ವಿಕ್ರೀಡತೋ ಧರ್ಮ್ಮಸೂನೋಸ್ತದೈವ ಸಹಾಙ್ಗುಲಿಯೇನ ಚ ಕನ್ದುಕೋsಪತತ್ ।
ಕೂಪೇ ನ ಶೇಕುಃ ಸಹಿತಾಃ ಕುಮಾರಾ ಉದ್ಧರ್ತ್ತುಮೇತಂ ಪವನಾತ್ಮಜೋsವದತ್ ॥೧೫.೨೬॥
ಆಡುತ್ತಿದ್ದ
ಧರ್ಮರಾಜನ ಉಂಗುರದೊಂದಿಗೆ ಚೆಂಡೂ ಬಾವಿಗೆ ಬಿತ್ತು,
ಎಲ್ಲ ಕುಮಾರರೂ
ಎತ್ತಲು ಅಸಮರ್ಥರಾದಾಗ ಭೀಮನಾಡಿದ ಮಾತು.
ನಿಷ್ಪತ್ಯ ಚೋದ್ಧೃತ್ಯ ಸಮುತ್ಪತಿಷ್ಯೇ ಕೂಪಾದಮುಷ್ಮಾದ್ ಭೃಶನೀಚಾದಪಿ ಸ್ಮ ।
ಸಕನ್ದುಕಾಂ ಮುದ್ರಿಕಾಂ ಪಶ್ಯತಾದ್ಯ ಸರ್ವೇ ಕುಮಾರಾ ಇತಿ
ವೀರ್ಯ್ಯಸಂಶ್ರಯಾತ್ ॥೧೫.೨೭॥
ನೋಡಿರೆಲ್ಲ -ಈ ಬಾವಿಯಿದೆ
ಅತ್ಯಂತ ಆಳ,
ನನ್ನಲ್ಲಿದೆ ಚೆಂಡು
ಉಂಗುರ ಎತ್ತಿ ತರುವ ಬಲ.
ತದಾ ಕುಮಾರಾನವದತ್ ಸ ವಿಪ್ರೋ ಧಿಗಸ್ತ್ರಬಾಹ್ಯಾಂ ಭವತಾಂ
ಪ್ರವೃತ್ತಿಮ್ ।
ಜಾತಾಃ ಕುಲೇ ಭರತಾನಾಂ ನ ವಿತ್ಥ ದಿವ್ಯಾನಿ ಚಾಸ್ತ್ರಾಣಿ
ಸುರಾರ್ಚ್ಚಿತಾನಿ ॥೧೫.೨೮॥
ಇದನ್ನು ನೋಡಿ
ನುಡಿಯುತ್ತಾರೆ ದ್ರೋಣಾಚಾರ್ಯ,
ಅಸ್ತ್ರವ ಬಿಟ್ಟ
ನಿಮ್ಮ ಪ್ರಯತ್ನದ ಪ್ರವೃತ್ತಿಗೆ ಧಿಕ್ಕಾರ.
ನೀವು ಹುಟ್ಟಿದ್ದು
ಉತ್ಕೃಷ್ಟವಾದ ಭರತ ಕುಲ,
ದೇವತಾರ್ಚಿತವಾದ
ಅಸ್ತ್ರಗಳ ನೀವು ತಿಳಿದಿಲ್ಲ.
ಇತೀರಿತಾ ಅಸ್ತ್ರವಿದಂ ಕುಮಾರಾ ವಿಜ್ಞಾಯ ವಿಪ್ರಂ ಸುರಪೂಜ್ಯಪೌತ್ರಮ್
।
ಸಮ್ಪ್ರಾರ್ತ್ಥಯಾಮಾಸುರಥೋದ್ಧೃತಿಂ ಪ್ರತಿ
ಪ್ರಧಾನಮುದ್ರಾಯುತಕನ್ದುಕಸ್ಯ ॥೧೫.೨೯॥
ಈರೀತಿ ಕುಮಾರರು
ಕೇಳಿಸಿಕೊಂಡರು ದ್ರೋಣರ ಆ ಮಾತ,
ಅರಿವಾಯಿತವರಿಗೆ
ಬೃಹಸ್ಪತಿ ಮೊಮ್ಮಗ ಬ್ರಾಹ್ಮಣ ಅಸ್ತ್ರವೇತ್ತ.
ಬೇಡಿಕೊಂಡರು
-ಉಂಗುರ ಚೆಂಡನ್ನು ಎತ್ತಿ ಕೊಡಿರಿ ಅಂತ.
ಸ ಚಾsಶ್ವಿಷೀಕಾಭಿರಥೋತ್ತರೋತ್ತರಂ
ಸಮ್ಪ್ರಾಸ್ಯ ದಿವ್ಯಾಸ್ತ್ರಬಲೇನ ಕನ್ದುಕಮ್ ।
ಉದ್ಧೃತ್ಯ ಮುದ್ರೋದ್ಧರಣಾರ್ತ್ಥಿನಃ ಪುನರ್ಜ್ಜಗಾದ ಭುಕ್ತಿರ್ಮ್ಮಮ
ಕಲ್ಪ್ಯತಾಮಿತಿ ॥೧೫.೩೦॥
ದ್ರೋಣರು ಮಾಡಿದರು
ದರ್ಭೆಗಳ ಬಳಕೆ,
ದಿವ್ಯಾಸ್ತ್ರ
ಬಲದಿಂದಾಯ್ತು ಚೆಂಡೆತ್ತುವಿಕೆ.
ಉಂಗುರವನ್ನೂ
ಎತ್ತಲು ಧರ್ಮರಾಜ ಬಯಸಿದ,
ಜೀವನೋಪಾಯಕ್ಕೆ ಬೇಡಿಕೆ ಆಗ ದ್ರೋಣರಿಂದ.[Contributed by Shri Govind Magal]
No comments:
Post a Comment
ಗೋ-ಕುಲ Go-Kula