ತಸ್ಯೇಚ್ಛಯೈವ ಪೃಥಿವೀಮವತೇರುರಾಶು ತಸ್ಯಾsಯುಧಾನಿ ಸಬಲಸ್ಯ ಸುಭಾಸ್ವರಾಣಿ ।
ಶಾರ್ಙ್ಗಾಸಿಚಕ್ರದರತೂಣಗದಾಃ ಸ್ವಕೀಯಾ ಜಗ್ರಾಹ ದಾರುಕಗೃಹೀತರಥೇ
ಸ್ಥಿತಃ ಸಃ ॥೧೪.೨೧॥
ಬಲರಾಮನಿಂದೊಡಗೂಡಿದ
ಶ್ರೀಕೃಷ್ಣನ ಇಚ್ಛಾನುಸಾರ,
ಅವರಿಬ್ಬರಿಗೂ
ಆಯುಧಗಳು ಇಳಿದುಬಂದ ವ್ಯಾಪಾರ.
ಇಳಿದುಬಂದ ದಾರುಕನ
ಸಾರಥ್ಯದ ರಥದಲ್ಲಿ ಶ್ರೀಕೃಷ್ಣ ಕುಳಿತ,
ಬಿಲ್ಲು,ಖಡ್ಗ,ಚಕ್ರ,ಶಂಖ,ಬತ್ತಳಿಕೆ,ಗದೆಗಳ ಸ್ವೀಕರಿಸಿದ
ಭಗವಂತ.
ಆರುಹ್ಯ ಭೂಮಯರಥಂ ಪ್ರತಿ ಯುಕ್ತಮಶ್ವೈರ್ವೇದಾತ್ಮಕೈರ್ದ್ಧನುರಧಿಜ್ಯಮಥ ಪ್ರಗೃಹ್ಯ ।
ಶಾರ್ಙ್ಗಂ ಶರಾಂಶ್ಚ ನಿಶಿತಾನ್ ಮಗಧಾಧಿರಾಜಮುಗ್ರಂ ನೃಪೇನ್ದ್ರಸಹಿತಂ
ಪ್ರಯಯೌ ಜವೇನ॥೧೪.೨೨॥
ವೇದಾತ್ಮಕವಾದ
ಕುದುರೆಗಳ ಕಟ್ಟಿದ ಭೂಮಿಮಯ ಆದಂಥ ರಥ,
ಹೆದೆಯೇರಿಸಿದ
ಬಿಲ್ಲೊಂದಿಗೆ ಚೂಪಾದ ಬಾಣಗಳ ಹಿಡಿದ ನಾಥ.
ಬೇರೆ
ರಾಜರುಗಳಿಂದೊಡಗೂಡಿದ ಜರಾಸಂಧನ ಮೇಲೇರಿ ಹೋದನಾತ.
(ಕೃಷ್ಣ ಜರಾಸಂಧರ ಸಂಗ್ರಾಮದ ಅಧ್ಯಾತ್ಮ ನೋಟ,
ಭೂಮಯರಥ-ಭೂಸಂಪರ್ಕದ
ದೇಹವೆಂಬ ಪಾಠ.
ಆ ರಥವ ಎಳೆದೊಯ್ಯುವ
ಕುದುರೆಗಳೆಂದರೆ ವೇದಗಳ ತ್ರಾಣ,
ರಥ ನಿಯಂತ್ರಿಸುವ
ರಥಿಯೆಂದರೆ ಅವನೇ ಶ್ರೀಮನ್ನಾರಾಯಣ. )
ರಾಮಃ ಪ್ರಗೃಹ್ಯ ಮುಸಲಂ ಸ ಹಲಂ ಚ ಯಾನಮಾಸ್ಥಾಯ ಸಾಯಕಶರಾನಸತೂಣಯುಕ್ತಃ
।
ಸೈನ್ಯಂ ಜರಾಸುತಸುರಕ್ಷಿತಮಭ್ಯಧಾವದ್ಧರ್ಷಾನ್ನದನ್ನುರುಬಲೋsರಿಬಲೈರಧೃಷ್ಯಃ ॥ ೧೪.೨೩ ॥
ಬಲರಾಮ
ತನ್ನಾಯುಧಗಳಾದ ಹಲ ಮುಸಲ ಬಾಣ ಬಿಲ್ಲು ಬತ್ತಳಿಕೆಗಳ ಧರಿಸಿದ,
ಕಂಗೆಡದ
ಯುದ್ಧೋತ್ಸಾಹದಿಂದ ಘರ್ಜನೆ ಮಾಡುತ್ತಾ ಜರಾಸಂಧನ ಮೇಲೇರಿ ಹೋದ.
ಉದ್ವೀಕ್ಷ್ಯ ಕೃಷ್ಣಮಭಿಯಾನ್ತಮನನ್ತಶಕ್ತಿಂ ರಾಜೇನ್ದ್ರವೃನ್ದಸಹಿತೋ
ಮಗಧಾಧಿರಾಜಃ ।
ಉದ್ವೇಲಸಾಗರವದಾಶ್ವಭಿಯಾಯ ಕೋಪಾನ್ನಾನಾವಿಧಾಯುಧವರೈರಭಿವರ್ಷಮಾಣಃ
॥೧೪.೨೪॥
ಸಮಸ್ತ ರಾಜರ
ಸೈನ್ಯದಿಂದ ಕೂಡಿದ ಮಗಧರಾಜ ಜರಾಸಂಧ,
ತನ್ನೆದುರು
ಬರುತ್ತಿರುವ ಬಹುಬಲದ ಕೃಷ್ಣಸೈನ್ಯವ ಕೋಪದಿ ನೋಡಿದ.
ಉಕ್ಕುತ್ತಿರುವ ಸಮುದ್ರದಂತೆ ಕೃಷ್ಣಗೆದುರಾಗಿ ಬಾಣ ಆಯುಧ
ಮಳೆಗರೆದ.[Contributed by Shri Govind Magal]
No comments:
Post a Comment
ಗೋ-ಕುಲ Go-Kula