Saturday, 8 August 2020

ಮಹಾಭಾರತ ತಾತ್ಪರ್ಯನಿರ್ಣಯ, ಕನ್ನಡದಲ್ಲಿ 17: 213 - 220

ವಿಧಾಯ ಭಕ್ತವಾಞ್ಚಿತಂ ಪ್ರಿಯಾಸಹಾಯ ಈಶ್ವರಃ ।

ಪ್ರಗೃಹ್ಯ ತಂ ಮಹಾಮಣಿಂ ವಿನಿರ್ಯಯೌ ಗುಹಾಮುಖಾತ್ ॥೧೭.೨೧೩॥

ಭಗವಂತ ತನ್ನ ಭಕ್ತನಾದ ಜಾಂಬವಂತನ ಬಯಕೆಯ  ಪೂರೈಸಿದ ,

ಜಾಂಬವತಿ ಜೊತೆಯಾಗಿ ಸ್ಯಮಂತಕದೊಂದಿಗೆ ಗುಹೆ ಹೊರಬಂದ .

 

ಗುಹಾಪ್ರವಿಷ್ಟಮೀಶ್ವರಂ ಬಹೂನ್ಯಹಾನ್ಯನಿರ್ಗ್ಗತಮ್ ।

ಪ್ರತೀಕ್ಷ್ಯ ಯಾದವಾಸ್ತು ಯೇ ಗತಾ ಗೃಹಂ ತದಾsಹೃಷುಃ ॥೧೭.೨೧೪॥

ಕೃಷ್ಣ ಗುಹೆಯ ಒಳಹೋಗಿ ಅನೇಕ ದಿನಗಳು ಗತಿಸಿತ್ತು ,

ಆತುರದಿ ಕಾಯ್ದ ಯಾದವರನ್ನು ಕಾಲ ಮನೆಗೆ ಕಳಿಸಿತ್ತು,

ಹಿಂದಿರುಗಿದ ಶ್ರೀಕೃಷ್ಣನ ಕಂಡವರಿಗೆ ಸಂತಸ ಆವರಿಸಿತ್ತು.

 

ಸಮಸ್ತವೃಷ್ಣಿಸನ್ನಿಧೌ ಯದೂತ್ತಮಃ ಸ್ಯಮನ್ತಕಮ್ ।

ದದೌ ಚ ಸತ್ರಜಿತ್ಕರೇ ಸ ವಿಚ್ಛವಿರ್ಬಭೂವ ಹ ॥೧೭.೨೧೫॥

ಎಲ್ಲಾ ಯಾದವರ ಸಮ್ಮುಖದಲ್ಲಿ ಶ್ರೀಕೃಷ್ಣ ,

ಸ್ಯಮಂತಕವ ಸತ್ರಜಿತಗೆ ಮಾಡಿದ ಪ್ರದಾನ ,

ಸತ್ರಜಿತನಾಗಿದ್ದ ಈ ಘಟನೆಗಳಿಂದ ಕಾಂತಿಹೀನ .

 

ಸ ದುರ್ಯ್ಯಶೋ ರಮಾಪತಾವನೂಚ್ಯ ಮಿತ್ಥ್ಯಯಾ ತಪನ್ ।

ಸ್ವಪಾಪಹಾನಕಾಙ್ಕ್ಷಯಾ ದದೌ ಸುತಾಂ ಜನಾರ್ದ್ದನೇ ॥೧೭.೨೧೬॥

ಸತ್ರಾಜಿತಗೆ ತನ್ನ ಮಾತಿಂದ ಕೃಷ್ಣಗೆ ಅಪವಾದ ಬಂದಿದ್ದಕ್ಕೆ ಆಗಿತ್ತು ಪಶ್ಚಾತ್ತಾಪ ,

ದೋಷ ಪರಿಹಾರವಾಗಲೆಂದು ಮಗಳುಭಾಮೆಯ ಕೊಟ್ಟ  ಸತ್ರಾಜಿತ ಭೂಪ .

 

ಮಣಿಂ ಚ ತಂ ಪ್ರದಾಯ ತಂ ನನಾಮ ಹ ಕ್ಷಮಾಪಯನ್ ।

ಮಣಿಂ ಪುನರ್ದ್ದದೌ ಹರಿರ್ಮ್ಮುಮೋದ ಸತ್ಯಭಾಮಯಾ ॥೧೭.೨೧೭॥

ಸ್ಯಮಂತಕ ಮಣಿಯನ್ನು ಕೃಷ್ಣಗಿತ್ತ ಸತ್ರಾಜಿತ ,

ಕೃಷ್ಣಪಾದಕ್ಕೆರಗಿದ ಅವನ ಕ್ಷಮೆ ಕೋರುತ್ತಾ ,

ಭಾಮೆಯ ವರಿಸಿ ಮಣಿಯ ಹಿಂತಿರುಗಿ ಇತ್ತ .

 

ರಮೈವ ಸಾ ಹಿ ಭೂರಿತಿ ದ್ವಿತೀಯಮೂರ್ತ್ತಿರುತ್ತಮಾ ।

ಬಭೂವ ಸತ್ರಜಿತ್ಸುತಾ ಸಮಸ್ತಲೋಕಸುನ್ದರೀ ॥೧೭.೨೧೮॥

ಸತ್ಯಭಾಮೆಯೂ ಲಕ್ಷ್ಮಿಯ ಭೂ ರೂಪವಾಗಿದ್ದವಳು ,

ಲೋಕಸುಂದರಿಯಾದವಳು ಸತ್ರಜಿತನ ಮಗಳಾಗಿದ್ದಳು .

 

ತತೋ ಹಿ ಸಾ ಚ ರುಗ್ಮಿಣೀ ಪ್ರಿಯೇ ಪ್ರಿಯಾಸು ತೇsಧಿಕಮ್ ।

ಜನಾರ್ದ್ದನಸ್ಯ ತೇ ಹರೇಃ ಸದಾsವಿಯೋಗಿನೀ ಯತಃ ॥೧೭.೨೧೯॥

ಹೀಗಾಗಿ ಸತ್ಯಭಾಮ ರುಗ್ಮಿಣಿಯರಿಗೆ ಕೃಷ್ಣಪ್ರೀತಿಯ ಬಹುಭಾಗ ,

ಅವನೊಂದಿಗೇ ಇರುವ ಅವರಿಗೆ(ಲಕ್ಷ್ಮಿ) ಎಂದೂ ಇಲ್ಲ ವಿಯೋಗ .

 

ಅಥಾsಪ ಸಾಮ್ಬನಾಮಕಂ ಸುತಂ ಚ ರೋಹಿಣೀ ಹರೇಃ ।

ಚತುರ್ಮ್ಮುಖಾಂಶಸಂಯುತಂ ಕುಮಾರಮೇವ ಷಣ್ಮುಖಮ್ ॥೧೭.೨೨೦॥

ಆನಂತರ ಕೃಷ್ಣ ರೋಹಿಣಿ (ಜಾಂಬವತಿ)ಯರಲ್ಲಿ ,

ಬ್ರಹ್ಮಾಂಶದ ಸಾಂಬನೆಂಬವ ಹುಟ್ಟಿಬಂದನಲ್ಲಿ ,

ಷಣ್ಮುಖ(ಸ್ಕಂದ) ಅವನೇ ಗಮನಿಸಬೇಕಾದ್ದಿಲ್ಲಿ .

[1] ಶ್ರೀ, ಭೂ, ದುರ್ಗಾ ಎನ್ನುವುದು ಶ್ರೀಲಕ್ಷ್ಮಿಯ ಮೂರು ರೂಪಗಳು

[Contributed by Shri Govind Magal]

No comments:

Post a Comment

ಗೋ-ಕುಲ Go-Kula