Sunday, 22 December 2019

ಮಹಾಭಾರತ ತಾತ್ಪರ್ಯನಿರ್ಣಯ, ಕನ್ನಡದಲ್ಲಿ 15: 06 - 10

ವ್ಯಾಸಾದವಾಪ ಪರಮಾತ್ಮಸತತ್ತ್ವವಿದ್ಯಾಂ ಧರ್ಮ್ಮಾತ್ಮಜೌsಪಿ ಸತತಂ ಭಗವತ್ಪ್ರಪನ್ನಾಃ ।
ತೇ ಪಞ್ಚ ಪಾಣ್ಡುತನಯಾ ಮುಮುದುರ್ನ್ನಿತಾನ್ತಂ ಸದ್ಧರ್ಮ್ಮಚಾರಿಣ ಉರುಕ್ರಮಶಿಕ್ಷಿತಾರ್ತ್ಥಾಃ  ॥೧೫.೦೬॥
ಧರ್ಮರಾಜ ಕೂಡಾ ವೇದವ್ಯಾಸರಿಂದ ಭಗವಂತನ ಪರತತ್ವ ವಿದ್ಯೆಯ ಪಡೆದ,
ಪಾಂಡವರೂ ಭಗವದಾಸಕ್ತರಾಗಿ ಧರ್ಮದಿ ಇರುತ್ತಾ ಹೊಂದಿದರು ಅಮಿತಾನಂದ.

ಯದಾ ಭರದ್ವಾಜಸುತಸ್ತ್ವಸಞ್ಚಯೀ ಪ್ರತಿಗ್ರಹೋಜ್ಝೋ ನಿಜಧರ್ಮ್ಮವರ್ತ್ತೀ ।
ದ್ರೌಣಿಸ್ತದಾ ಧಾರ್ತ್ತರಾಷ್ಟ್ರೈಃ ಸಮೇತ್ಯ ಕ್ರೀಡನ್ ಪಯಃ ಪಾತುಮುಪೈತಿ ಸದ್ಮ ॥೧೪.೦೭॥
ದ್ರೋಣರದು ಏನನ್ನೂ ಸಂಗ್ರಹಿಸಿಟ್ಟುಕೊಳ್ಳದ ದಾನರಹಿತವಾದ ಬ್ರಾಹ್ಮಣಧರ್ಮ,
ಪುತ್ರ ಅಶ್ವತ್ಥಾಮ ದುರ್ಯೋಧನಾದಿಗಳೊಂದಿಗೆ ಆಡುತ್ತಲಿದ್ದದು ಬಾಲಕನೇಮ,
ಹಾಗೆ ಆಡುವಾಗ ಹಾಲು ಕುಡಿಯಲೆಂದು ಮನೆಗೆ ಬರುತ್ತಿದ್ದದವನ ನಿತ್ಯಕರ್ಮ.

ತಸ್ಮೈ ಮಾತಾ ಪಿಷ್ಟಮಾಲೋಡ್ಯ ಪಾತುಂ ದದಾತಿ ಪೀತ್ವೈತಿ ತದೈಷ ನಿತ್ಯಮ್ ।
ಪೀತಕ್ಷೀರಾನ್ ಧಾರ್ತ್ತರಾಷ್ಟ್ರಾನ್ ಸ ಚೈತ್ಯ ಮಯಾ ಪೀತಂ ಕ್ಷೀರಮಿತ್ಯಾಹ ನಿತ್ಯಮ್ ॥೧೫.೦೮॥
ಹೀಗೆ ದಿನವೂ ಬರುತ್ತಿದ್ದ ಅಶ್ವತ್ಥಾಮನಿಗೆ ತಾಯಿಕೃಪಿ ಕೊಡುತ್ತಿದ್ದದು ಹಿಟ್ಟು ನೀರಿನ ಮಿಶ್ರಣ,
ಹಾಲು ಕುಡಿದುಬಂದ ದುರ್ಯೋಧನಾದಿಗಳಿಗೆ ನಾನೂ ಹಾಲುಕುಡಿದೆನೆಂದವನ ಅಂಬೋಣ.

ನೃತ್ಯನ್ತಮೇನಂ ಪಾಯಯಾಮಾಸುರೇತೇ ಪಯಃ ಕದಾಚಿತ್  ರಸಮಸ್ಯ ಸೋsವೇತ್ ।
ಪುನಃ ಕದಾಚಿತ್ ಸ ತು ಮಾತೃದತ್ತೇ ಪಿಷ್ಟೇ ನೇದಂ ಕ್ಷೀರಮಿತ್ಯಾರುರಾವ ॥೧೫.೦೯॥
ಹೀಗೆ ಹಿಟ್ಟಿನ್ಹಾಲು ಕುಡಿಯುತ್ತಿದ್ದ ಅಶ್ವತ್ಥಾಮಗೊಮ್ಮೆ ಆಯಿತು ದುರ್ಯೋಧನಾದಿಗಳಿಂದ ನೈಜ  ಹಾಲಸೇವನೆ,
ನಿಜ ಹಾಲಿನರುಚಿ ಉಂಡ ಅಶ್ವತ್ಥಾಮನಿಂದ ತಾಯಿ ಕೃಪಿಯೆದುರು ಇದು ಹಾಲಲ್ಲಾ ಎಂಬ ರೋದನೆ.

ದೃಷ್ಟ್ವಾ ರುವನ್ತಂ ಸುತಮಾತ್ಮಜಸ್ಯ ಸ್ನೇಹಾನ್ನಿಯತ್ಯೈವ ಜನಾರ್ದ್ದನಸ್ಯ ।
ಸಮ್ಪ್ರೇರಿತಃ ಕೃಪಯಾ ಚಾsರ್ತ್ತರೂಪೋ ದ್ರೋಣೋ ಯಯಾವಾರ್ಜ್ಜಯಿತುಂ ತದಾ ಗಾಮ್ ॥೧೫.೧೦ ॥
ಇದು ಅಶ್ವತ್ಥಾಮನ ಮನೆಯಲ್ಲಿ ಹಾಲು ತಂದಿಟ್ಟಂಥ  ಬವಣೆ,
ಇದರಿಂದ ಕೃಪಿಯಿಂದ ದ್ರೋಣರಿಗೆ ಹಸುಹೊಂದಲು ಪ್ರೇರಣೆ.
[Contributed by Shri Govind Magal] 

No comments:

Post a Comment

ಗೋ-ಕುಲ Go-Kula