ಏವಂ ವಿಚಿನ್ತ್ಯಾಪ್ರತಿಮಃ ಸ ಭಾರ್ಗ್ಗವೋ ಬಭಾಷ ಈಷತ್ಸ್ಮಿತಶೋಚಿಷಾ
ಗಿರಾ ।
ಅನನ್ತಶಕ್ತಿಃ ಸಕಲೇಶ್ವರೋsಪಿ ತ್ಯಕ್ತಂ ಸರ್ವಂ ನಾದ್ಯ ವಿತ್ತಂ ಮಮಾಸ್ತಿ ॥೧೫.೧೬॥
ಹೀಗೆ ಸಾಗಿತ್ತು
ಪರಶುರಾಮ ದೇವರ ಆಲೋಚನೆ,
ತಿಳಿಸಲಳವೇ
ಅವನನ್ನು ಯಾರದಾದ್ರೂ ವಿವೇಚನೆ.
ಮುಗುಳ್ನಗುತ್ತಾ
ನುಡಿದ ಜಗದೊಡೆಯ ಸರ್ವಶಕ್ತ,
ಎಲ್ಲವ ಬಿಟ್ಟಿರುವ
ನಾನೀಗ ಸಂಪತ್ತಿಂದಲೂ ತ್ಯಕ್ತ.
ಆತ್ಮಾ ವಿದ್ಯಾ ಶಸ್ತ್ರಮೇತಾವದಸ್ತಿ ತೇಷಾಂ ಮದ್ಧ್ಯೇ ರುಚಿತಂ ತ್ವಂ
ಗೃಹಾಣ ।
ಉಕ್ತಃ ಸ ಇತ್ಥಂ ಪ್ರವಿಚಿನ್ತ್ಯ ವಿಪ್ರೋ ಜಗಾದ ಕಸ್ತ್ವದ್ಗ್ರಹಣೇ
ಸಮರ್ತ್ಥಃ ॥೧೫.೧೭॥
ನಾನು, ಪರವಿದ್ಯೆ ಹಾಗೂ ನನ್ನ ಅಸ್ತ್ರ,
ನನ್ನಲ್ಲಿರುವುದು ಈ
ಮೂರು ಮಾತ್ರ.
ಈ ಮೂರರಲ್ಲಿ
ನಿಂಗಾವುದಿಷ್ಟ ಎಂದ ಪರಶುರಾಮ,
ದ್ರೋಣರ ಯೋಚನೆ
-ಇವನೆಲ್ಲದರ ಸಾರ್ವಭೌಮ.
ಸರ್ವೇಶಿತಾ ಸರ್ವಪರಃ ಸ್ವತನ್ತ್ರಸ್ತ್ವಮೇವ ಕೋsನ್ಯಃ ಸದೃಶಸ್ತವೇಶ ।
ಸ್ವಾಮ್ಯಂ ತವೇಚ್ಛನ್ ಪ್ರತಿಯಾತ್ಯಧೋ ಹಿ ಯಸ್ಮಾನ್ನಚೋತ್ಥಾತುಮಲಂ
ಕದಾಚಿತ್ ॥೧೫.೧೮॥
ನೀನು ಎಲ್ಲರೊಡೆಯ
ಮಿಗಿಲಾದ ಸರ್ವೇಶ,
ಎಲ್ಲರೂ ಎಲ್ಲವೂ
ಯಾವಾಗಲೂ ನಿನ್ನ ವಶ.
ನಿನಗೆ ಯಾರಿದ್ದಾರೆ
ಹೇಳು ಸಮಾನ,
ಸಾಮ್ಯ ಬಯಸುವವಗೆ
ಅಂಧಂತಮಸ್ಸಿನ ಸ್ಥಾನ,
ಮತ್ತೆ ಮೇಲೇಳಲಾಗದ
ಗತಿಯದು ಬಲು ಹೀನ.
ಸರ್ವೋತ್ತಮಸ್ಯೇಶ ತವೋಚ್ಚಶಸ್ತ್ರೈಃ ಕಾರ್ಯ್ಯಂ
ಕಿಮಸ್ಮಾಕಮನುದ್ಬಲಾನಾಮ್ ।
ವಿದ್ಯೈವ ದೇಯಾ ಭವತಾ ತತೋsಜ ಸರ್ವಪ್ರಕಾಶಿನ್ಯಚಲಾ ಸುಸೂಕ್ಷ್ಮಾ ॥೧೫.೧೯॥
ನಿನ್ನ ಉತ್ಕೃಷ್ಟ
ಶಸ್ತ್ರಗಳಿಂದ ಏನು ಪ್ರಯೋಜನ,
ಬಳಸಲು ನಮ್ಮಲ್ಲಿ
ಎಲ್ಲಿದೆ ಬುದ್ಧಿ ಮತ್ತು ತ್ರಾಣ.
ಹಾಗಾಗಿ ಇರಲಿ
ಸರ್ವಶಕ್ತ ಸರ್ವಪ್ರೇರಕ ತತ್ವಜ್ಞಾನ.
ಇತೀರಿತಸ್ತತ್ತ್ವವಿದ್ಯಾದಿಕಾಃ ಸ ವಿದ್ಯಾಃ ಸರ್ವಾಃ ಪ್ರದದೌ
ಸಾಸ್ತ್ರಶಸ್ತ್ರಾಃ ।
ಅಬ್ದದ್ವಿಷಟ್ಕೇನ ಸಮಾಪ್ಯ ತಾಃ ಸ ಯಯೌ ಸಖಾಯಂ ದ್ರುಪದಂ ಮಹಾತ್ಮಾ
॥೧೫.೨೦॥
ಹೀಗಿತ್ತು
ಪರಶುರಾಮರಲ್ಲಿ ದ್ರೋಣಾಚಾರ್ಯರ ನಿವೇದನ,
ಭಗವಂತ ಮಾಡಿದ ಸಕಲ
ಅಸ್ತ್ರ ಶಸ್ತ್ರ ವಿದ್ಯೆಗಳ ಪ್ರದಾನ.
ಹನ್ನೆರಡು ವರ್ಷಕಾಲ
ಗುರುಗಳಲ್ಲಿ ದ್ರೋಣರ ವಾಸ- ವಿದ್ಯಾಭ್ಯಾಸ,
ವಿದ್ಯೆಗಳಿಸಿ ದ್ರೋಣರು ಹೊರಟರು ಗೆಳೆಯ ದ್ರುಪದನೆಡೆಗೆ
ಪ್ರವಾಸ.
No comments:
Post a Comment
ಗೋ-ಕುಲ Go-Kula