ಏವಂ ಪ್ರಶಾಸತಿ ಜಗತ್ ಪುರುಶೋತ್ತಮೇsಸ್ಮಿನ್ ಭೀಮಾರ್ಜ್ಜುನೌ ತು ಸಹದೇವಯುತಾವನುಜ್ಞಾಮ್ l
ಕೃಷ್ಣಾದವಾಪ್ಯ ವರ್ಷತ್ರಿತಯಾತ್ ಪುರಂ ಸ್ವಮಾಜಗ್ಮತುರ್ಹರಿಸುತೇನ
ವಿಶೋಕನಾಮ್ನಾ ॥೧೫.೦೧॥
ಹೀಗೆ
ನಡೆಯುತ್ತಿರಲು ಪುರುಷೋತ್ತಮ ಕೃಷ್ಣನಿಂದ ಜಗದ ಆಳ್ವಿಕೆ,
ಸಹದೇವಸಮೇತ
ಭೀಮಾರ್ಜುನರು ಮಾಡಿದರಲ್ಲಿ ಮೂರ್ವರ್ಷ ಪೂರೈಕೆ.
ಶ್ರೀಕೃಷ್ಣನ
ಆಜ್ಞೆಯನ್ನು ಪಡೆದುಕೊಂಡ ಅವರು,
ಕೃಷ್ಣಪುತ್ರ
ವಿಶೋಕನೊಡನೆ ಹಸ್ತಿನವತಿಗೆ ಬಂದರು.
ಸೈರನ್ಧ್ರಿಕೋದರಭವಃ. ಸ ತು ನಾರದಸ್ಯ ಶಿಷ್ಯೋ ವೃಕೋದರರಥಸ್ಯ ಭಭೂವ
ಯನ್ತಾ ।
ಯಾ ಪಿಙ್ಗಲಾsನ್ಯಭವ ಆತ್ಮನಿ ಸಂಸ್ಥಿತಂ ತಂ ಸಂಸ್ಮೃತ್ಯ ಕಾನ್ತಮುರುಗಾಯಮಭೂತ್
ತ್ರಿವಕ್ರಾ ॥೧೫.೦೨॥
ಈ ವಿಶೋಕ ಸೈರಂಧ್ರಿ
ತ್ರಿವಕ್ರೆಯಲ್ಲಿ ಶ್ರೀಕೃಷ್ಣನಿಂದ ಜನಿಸಿದವನು,
ನಾರದ ಶಿಷ್ಯನಾದ ಆತ
ಮುಂದೆ ಭೀಮಸೇನನ ಸಾರಥಿಯಾದವನು.
ಹೋದಜನ್ಮದಲ್ಲಿ
ಪಿಂಗಲೆಯಾಗಿದ್ದು ಮಾಡಿದ್ದಳು ಬಿಂಬರೂಪಿ ಹರಿಯ ಗಂಡನೆಂದು ಧ್ಯಾನ,
ದೈವೇಚ್ಛೆಯ
ಅನುಸರಿಸಿ ಮುಂದಿನಜನ್ಮದಲ್ಲಿ ತ್ರಿವಕ್ರೆ ಆಗಿ ಘಟಿಸಿತ್ತು ಅವಳ ಜನನ.
ತಂ ಪಞ್ಚರಾತ್ರವಿದಮಾಪ್ಯ ಸುಷಾರಥಿಂ ಸ ಭೀಮೋ ಮುಮೋದ ಪುನರಾಪ
ಪರಾತ್ಮವಿದ್ಯಾಮ್ ।
ವ್ಯಾಸಾತ್ ಪರಾತ್ಮತ ಉವಾಚ ಚ ಫಲ್ಗುನಾದಿದೈವೇಷು ಸರ್ವವಿಜಯೀ
ಪರವಿದ್ಯಯೈಷಃ ॥೧೫.೦೩॥
ಭೀಮಸೇನ ಪಂಚರಾತ್ರ
ತಿಳಿದ ವಿಶೋಕನ ಸಾರಥಿಯಾಗಿ ಪಡೆದು ಪಟ್ಟ ಸಂತಸ,
ಅಂತಹ ಭೀಮಸೇನಗೆ
ಪರವಿದ್ಯೆ ಬೋಧಿಸಿದ್ದು ಪರಮಾತ್ಮನೇ ಆದ ವೇದವ್ಯಾಸ.
ಪರವಿದ್ಯೆಯಿಂದ
ಎಲ್ಲರ ಗೆದ್ದ ಭೀಮ ಅರ್ಜುನ ಮೊದಲಾದವರಿಗೆ ನೀಡಿದ್ದ ಉಪದೇಶ.
ಸರ್ವಾನಭಾಗವತಶಾಸ್ತ್ರಪಥಾನ್ ವಿಧೂಯ ಮಾರ್ಗ್ಗಂ ಚಕಾರ ಸ ತು
ವೈಷ್ಣವಮೇವ ಶುಭ್ರಮ್ ।
ಕ್ರೀಡಾರ್ತ್ಥಮೇವ ವಿಜಿಗಾಯ ತಥೋಭಯಾತ್ಮಯುದ್ಧೇ ಬಲಂ ಚ ಕರವಾಕ್ಪ್ರಭವೇsಮಿತಾತ್ಮಾ ॥೧೫.೦೪॥
ಭೀಮ ಮಾಡಿದ
ಭಾಗವತಶಾಸ್ತ್ರವಲ್ಲದ ಬೇರೆ ದಾರಿಗಳ ನಿರಾಕರಣೆ,
ವಿಷ್ಣುಸಂಬಂಧಿ
ಉನ್ನತಶಾಸ್ತ್ರವ ಉಳಿಸಿಬೆಳೆಸಿ ಅವಕ್ಕೆ ಹಾಕಿದ
ಮಣೆ.
ಯಾವುದೇ ಇರಲದು
ಬಾಹು ಅಥವಾ ವಾಗ್ಯುದ್ಧ,
ಆಟದಂತೆ ಎಲ್ಲರನೂ
ಭೀಮಸೇನ ತಾನು ಗೆದ್ದ.
ನಿತ್ಯಪ್ರಭೂತಸುಶುಭಪ್ರತಿಭೋSಪಿ ವಿಷ್ಣೋಃ ಶ್ರುತ್ವಾ
ಪರಾಂ ಪುನರಪಿ ಪ್ರತಿಭಾಮವಾಪ ।
ಕೋ ನಾಮ ವಿಷ್ಣ್ವನುಪಜೀವಕ ಆಸ ಯಸ್ಯ ನಿತ್ಯಾಶ್ರಯಾದಭಿಹಿತಾSಪಿ ರಮಾ
ಸದಾ ಶ್ರೀಃ ॥೧೫.೦೫॥
ಭೀಮನಲ್ಲಿ ಯಾವಾಗಲೂ
ಇದ್ದರೂ ಮಂಗಳವಾದ ಪ್ರತಿಭೆ,
ಶ್ರೀಹರಿಯಿಂದ ಪಡೆದ
ಪರವಿದ್ಯೆಯ ಉತ್ಕೃಷ್ಟವಾದ ಶೋಭೆ.
ಕೃಷ್ಣ -ವ್ಯಾಸ
ರೂಪೀ ಹರಿಯಿಂದ ಹೊಂದಿದ ಜ್ಞಾನದ ಪ್ರಭೆ.
ನಾರಾಯಣನನ್ನ
ಆಶ್ರಯಿಸದೇ ಇರುವವರು ಯಾರು,
ಹಾಗಾಗೇ ನಿತ್ಯಾಶ್ರಯಿ ಲಕ್ಶ್ಮಿದೇವಿಗೆ
"ಶ್ರೀ"ಎಂದು ಹೆಸರು.
No comments:
Post a Comment
ಗೋ-ಕುಲ Go-Kula