ದೃಷ್ಟ್ವಾsಮಿತಾನ್ಯಥ
ಕರಾಂಸಿ ಮರುತ್ಸುತೇನ ನಿತ್ಯಂ ಕೃತಾನಿ ತನಯಾ ನಿಖಿಲಾಶ್ಚ ರಾಜ್ಞಾಮ್।
ತಸ್ಯಾಮಿತಂ ಬಲಮುದೀಕ್ಷ್ಯ ಸದೋರುವೃದ್ಧದ್ವೇಷಾ ಬಭೂವುರಥ
ಮನ್ತ್ರಮಮನ್ತ್ರಯಂಶ್ಚ॥೧೪.೬೬॥
ರಾಜಕುಮಾರರು
ಕಾಣುತ್ತಾ ಭೀಮನ ಎಣೆಯಿರದ ಬಲ,
ಬೆಳೆಸಿಕೊಂಡರು
ತಮ್ಮಲ್ಲಿ ಭೀಮನ ಬಗ್ಗೆ ದ್ವೇಷದ ಜಾಲ.
ಕೂಡಿಬಂದಿತ್ತು
ಅವರಲ್ಲಿ ಗುಪ್ತ ಮಾತುಕತೆಗಳದೇ ಕಾಲ.
ಯೇಯೇ ಹಿ ತತ್ರ ನರದೇವಸುತಾಃ ಸುರಾಂಶಾಃ ಪ್ರೀತಿಂ ಪರಾಂ ಪವನಜೇ ನಿಖಿಲಾ
ಅಕುರ್ವನ್ ।
ತಾಂಸ್ತಾನ್ ವಿಹಾಯ ದಿತಿಜಾ ನರದೇವವಂಶಜಾತಾ ವಿಚಾರ್ಯ್ಯ
ವಧನಿಶ್ಚಯಮಸ್ಯ ಚಕ್ರುಃ ॥೧೪.೬೭॥
ಯಾರ್ಯಾರು
ದೇವತಾಂಶದಿಂದ ಹುಟ್ಟಿದ್ದರು,
ಅವರೆಲ್ಲ ಭೀಮನಲ್ಲಿ
ಉನ್ನತ ಪ್ರೀತಿ ಮಾಡಿದರು.
ಇನ್ನು
ದೈತ್ಯಾಂಶದಿಂದ ಹುಟ್ಟಿಬಂದವರ ವಿಚಾರ,
ಹೇಗೆ ಭೀಮನ
ಕೊಲ್ಲಬೇಕೆನ್ನುವುದವರ ಹುನ್ನಾರ.
ಅಸ್ಮಿನ್ ಹತೇ ವಿನಿಹತಾ ಅಖಿಲಾಶ್ಚ ಪಾರ್ಥಾಃ ಶಕ್ಯೋ ಬಲಾಚ್ಚ ನ ನಿಹನ್ತುಮಯಂ ಬಲಾಢ್ಯಃ ।
ಛದ್ಮಪ್ರಯೋಗತ ಇಮಂ ವಿನಿಹತ್ಯ ವೀರ್ಯ್ಯಾತ್ ಪಾರ್ತ್ಥಂ ನಿಹತ್ಯ ನಿಗಳೇ ಚ ವಿದಧ್ಮಹೇsನ್ಯಾನ್ ॥೧೪.೬೮॥
ಏವಂ ಕೃತೇ ನಿಹತಕಣ್ಟಕಮಸ್ಯ ರಾಜ್ಯಂ ದುರ್ಯ್ಯೋಧನಸ್ಯ ಹಿ ಭವೇನ್ನ ತತೋsನ್ಯಥಾ ಸ್ಯಾತ್ ।
ಅಸ್ಮಿನ್ ಹತೇ ನಿಪತಿತೇ ಚ ಸುರೇನ್ದ್ರಸೂನೌ ಶೇಷಾ ಭವೇಯುರಪಿ
ಸೌಬಲಿಪುತ್ರದಾಸಾಃ ॥೧೪.೬೯॥
ಮುಗಿಸಿಬಿಟ್ಟರೆ
ಭೀಮಸೇನನೊಬ್ಬನ ಕತೆ,
ಉಳಿದ
ಕುಂತೀಪುತ್ರರವರು ಇದ್ದೂ ಸತ್ತಂತೆ.
ಭೀಮನಿಗಿದೆ ಅಮಿತ
ಪರಾಕ್ರಮ ಕುಂದಿರದ ಬಲ,
ಅವನ ಮುಗಿಸಲು
ಆವಶ್ಯಕ ಕುತಂತ್ರದ್ದೇ ಜಾಲ.
ಅರ್ಜುನನ
ಮುಗಿಸಬೇಕು ಬಲ ಪ್ರಯೋಗದಿಂದ,
ಉಳಿದವರ
ನಿಗ್ರಹವಾಗಬೇಕು ಬಂಧನದಿಂದ.
ಹೀಗೆ ಮಾಡಿದರೆ
ದುರ್ಯೋಧನನಿಗೆ ರಾಜಭಾಗ್ಯ,
ಶತ್ರುಗಳೇ ಇರದ
ನಿರಂತರವಾದ ರಾಜವೈಭೋಗ.
ಭೀಮಾರ್ಜುನರಾಗಲು
ಒಮ್ಮೆ ವಿಧಿವಶ,
ಉಳಿದವರಿಗನಿವಾರ್ಯ
ಕೌರವನ ದಾಸ್ಯ.
ಏವಂ ವಿಚಾರ್ಯ್ಯ ವಿಷಮುಲ್ಬಣಮನ್ತಕಾಭಂ ಕ್ಷೀರೋದಧೇರ್ಮ್ಮಥನಜಂ ತಪಸಾ
ಗಿರೀಶಾತ್ ।
ಶುಕ್ರೇಣ ಲಬ್ಧಮಮುತಃ ಸುಬಲಾತ್ಮಜೇನ ಪ್ರಾಪ್ತಂ ಪ್ರತೋಷ್ಯ
ಮರುತಸ್ತನಯಾಯ ಚಾದುಃ ॥೧೪.೭೦॥
ಕ್ಷೀರಸಮುದ್ರ
ಮಥನದಿಂದ ಹುಟ್ಟಿಬಂದ ವಿಷ,
ಶಿವತಪಸ್ಸಿನಿಂದಾಗಿತ್ತದು
ಶುಕ್ರಾಚಾರ್ಯರ ವಶ.
ಮತ್ತೆ ಅದು
ಶುಕ್ರಾಚಾರ್ಯರ ಒಲಿಸಿದ ಶಕುನಿಯ ಕೈಸೇರಿತ್ತು,
ದುಷ್ಟಕೂಟ ಆ ತೀಕ್ಷ್ಣ ಕಾಲಕೂಟವಿಷವ ಭೀಮಗೆ ಉಣಿಸಿತ್ತು.
No comments:
Post a Comment
ಗೋ-ಕುಲ Go-Kula