Tuesday, 25 August 2020

ಮಹಾಭಾರತ ತಾತ್ಪರ್ಯನಿರ್ಣಯ, ಕನ್ನಡದಲ್ಲಿ 18: 19 - 29

 ಅನ್ಯೇ ಭಾಗವತತ್ವೇsಪಿ ಖಿನ್ನಧರ್ಮ್ಮಾಃ ಕ್ವಚಿತ್ಕ್ವಚಿತ್ ।

ಸ್ಯಮನ್ತಕಾರ್ತ್ಥೇ ರಾಮೋsಪಿ ಕೃಷ್ಣಸ್ಯ ವಿಮನಾsಭವತ್ ॥೧೮.೧೯॥

ಭೀಮಸೇನ ದ್ರೌಪದಿಯರು ಸದಾ ಪರಮಭಾಗವತರು ,

ಅನ್ಯರು ಭಾಗವತರಾದರೂ ಕೆಲವೊಮ್ಮೆ  ಎಡವಿದವರು,

ಸ್ಯಮಂತಕದ ವಿಚಾರದಿ ಮನಕೆಡಿಸಿಕೊಂಡರು ಬಲರಾಮದೇವರು.

 

ಅವಮೇನೇsರ್ಜ್ಜುನಃ ಕೃಷ್ಣಂ ವಿಪ್ರಸ್ಯ ಶಿಷುರಕ್ಷಣೇ ।

ಪ್ರದ್ಯುಮ್ನ ಉದ್ಧವಃ ಸಾಮ್ಬೋsನಿರುದ್ಧಾದ್ಯಾಶ್ಚ ಸರ್ವಶಃ ॥೧೮.೨೦॥

ಹರೇರಿಷ್ಟಂ ಸುಭದ್ರಾಯಾಃ ಫಲ್ಗುನೇ ದಾನಮಞ್ಜಸಾ ।

ಜ್ಞಾತ್ವಾsಪಿ ರುರುಧುಃ ಸಮ್ಯಕ್ ಸಾತ್ಯಕಿಃ ಕೃಷ್ಣಸಮ್ಮಿತಮ್ ॥೧೮.೨೧॥

ಬ್ರಾಹ್ಮಣನ ಮಕ್ಕಳನ್ನು ರಕ್ಷಿಸುವ ಸಂದರ್ಭದಲ್ಲಿ ಅರ್ಜುನ ,

ಬಲರಾಮ ಕೃಷ್ಣರಿಗಾಯಿತು ಅರ್ಜುನನಿಂದ ಅವಮಾನ .

ಸುಭದ್ರೆಯನ್ನು ಅರ್ಜುನನಿಗೆ ಕೊಡಬೇಕೆಂದೇ ಇತ್ತು (ಭಗವಂತನ) ಕೃಷ್ಣನ ಚಿತ್ತ ,

ಅದನ್ನ ತಿಳಿದೂ ಪ್ರದ್ಯುಮ್ನ ಉದ್ಧವ ಸಾಂಬ ಅನಿರುದ್ಧರು ಮುಂದಾದರು ತಡೆಯುವತ್ತ.

ಸಾತ್ಯಕಿಯೂ ಒಮ್ಮೊಮ್ಮೆ ಅಂದುಕೊಳ್ಳುತ್ತಿದ್ದ ಅರ್ಜುನ ಶ್ರೀಕೃಷ್ಣನ ಸಮಾನ ಅಂತ .

 

ಕದಾಚಿನ್ಮನ್ಯತೇ ಪಾರ್ತ್ಥಂ ಧರ್ಮ್ಮಜೋsಪಿ ನರಂ ಹರಿಮ್ ।

ಮತ್ವಾsಬಿಭೇಜ್ಜರಾಸನ್ಧವಧೇ ಕೃಷ್ಣಮುದೀರಿತುಮ್ ॥೧೮.೨೨॥

ಧರ್ಮರಾಜಗೂ ಪರಮಾತ್ಮ ಕೃಷ್ಣ ಮಾನವ ಎಂಬ ಮನಸ್ಥಿತಿ ,

ಜರಾಸಂಧನ ವಧಾಸಮಯದಲ್ಲವನ ಕಳುಹಿಸಲು ಇತ್ತು ಭೀತಿ .

 

ಬನ್ಧನಂ ಶಙ್ಕಮಾನೋ ಹಿ ಕೃಷ್ಣಸ್ಯ ವಿದುರೋsಪಿ ತು  ।

ಕೌರವೇಯಸಭಾಮದ್ಧ್ಯೇ ನಾವತಾರಮರೋಚಯತ್ ॥೧೮.೨೩॥

ವಿದುರನೂ ಕೃಷ್ಣನನ್ನು ಕೌರವರು ಬಂಧಿಸಬಹುದೆಂದು ಭಯಪಟ್ಟ ,

ಹಾಗಾಗೇ ಕೌರವರ ಸಭೆಗೆ ಕೃಷ್ಣ ಬರುವುದು ಆಗಲಿಲ್ಲ ಅವನಿಗಿಷ್ಟ .

 

ನಕುಲಃ ಕರದಾನಾಯ ಪ್ರೇಷಯಾಮಾಸ ಕೇಶವೇ ।

ಅವಮೇನೇ ಹರೇರ್ಬುದ್ಧಿಂ ಸಹದೇವಃ ಕುಲಕ್ಷಯಾತ್ ॥೧೮.೨೪ ॥

ನಕುಲ ಶ್ರೀಕೃಷ್ಣನಿಂದಲೇ ಕಪ್ಪ ವಸೂಲಿ ಮಾಡಲು ಭೃತ್ಯರ  ಕಳಿಸಿದ ,

ಸಹದೇವ ಕುಲಕ್ಷಯ ಕಂಡು ಕೃಷ್ಣ ಚಿತ್ತವನ್ನೇ ಅವಮಾನ ಮಾಡಿದ .

 

ದೇವಕೀವಸುದೇವಾದ್ಯಾ ಮೇನಿರೇ ಮಾನುಷಂ ಹರಿಮ್ ।

ಭೀಷ್ಮಸ್ತು ಭಾರ್ಗ್ಗವಂ ರಾಮಮವಮೇನೇ ಯುಯೋಧ ಚ ॥೧೮.೨೫ ॥

ವಸುದೇವ ದೇವಕಿಯರದು ಕೃಷ್ಣ ಮನುಷ್ಯನೆಂಬ ಮನಸ್ಥಿತಿ ,

ಭೀಷ್ಮರದೋ ಪರಶುರಾಮರನ್ನೇ ಅವಮಾನಿಸಿದ ಯುದ್ಧನೀತಿ .

 

ದ್ರೋಣಕರ್ಣ್ಣದ್ರೌಣಿಕೃಪಾಃ ಕೃಷ್ಣಾಭಾವೇ ಮನೋ ದಧುಃ ।

ದೇವಾಃ ಶಿವಾದ್ಯಾ ಅಪಿ ತು ವಿರೋಧಂ ಚಕ್ರಿರೇ ಕ್ವಚಿತ್ ॥೧೮.೨೬ ॥

ದ್ರೋಣಾಚಾರ್ಯರು, ಕರ್ಣ, ಅಶ್ವತ್ಥಾಮ ಮತ್ತು ಕೃಪ,

ಎಲ್ಲರದಾಗಿತ್ತು ಕೃಷ್ಣನ ಮುಗಿಸಿಬಿಡಬೇಕೆಂಬ ಸಂಕಲ್ಪ .

ರುದ್ರಾದಿ ದೇವತೆಗಳಿಗೂ ಒಮ್ಮೊಮ್ಮೆ ,

ಆವರಿಸಿತ್ತು  ಕೃಷ್ಣವಿರೋಧದ ಭ್ರಮೆ .

 

ಋಷಿಮಾನುಷಗನ್ಧರ್ವಾ ವಕ್ತವ್ಯಾಃ ಕಿಮತಃ ಪರಮ್ ।

ಜನ್ಮಜನ್ಮಾನ್ತರೇsಜ್ಞಾನಾದವಜಾನನ್ತಿ ಯತ್ ಸದಾ ॥೧೮.೨೭॥

ದೇವತೆಗಳದ್ದೇ ಹೀಗಿದ್ದರೆ ಮತಿ ,

ಮನುಷ್ಯ ಗಂಧರ್ವರದಿನ್ನೇನು ಗತಿ .

ದೈವವಿರೋಧಕ್ಕಿರುವ ಜನ್ಮಾಂತರದ ಅಜ್ಞಾನ ,

ಮಾಡೇ ಮಾಡಿಸುತ್ತದವರಿಂದ ದೈವದವಮಾನ .

 

ತಸ್ಮಾದೇಕೋ ವಾಯುರೇವ ಧರ್ಮ್ಮೇ ಭಾಗವತೇ ಸ್ಥಿರಃ ।

ಲಕ್ಷ್ಮೀಃ ಸರಸ್ವತೀ ಚೇತಿ ಪರಶುಕ್ಲತ್ರಯಂ ಶ್ರುತಮ್ ॥೧೮.೨೮ ॥

ಹಾಗಾಗಿ ಮುಖ್ಯಪ್ರಾಣನೊಬ್ಬನೇ ಭಾಗವತ ಧರ್ಮದಲ್ಲಿ ಸದಾ ಸ್ಥಿರ ,

ಅದರಂತೆಯೇ ಮಹಾಲಕ್ಷ್ಮೀ ಸರಸ್ವತೀದೇವಿಯರದೂ ಅದೇ ತೆರ ,

ಈ ಮೂವರದೂ ಭಗವದ್ವಿಷಯದಲ್ಲಿ ದೋಷವಿರದ ಜ್ಞಾನಧಾರ .

 

ಸರ್ವಮೇತಚ್ಚ ಕಥಿತಂ ತತ್ರತತ್ರಾಮಿತಾತ್ಮನಾ ।

ವ್ಯಾಸೇನೈವ ಪುರಾಣೇಷು ಭಾರತೇ ಚ ಸ್ವಸಂವಿದಾ ॥೧೮.೨೯॥

ಇದೆಲ್ಲವನ್ನೂ ಅಮಿತ ಬುದ್ಧಿಯ ಭಗವಂತ ,

ವೇದವ್ಯಾಸರಾಗಿ ಪುರಾಣ ಭಾರತಗಳಲ್ಲಿಟ್ಟಾತ,

ಸ್ವರೂಪಜ್ಞಾನದಿಂದ ತಾನು ಹೇಳಿದ್ದು ಸರ್ವವಿದಿತ.

No comments:

Post a Comment

ಗೋ-ಕುಲ Go-Kula