Sunday 9 August 2020

ಮಹಾಭಾರತ ತಾತ್ಪರ್ಯನಿರ್ಣಯ, ಕನ್ನಡದಲ್ಲಿ 17: 221 - 227

 ಇತಿ ಪ್ರಶಾಸತಿ ಪ್ರಭೌ ಜಗಜ್ಜನಾರ್ದ್ದನೇsಖಿಲಮ್ ।

ಅಗಣ್ಯಸದ್ಗುಣಾರ್ಣ್ಣವೇ ಕದಾಚಿದಾಯಯೌ ದ್ವಿಜಃ ॥೧೭.೨೨೧॥

ಹೀಗೆ ಸರ್ವೋತ್ತಮನಾದ,ಭಕ್ತರ ಸಂಸಾರಚಕ್ರದಿಂದ ಕಳಚುವನಾದ ನಾರಾಯಣ ,

ಅಗಣಿತ ಗುಣಸಾಗರನು ರಾಜ್ಯಭಾರ ಮಾಡುತಿರಲು ಬಂದನು ಒಬ್ಬ ಬ್ರಾಹ್ಮಣ .

 

ಜನಾರ್ದ್ದನಃ ಸ ನಾಮತೋ ರಮೇಶಪಾದಸಂಶ್ರಯಃ ।

ಸ ಮಾನಿತಶ್ಚ ವಿಷ್ಣುನಾ ಪ್ರಣಮ್ಯ ವಾಕ್ಯಮಬ್ರವೀತ್ ॥೧೭.೨೨೨॥

ಆತನ ಹೆಸರು ಜನಾರ್ದನ ಅಂತ ,

ಕೃಷ್ಣನ ನಂಬಿ ಭಕ್ತನಾಗಿ ಬದುಕಿದ್ದಾತ .

ಆದನಂತರ ಭಗವಂತನಿಂದ ಮಾನಿತ ,

ನಮಸ್ಕರಿಸಿ ಕೃಷ್ಣಗೆ ಹೇಳುತ್ತಾನೆ ಮಾತ .

 

ಕ್ಷಮಸ್ವ ಮೇ ವಚಃ ಪ್ರಭೋ ಬ್ರವೀಮ್ಯತೀವ ಪಾಪಕಮ್ ।

ಯತಃ ಸುಪಾಪದೂತಕಸ್ತತೋ ಹಿ ತಾದೃಶಂ ವಚಃ ॥೧೭.೨೨೩॥

ಪ್ರಭು , ನಾನು ಹೇಳುವ ಪಾಪಿಷ್ಟ ಮಾತನ್ನ ಕ್ಷಮಿಸಿಬಿಡು ,

ಪಾಪಿಷ್ಟರ ದೂತನಾದ್ದರಿಂದ ಮಾತೂ ಹಾಗಿದೆ ನೋಡು .

 

ನ ತೇsಸ್ತ್ಯಗೋಚರಂ ಕ್ವಚಿತ್ ತಥಾsಪಿ ಚಾsಜ್ಞಯಾ ವದೇ ।

ವದೇತಿ ಚೋದಿತೋsಮುನಾ ದ್ವಿಜೋ ಜಗಾದ ಮಾಧವಮ್ ॥೧೭.೨೨೪॥

ನಿನಗೆ ತಿಳಿಯಲಾರದ್ದು ಯಾವುದಿದೆ ಇನ್ನು ,

ನಿನ್ನ ಆಜ್ಞೆಯಿದ್ದರೆ ಮಾತ್ರ ಹೇಳುತ್ತೇನೆ ನಾನು ,

ಕೃಷ್ಣನೊಪ್ಪಿದ ಮೇಲೆ ಬ್ರಾಹ್ಮಣ ಹೇಳುವನು .

 

ಸುತೌ ಹಿ ಸಾಲ್ವಭೂಪತೇರ್ಬಭೂವತುಃ ಶಿವಾಶ್ರಯೌ ।

ಶಿವಪ್ರಸಾದಸಮ್ಭವೌ ಪಿತುಸ್ತಪೋಬಲೇನ ತೌ ॥೧೭.೨೨೫॥

ಶಿವಭಕ್ತ ಸಾಲ್ವರಾಜಗೆ ಮಕ್ಕಳು ಆಗಿದ್ದು ಇಬ್ಬರು ,

ತಂದೆಯ ತಪೋಬಲ ಶಿವಾನುಗ್ರಹದಿಂದ ಆಶ್ರಿತರು ,

(ಇವರೇ ಹಂಸ ಮತ್ತು  ಡಿಭಕರೆಂದು ಹೆಸರಾದವರು).

 

ಅಜೇಯವದ್ಧ್ಯತಾಂ ಚ ತೌ ಶಿವಾದ್ ವರಂ ಸಮಾಪತುಃ ।

ಜರಾಸುತಸ್ಯ ಶಿಷ್ಯಕೌ ತಪೋಬಲೇನ ಕೇವಲಮ್ ॥೧೭.೨೨೬॥

ಜರಾಸಂಧನ ಶಿಷ್ಯರಾಗಿದ್ದ ಅವರಿಗೆ ,

ಅಜೇಯತ್ವ,ಅವಧ್ಯತ್ವದ ವರವಿತ್ತವರಿಗೆ .

 

ಮಹೋದರಂ ಚ ಕುಣ್ಡಧಾರಿಣಂ ಚ ಭೂತಕಾವುಭೌ ।

ತಥಾsಜಿತಾವವದ್ಧ್ಯಕೌ ದಿದೇಶ ಶಙ್ಕರಸ್ತಯೋಃ ॥೧೭.೨೨೭॥

ಅವರ ತಪೋಬಲಕ್ಕೆ ಮೆಚ್ಚಿದ ಸದಾಶಿವ ,

ಮಹೋದರ ಕುಂಡಧಾರಿ ಭೂತಗಳ ಕೊಟ್ಟನವ ,

ಆ ಭೂತಗಳಿಗಿತ್ತು ಅಜೇಯತ್ವ ಮತ್ತು ಅವಧ್ಯತ್ವ .

No comments:

Post a Comment

ಗೋ-ಕುಲ Go-Kula