Wednesday, 18 December 2019

ಮಹಾಭಾರತ ತಾತ್ಪರ್ಯನಿರ್ಣಯ, ಕನ್ನಡದಲ್ಲಿ 14: 76 - 80

ದುರ್ಯ್ಯೋಧನೇನ ಪೃಥುಮನ್ತ್ರಬಲೋಪಹೂತಾಂಸ್ತತ್ಸಾರಥಿಃ ಫಣಿಗಣಾನ್ ಪವನಾತ್ಮಜಸ್ಯ।
ಸುಪ್ತಸ್ಯ ವಿಸ್ತೃತ ಉರಸ್ಯಮುಚದ್ ವಿಶೀರ್ಣ್ಣದನ್ತಾ ಬಭೂವುರಮುಮಾಶು ವಿದಶ್ಯ ನಾಗಾಃ ॥೧೪.೭೬॥
ದುರ್ಯೋಧನ ಉಗ್ರಮಂತ್ರದಿಂದ ಕರೆದ ಹಾವುಗಳ ಸಮೂಹ,
ಸಾರಥಿಯಿಂದ ಭೀಮನೆದೆಮೇಲೆ ಹರಿಸಲ್ಪಟ್ಟ ಉರಗಪ್ರವಾಹ.
ಆ ಹಾವುಗಳಿಂದಾಯಿತು ಭೀಮಸೇನಗೆ ಕಡಿತ,
ಪರಿಣಾಮ ಆದದ್ದು ಹಾವುಗಳ ಹಲ್ಲುಮುರಿತ.

ಕ್ಷಿಪ್ತ್ವಾ ಸುದೂರಮುರುನಾಗವರಾನಥಾಷ್ಟೌ ತದ್ವಂಶಜಾನ್ ಸ ವಿನಿಹತ್ಯ ಪಿಪೀಲಿಕಾವತ್ ।
ಜಘ್ನೇ ಚ ಸೂತಮಪಹಸ್ತತ ಏವ ಭೀಮಃ ಸುಷ್ವಾಪ ಪೂರ್ವವದನುತ್ಥಿತ ಏವ ತಲ್ಪಾತ್ ॥೧೪.೭೭॥
ಭೀಮಸೇನ ಹಾಸಿಗೆ ಬಿಟ್ಟೇಳದೆ ಸುಮ್ಮನೇ  ಮಲಗಿದ್ದ,
ನಾಗಸಮೂಹವನ್ನು ಇರುವೆಗಳಂತೆ ಕೊಡವಿ ಕೊಂದ.
ಹರಿಬಿಟ್ಟ ದುರ್ಯೋಧನ ಸಾರಥಿಯ ಮುಗಿಸಿದ,
ಏನೂ ಆಗಿಲ್ಲವೇನೋ ಎಂಬಂತೆ ಮತ್ತೆ ಮಲಗಿದ.

ತತ್ ತಸ್ಯ ನೈಜಬಲಮಪ್ರಮಯಂ ನಿರೀಕ್ಷ್ಯ ಸರ್ವೇ ಕ್ಷಿತೀಶತನಯಾ ಅಧಿಕಂ ವಿಷೇದುಃ ।
ನಿಶ್ವಾಸತೋ ದರ್ಶನಾದಪಿ ಭಸ್ಮ ಯೇಷಾಂ ಭೂಯಾಸುರೇವ ಭುವನಾನಿ ಚ ತೇ ಮೃಷಾssಸನ್ ॥೧೪.೭೮॥
ಭೀಮಸೇನನದು ಸಹಜ ಬಲ ಮತ್ತದು ಅಗಾಧ,
ಏನೂ ಮಾಡಲಾಗದ ದುಷ್ಟಕೂಟಕ್ಕೆ ದುಃಖ ವಿಷಾದ.
ಯಾವ ಹಾವುಗಳಿಗೆ ಇತ್ತೋ ಉಸಿರು ನೋಟದಿಂದ ಲೋಕಭಸ್ಮ ಮಾಡುವ ಸಾಮರ್ಥ್ಯ,
ಅಂಥಾ ಹಾವುಗಳ ಪ್ರಯೋಗ ಭೀಮಸೇನನ ಮೇಲೆ ಆಗಿಹೋಯಿತು ಬರೀ ವ್ಯರ್ಥ.

ದದ್ಭಿರ್ವಿದಶ್ಯ ನ ವಿಕಾರಮಮುಷ್ಯ ಕರ್ತ್ತುಂ ಶೇಕುರ್ಭುಜಙ್ಗಮವರಾ ಅಪಿ ಸುಪ್ರಯತ್ನಾಃ ।
ಕಸ್ಯಾಪಿ ನೇದೃಶಬಲಂ ಶ್ರುತಪೂರ್ವಮಾಸೀತ್ ದೃಷ್ಟಂ ಕಿಮು ಸ್ಮ ತನಯೇsಪಿ ಹಿರಣ್ಯಕಸ್ಯ ॥೧೪.೭೯॥
ಆ ಹಾವುಗಳ ಕಚ್ಚುವಿಕೆಯಿಂದಲೂ ಭೀಮಗೆ ಆಗಲಿಲ್ಲ ಯಾವುದೇ ವಿಕಾರ,
ಹಿಂದೆ ಯಾರಲ್ಲೂ ಕೇಳದ ನೋಡದ ಬೃಹತ್ ಬಲದ ಸಹಜವಾದ ವ್ಯಾಪಾರ.
ಹಿಂದೆ ಹಾವುಗಳು ಕಚ್ಚಿ ಬದುಕುಳಿದ ಪ್ರಹ್ಲಾದನಲ್ಲೂ ಕಾಣದ ಬಲದ ಸಾರ.

ಸ್ವಾತ್ಮಾವನಾರ್ತ್ಥಮಧಿಕಾಂ ಸ್ತುತಿಮೇವ ಕೃತ್ವಾ ವಿಷ್ಣೋಃ ಸ ದೈತ್ಯತನಯೋ ಹರಿಣಾsವಿತೋsಭೂತ್ ।
ನತ್ವೌರಸಂ ಬಲಮಮುಷ್ಯ ಸ ಕೃಷ್ಯತೇ ಹಿ ಭೃತ್ಯೈರ್ಬಲಾತ್ ಸ್ವಪಿತುರೌರಸಮಸ್ಯ ವೀರ್ಯ್ಯಮ್ ॥೧೪.೮೦॥
ದೈತ್ಯ ಹಿರಣ್ಯಕಶಿಪುವಿನ ಮಗ ಪ್ರಹ್ಲಾದ,
ರಕ್ಷಣೆಗಾಗಿ ಭಗವಂತನ ಸ್ತೋತ್ರ ಮಾಡಿದ.
ಅವನಿಗೆ ರಕ್ಷಣೆ ಕೊಟ್ಟದ್ದು ಆ ಭಗವಂತ,
ಇರಲಿಲ್ಲವನಿಗೆ ಸಹಜ ದೈಹಿಕ ಸಾಮರ್ಥ್ಯ.
ಅಲ್ಲಿ ಕೆಲಸ ಮಾಡಿತು ಭೃತ್ಯರ ಬಲಾತ್ಕಾರ,
ಭೀಮನಲ್ಲಿರುವುದು ಪ್ರಾಣದೇವನ ನೈಜವೀರ್ಯ.
[Contributed by Shri Govind Magal] 

No comments:

Post a Comment

ಗೋ-ಕುಲ Go-Kula