ದ ಶ್ರೇಷ್ಠ ಗದಾಧಾರಿ ,

ಹಂಸನ ಬಿಟ್ಟು ಬಂದ ಬಲರಾಮ ಹಿಡಿಂಬನ ಬಳಿಸಾರಿ .

 

ತಮಾಗತಂ ಸಮೀಕ್ಷ್ಯ ತೌ ವಿಹಾಯ ರಾಕ್ಷಸಾಧಿಪಃ ।

ಉಪೇತ್ಯ ಮುಷ್ಟಿನಾsಹನದ್ ಬಲಂ ಸ ವಕ್ಷಸಿ ಕ್ರುಧಾ ॥೧೭.೨೬೨॥

ಬಳಿಬಂದ ಬಲರಾಮನ ಕಂಡು ಹಿಡಿಂಬಾಸುರ ,

ವಸುದೇವ ಉಗ್ರಸೇನರ ಬಿಟ್ಟುಬಂದ ರಾಮನ್ಹತ್ತಿರ .

 

ಉಭೌ ಹಿ ಬಾಹುಷಾಳಿನಾವಯುದ್ಧ್ಯತಾಂ ಚ ಮುಷ್ಟಿಭಿಃ ।

ಚಿರಂ ಪ್ರಯುದ್ಧ್ಯ ತಂ ಬಲೋsಗ್ರಹೀತ್ ಸ ಜಙ್ಘಯೋರ್ವಿಭುಃ ॥೧೭.೨೬೩॥

ಇಬ್ಬರೂ ಬಲಿಷ್ಠವಾದ ಕೈಗಳುಳ್ಳವರು ,

ಮುಷ್ಟಿಯುದ್ಧದಲ್ಲಿ ತೊಡಗಿದರಿಬ್ಬರು ,

ಬಹಳ ಕಾಲ ನಡೆಯಿತು ಮುಷ್ಟಿಯುದ್ಧ ,

ಬಲರಾಮ ಹಿಡಿಂಬನ ತನ್ನ ತೊಡೆಗಳಲ್ಲಿ ಹಿಡಿದ .

 

ಅಥೈನಮುದ್ಧೃತಂ ಬಲಾದ್ ಬಲಃ ಸ ದೂರಮಾಕ್ಷಿಪತ್ ।

ಪಪಾತ ಪಾದಯೋಜನೇ ಸ ನಾsಜಗಾಮ ತಂ ಪುನಃ ॥೧೭.೨೬೪॥

ವಿಹಾಯ ಸೈನಿಕಾಂಶ್ಚ ತೌ ನೃಪೌ ಯಯೌ ವನಾಯ ಸಃ ।

ನಿಹತ್ಯ ತಸ್ಯ ರಾಕ್ಷಸಾನ್ ಹಲಾಯುಧೋ ನನಾದ ಹ ॥೧೭.೨೬೫ ॥

ಆನಂತರ ಹಿಡಿಂಬಾಸುರನ ಮೇಲಿತ್ತಿದ ಬಲಭದ್ರ ,

ಅವನನ್ನೆಸೆದುಬಿಟ್ಟ ಕಾಲು ಯೋಜನದಷ್ಟು ದೂರ ,

ದೂರದಲ್ಲಿ ಬಿದ್ದವನು ಮತ್ತೆ ಹಿಂತಿರುಗಲಿಲ್ಲ ಆ ಅಸುರ .

ಹಿಡಿಂಬ ಸೈನಿಕರ ಹಂಸ ಡಿಭಿಕರ ಬಿಟ್ಟ ,

ಎಲ್ಲ ಬಿಟ್ಟವ ಆರಂಭಿಸಿದ ಕಾಡಿಗೆ ಓಟ ,

ರಾಮ ಘರ್ಜಿಸಿದ ಮುಗಿಸಿ ರಕ್ಕಸರ ಕೊಲ್ಲುವಾಟ.

[ಈ ಹಿಡಿಮ್ಬನನ್ನೇ  ಮುಂದೆ  ಭೀಮಸೇನ ಕೊಲ್ಲುವುದು]

No comments:

Post a Comment

ಗೋ-ಕುಲ Go-Kula