Tuesday, 17 December 2019

ಮಹಾಭಾರತ ತಾತ್ಪರ್ಯನಿರ್ಣಯ, ಕನ್ನಡದಲ್ಲಿ 14: 43 - 47


ಜಿತ್ವಾ ತಮೂರ್ಜ್ಜಿತಬಲಂ ಭಗವಾನಜೇಶಶಕ್ರಾದಿಭಿಃ ಕುಸುಮವರ್ಷಿಭಿರೀಡ್ಯಮಾನಃ ।
ರಾಮಾದಿಭಿಃ ಸಹಿತ ಆಶು ಪುರೀಂ ಪ್ರವಿಶ್ಯ ರೇಮೇsಭಿವನ್ದಿತಪದೋ ಮಹತಾಂ ಸಮೂಹೈಃ ॥೧೪.೪೩॥
ಪುಷ್ಪವೃಷ್ಟಿ ಮಾಡತಕ್ಕ ಬ್ರಹ್ಮ ರುದ್ರ ಇಂದ್ರಾದಿಗಳಿಂದ ಸ್ತುತ್ಯ,
ಉತ್ಕೃಷ್ಟ ಬಲದ ಜರಾಸಂಧನ ಸೋಲಿಸಿ ನಿಂದ ಭಗವಂತ.
ಬಲರಾಮ ಸಾತ್ಯಕಿ ಮೊದಲಾದವರ ಒಡಗೂಡಿದ ಮುಕುಂದ,
ಮಧುರಾ ಪ್ರವೇಶಿಸಿ ನಮಸ್ಕೃತನಾಗಿ ಹೊಂದಿದ ಆನಂದ.

ವರ್ದ್ಧತ್ಸು ಪಾಣ್ಡುತನಯೇಷು ಚತುರ್ದ್ದಶಂ ತು  ಜನ್ಮರ್ಕ್ಷಮಾಸ ತನಯಸ್ಯ ಸಹಸ್ರದೃಷ್ಟೇಃ ।
ಪ್ರತ್ಯಾಬ್ದಿಕಂ ಮುನಿಗಣಾನ್ ಪರಿವೇಷಯನ್ತೀ ಕುನ್ತೀ ತದಾssಸ ಬಹುಕಾರ್ಯ್ಯಪರಾ ನಯಜ್ಞಾ॥೧೪.೪೪॥
ಇತ್ತ ಪಾಂಡುಪುತ್ರರನ್ನು ಬೆಳೆಸುತ್ತಿರುವ ಕಾಲನಿಯಮ,
ಇಂದ್ರಪುತ್ರ ಅರ್ಜುನಗೆ ಹದಿನಾಕರ ಜನ್ಮನಕ್ಷತ್ರ ಸಂಭ್ರಮ.
ಪ್ರತೀವರ್ಷದಂತೆ ಮುನಿಸಮೂಹಕ್ಕೆ ಗೌರವ ಸಲ್ಲಿಕೆ,
ನಿರತಳು ಮುನಿಸೇವೆಯಲ್ಲಿ ಕುಂತೀದೇವಿಯಾಕೆ.

ತತ್ಕಾಲ ಏವ ನೃಪತಿಃ ಸಹ ಮಾದ್ರವತ್ಯಾ ಪುಂಸ್ಕೋಕಿಲಾಕುಲಿತಪುಲ್ಲವನಂ ದದರ್ಶ।
ತಸ್ಮಿನ್ ವಸನ್ತಪವನಸ್ಪರ್ಶೇಧಿತಃ ಸ ಕನ್ದರ್ಪ್ಪಮಾರ್ಗ್ಗಣವಶಂ ಸಹಸಾ ಜಗಾಮ ॥೧೪.೪೫॥
ಇತ್ತ ಪಾಂಡುರಾಜ ಮಾದ್ರಿಯೊಂದಿಗೆ ಕೂಡಿ ಕಾಡಲ್ಲಿ ಓಡಾಟ,
ಕೋಗಿಲೆನಾದ ವಸಂತದುನ್ಮಾದದಿಂದ ಪುಳಕಿತನಾದ ಆಟ.
ತಂಗಾಳಿ ಸ್ಪರ್ಶದಿಂದ ಅವನಲ್ಲಿ ಕಾಮೋನ್ಮಾದ,
ಶೀಘ್ರವೇ ಪಾಂಡು ಕಾಮಾತುರನಾಗಿಹೋದ.

ಜಗ್ರಾಹ ತಾಮಥ ತಯಾ ರಮಮಾಣ ಏವ ಯಾತೋ ಯಮಸ್ಯ ಸದನಂ ಹರಿಪಾದಸಙ್ಗೀ ।
ಪೂರ್ವಂ ಶಚೀರಮಣಮಿಚ್ಛತ ಏಷ ವಿಘ್ನಂ ಶಕ್ರಸ್ಯ ತದ್ದರ್ಶನೋಪಗತೋ ಹಿ ಚಕ್ರೇ ॥೧೪.೪೬॥
ತೇನೈವ ಮಾನುಷಮವಾಪ್ಯ ರತಿಸ್ಥ ಏವ ಪಞ್ಚತ್ವಮಾಪ ರತಿವಿಘ್ನಮಪುತ್ರತಾಂ ಚ ।
ಸ್ವಾತ್ಮೋತ್ತಮೇಷ್ವಥ ಸುರೇಷು ವಿಶೇಷತಶ್ಚ ಸ್ವಲ್ಪೋsಪಿ ದೋಷ ಉರುತಾಮಭಿಯಾತಿ ಯಸ್ಮಾತ್ ॥೧೪.೪೭॥
ಭಗವತ್ಪಾದಾಸಕ್ತ ಪಾಂಡು ಮಾದ್ರಿಯ ಸಂಗ ಮಾಡಿದ,
ಹಾಗೆ ಸೇರಿ ಸುಖಿಸುವಾಗಲೇ ಯಮದೇವನ ವಶವಾದ.
ಇದಕ್ಕೆ ಕಾರಣ ಅವನಿಗಿತ್ತು ಒಂದು ಋಷಿ ಶಾಪ,
ಇಂದ್ರಶಚಿಯರ ಮಿಲನಕ್ಕೆ ಭಂಗ ತಂದಿದ್ದ ಪಾಪ.
ಸಿಗಲಿಲ್ಲ ಅವನಿಗೆ ಪೂರ್ಣ ರತಿಸುಖ,
ಮಕ್ಕಳ ಹೊಂದುವಲ್ಲೂ ಆದ ವಿಮುಖ.
ದೇವತೆಗಳಲ್ಲಿ ಮಾಡುವ ಅಲ್ಪದೋಷ,
ತಂದುಕೊಟ್ಟಿತ್ತು ನೋವಿನ ಮರಣಪಾಶ.

No comments:

Post a Comment

ಗೋ-ಕುಲ Go-Kula