Tuesday 17 December 2019

ಮಹಾಭಾರತ ತಾತ್ಪರ್ಯನಿರ್ಣಯ, ಕನ್ನಡದಲ್ಲಿ 14: 48:54

ಮಾದ್ರೀ ಪತಿಂ ಮೃತಮವೇಕ್ಷ್ಯ ರುರಾವ ದೂರಾತ್ ತಚ್ಛುಶ್ರುವುಶ್ಚ ಪೃಥಯಾ ಸಹ ಪಾಣ್ಡುಪುತ್ರಾಃ ।
ತೇಷ್ವಾಗತೇಷು ವಚನಾದಪಿ ಮಾದ್ರವತ್ಯಾಃ ಪುತ್ರಾನ್ ನಿವಾರ್ಯ ತು ಪೃಥಾ ಸ್ವಯಮತ್ರ ಚಾsಗಾತ್ ॥೧೪.೪೮॥
ಸತ್ತ ಗಂಡನ ನೋಡಿ ಮಾದ್ರಿಯ ಅಳು,
ಕುಂತಿ ಪಾಂಡವರಿಗೂ ಕೇಳಿತವಳ ಗೋಳು.
ಶುರುವಾಯಿತು ಮಾದ್ರಿಯತ್ತ ಅವರೆಲ್ಲರ ನಡೆ,
ಮಕ್ಕಳು ಬರಬಾರದೆಂದು ಮಾದ್ರಿಯಿಂದ ತಡೆ.
ಮಕ್ಕಳ ಬಿಟ್ಟ ಕುಂತಿ ನಡೆದಳು ಮಾದ್ರಿಯ ಕಡೆ.

ಪತ್ಯುಃ ಕಳೇಬರಮವೇಕ್ಷ್ಯ ನಿಶಮ್ಯ ಮಾದ್ರ್ಯಾಃ ಕುನ್ತೀ ಭೃಶಂ ವ್ಯಥಿತಹೃತ್ಕಮಳೈವ ಮಾದ್ರೀಮ್ ।
ಧಿಕ್ಕೃತ್ಯ ಚಾನುಮರಣಾಯ ಮತಿಂ ಚಕಾರ ತಸ್ಯಾಃ ಸ್ವನೋ ರುದಿತಜಃ ಶ್ರುತ ಆಶು ಪಾರ್ಥೈಃ ॥೧೪.೪೯॥
ಕುಂತೀದೇವಿ ನೋಡಿದಳು ಗಂಡನ ಶವ,
ಮಾದ್ರಿಯಿಂದ ತಿಳಿದಳು ಎಲ್ಲಾ ವಿಷಯ.
ನೋವಿಂದ ಮಾದ್ರಿಯ ಬೈದಳು ಕುಂತಿ,
ಸಹಗಮನಕ್ಕೆ ಸಿದ್ಧವಾಯಿತವಳ ಮತಿ.
ಪಾಂಡವರಿಗೂ ಕೇಳಿಸಿತು ಅವಳ ಅಳುವಿನ ಗತಿ.

ತೇಷ್ವಾಗತೇಷ್ವಧಿಕ ಆಸ ವಿರಾವ ಏತಂ ಸರ್ವೇsಪಿ ಶುಶ್ರುವು ಋಷಿಪ್ರವರಾ ಅಥಾತ್ರ ।
ಆಜಗ್ಮುರುತ್ತಮಕೃಪಾ ಋಷಿಲೋಕಮದ್ಧ್ಯೇ ಪತ್ನೀ ನೃಪಾನುಗಮನಾಯ ಚ ಪಸ್ಪೃಧಾತೇ ॥೧೪.೫೦॥
ಕುಂತಿಯ ಅಳುವ ಕೇಳಿದ ಪಾಂಡವರು,
ಎಲ್ಲರೂ ಅವಳತ್ತ ಧಾವಿಸಿ ನಡೆದರು.
ಅಧಿಕವಾಗುತ್ತಿರಲು ಅವಳ ರೋದನದ ಶಬ್ದ ,
ಕೃಪಾಶೀಲ ಋಷಿಗಳು ಅಲ್ಲಿ ಸೇರಲಾದರು ಬದ್ಧ.
ಋಷಿಮುನಿಗಳೆಲ್ಲ ಅಲ್ಲಿಗೆ ಬಂದು ಸೇರುತ್ತಿರಲು,
ಆಯ್ತು ಸಹಗಮನಕೆ ಸ್ಪರ್ಧೆ ಇಬ್ಬರು ಹೆಂಡಿರೊಳು.

ತೇ ಸನ್ನಿವಾರ್ಯ್ಯ ತು ಪೃಥಾಮಥ ಮಾದ್ರವತ್ಯಾ ಭರ್ತ್ತುಃ ಸಹಾನುಗಮನಂ ಬಹು ಚಾರ್ತ್ಥಯನ್ತ್ಯಾಃ ।
ಸಂವಾದಮೇವ ನಿಜದೋಷಮವೇಕ್ಷ್ಯ ತಸ್ಯಾಶ್ಚಕ್ರುಃ ಸದಾsವಗತಭಾಗವತೋಚ್ಚಧರ್ಮ್ಮಾಃ ॥೧೪.೫೧॥
ಋಷಿಶ್ರೇಷ್ಠರು ಕೊಟ್ಟರು ಸಹಗಮನಕ್ಕೆ ಸಿದ್ಧಳಾದ ಕುಂತಿಗೆ ತಡೆ,
ಸಮ್ಮತಿಸಿದರು ದೋಷವರಿತು ಸಾಯಲಣಿಯಾದ ಮಾದ್ರಿಯ ನಡೆ.

ಭರ್ತ್ತುರ್ಗ್ಗುಣೈರನಧಿಕೌ ತನಯಾರ್ತ್ಥಮೇವ ಮಾದ್ರ್ಯಾssಕೃತೌ ಸುರವರಾವಧಿಕೌ ಸ್ವತೋsಪಿ ।
ತೇನೈವ ಭರ್ತ್ತೃಮೃತಿಹೇತುರಭೂತ್ ಸಮಸ್ತ ಲೋಕೈಶ್ಚ ನಾತಿಮಹಿತಾ ಸುಗುಣಾsಪಿ ಮಾದ್ರೀ॥೧೪.೫೨॥
ಹಿಂದೆ ಮಾದ್ರಿ ಕರೆದದ್ದು ತನಗಿಂತಲೂ  ಅಧಿಕರಾದವರನ್ನು,
ಸಂತತಿಗೆ ತನ್ನ ಗಂಡನಿಗಿಂತ ಅಧಿಕರಲ್ಲದ ಅಶ್ವಿದೇವತೆಗಳನ್ನು.
ತಾನೇ ಆಗಿದ್ದಳು ತನ್ನ ಗಂಡನ ಸಾವಿಗೆ ಕಾರಣ,
ಒಳ್ಳೆಯವಳಾದರೂ ಸಿಗಲಿಲ್ಲ ಮಾನ್ಯತೆಯ ತೋರಣ.

ಪಾಣ್ಡೋಃ ಸುತಾ ಮುನಿಗಣೈಃ ಪಿತೃಮೇಧಮತ್ರ ಚಕ್ರುರ್ಯ್ಯಾಥಾವದಥ ತೇನ ಸಹೈವ ಮಾದ್ರೀ ।
ಹುತ್ವಾSSತ್ಮದೇಹಮುರು ಪಾಪಮದಃ ಕೃತಂ ಚ  ಸಮ್ಮಾರ್ಜ್ಯ ಲೋಕಮಗಮನ್ನಿಜಭರ್ತ್ತುರೇವ॥೧೪.೫೩॥
ಪಾಂಡುವಿನ ಮಕ್ಕಳು ಕುಂತಿದೇವಿ ಸಮೇತ,
ಮುನಿಗಣದ ಸಹಕಾರದೊಂದಿಗೆ ಶಾಸ್ತ್ರೋಕ್ತ,
ಮಾಡಿದರು ಪಾಂಡು ಶರೀರಕ್ಕೆ ಅಂತ್ಯಸಂಸ್ಕಾರ,
ಮಾದ್ರಿ ದೇಹವರ್ಪಿಸಿ ಪ್ರಾಣ ತ್ಯಜಿಸಿದ ವಿಚಾರ,
ಪಾಪಕಳೆದುಕೊಂಡು ಪತಿಲೋಕ ಸೇರಿದ ವ್ಯಾಪಾರ.

ಪಾಣ್ಡುಶ್ಚ ಪುತ್ರಕಗುಣೈಃ ಸ್ವಗುಣೈಶ್ಚ ಸಾಕ್ಷಾತ್ ಕೃಷ್ಣಾತ್ಮಜಃ ಸತತಮಸ್ಯ ಪದೈಕಭಕ್ತಃ ।
ಲೋಕಾನವಾಪ ವಿಮಲಾನ್ ಮಹಿತಾನ್ ಮಹದ್ಭಿಃ ಕಿಂ ಚಿತ್ರಮತ್ರ ಹರಿಪಾದವಿನಮ್ರ ಚಿತ್ತೇ ॥೧೪.೫೪॥
ನೇರವಾಗಿ ವೇದವ್ಯಾಸರ ಮಗನಾದವನಾಗಿ,
ತನ್ನ;ಮಕ್ಕಳ ಗುಣದಿಂದ ವ್ಯಾಸರ ಭಕ್ತನಾಗಿ,
ಹೊಂದಿದ ಸಜ್ಜನರಿಂದ ಪೂಜಿತವಾದ ಉತ್ತಮಲೋಕ,
ಭಗವತ್ಪಾದಾಸಕ್ತಗೆ ದೊರಕಿದ್ದರಲ್ಲಿ ಆಶ್ಚರ್ಯ ಯಾಕ?

No comments:

Post a Comment

ಗೋ-ಕುಲ Go-Kula