ಪ್ರತಿಗ್ರಹಾತ್ ಸನ್ನಿವೃತ್ತಃ ಸ ರಾಮಂ ಯಯೌ ನ ವಿಷ್ಣೋರ್ಹಿ ಭವೇತ್
ಪ್ರತಿಗ್ರಹಃ ।
ದೋಷಾಯ ಯಸ್ಮಾತ್ ಸ ಪಿತಾsಖಿಲಸ್ಯ ಸ್ವಾಮೀ ಗುರುಃ ಪರಮಂ ದೈವತಂ ಚ ॥೧೫.೧೧॥
ಅಪರಿಗ್ರಹವ್ರತನಿಷ್ಠ
ದ್ರೋಣರು ಹೊರಟರು ಗುರು ಪರಶುರಾಮನೆಡೆಗೆ,
ಭಗವಂತನಿಂದ ಏನಾದರೂ
ಪಡೆದರೆ ದೋಷವೆಲ್ಲಿ ಎಂದಿತವರ ಒಳಬಗೆ.
ಪರಶುರಾಮ ಸಮಸ್ತ
ಪ್ರಪಂಚದ ಸ್ವಾಮಿ, ತಂದೆ, ಗುರು-ಪರದೈವ,
ಹೀಗಿತ್ತು
ಪರಶುರಾಮನಲ್ಲಿಗೆ ಬಂದ ದ್ರೋಣರ ಅಪರಿಗ್ರಹ ಭಾವ.
ದೃಷ್ಟ್ವೈವೈನಂ ಜಾಮದಗ್ನ್ಯೋsಪ್ಯಚಿನ್ತಯದ್ ದ್ರೋಣಂ ಕರ್ತ್ತುಂ ಕ್ಷಿತಿಭಾರಾಪನೋದೇ ।
ಹೇತುಂ ಸುರಾಣಾಂ ನರಯೋನಿಜಾನಾಂ ಹನ್ತಾ ಚಾಯಂ ಸ್ಯಾತ್ ಸಹ ಪುತ್ರೇಣ
ಚೇತಿ ॥೧೫.೧೨॥
ಬಳಿಬಂದ
ದ್ರೋಣಾಚಾರ್ಯರ ಕಂಡ ಪರಶುರಾಮ,
ಯೋಚಿಸಿದ ತನ್ನಲ್ಲಿ
ಭೂಭಾರಹರಣಯಜ್ಞದ ನೇಮ.
ಮಾಡಿಕೊಂಡು ದ್ರೋಣ
-ಅಶ್ವತ್ಥಾಮರನ್ನು ಕಾರಣ,
ನಡೆಯಲಿ
ಮನುಷ್ಯರೂಪಿ ದೇವತೆಗಳ ಪ್ರಾಣಹರಣ.
ತೇಷಾಂ ವೃದ್ಧಿಃ ಸ್ಯಾತ್ ಪಾಣ್ಡವಾರ್ತ್ದೇ ಹತಾನಾಂ ಮೋಕ್ಷೇsಪಿ ಸೌಖ್ಯಸ್ಯ ನ ಸನ್ತತಿಶ್ಚ ।
ಯೋಗ್ಯಾ ಸುರಾಣಾಂ ಕಲಿಜಾ ಸುಪಾಪಾಃ ಪ್ರಾಯೋ ಯಸ್ಮಾತ್ ಕಲಿಜಾಃ
ಸಮ್ಭವನ್ತಿ ॥೧೫.೧೩॥
ಆಗಬೇಕು
ಪಾಂಡವರಿಗಾಗಿ ಯುದ್ಧದಿ ಸತ್ತ ದೇವತೆಗಳ ಅಭಿವೃದ್ಧಿ,
ಆಗಬೇಕು ಅವರಿಗೆ
ಸ್ವರ್ಗದಲ್ಲೂ ಮೋಕ್ಷದಲ್ಲೂ ಆನಂದದ ವೃದ್ಧಿ.
ಮನುಷ್ಯರಾಗಿ
ಹುಟ್ಟಿದ ದೇವತೆಗಳ ಸಂತತಿ ಕಲಿಯುಗದಿ ಸಲ್ಲದು,
ಪಾಪಿಷ್ಠರೇ ಹೆಚ್ಚು
ಹುಟ್ಟುವ ಕಲಿಯುಗದಿ ದೇವತೆಗಳಿರಬಾರದು.
ನ ದೇವಾನಾಮಾಶತಂ ಪೂರುಷಾ ಹಿ ಸನ್ತಾನಜಾಃ ಪ್ರಾಯಶಃ ಪಾಪಯೋಗ್ಯಾಃ ।
ನಾಕಾರಣಾತ್ ಸನ್ತತೇರಪ್ಯಭಾವೋ ಯೋಗ್ಯಃ ಸುರಾಣಾಂ ಸದಮೋಘರೇತಸಾಮ್
॥೧೫.೧೪॥
ದೇವತೆಗಳಲ್ಲಿ
ಸಾಮಾನ್ಯ ನೂರು ತಲೆಮಾರು ತನಕ ಪಾಪಯೋಗ್ಯರಿಲ್ಲ,
ಸಂತಾನಹೀನತೆಯೂ
ಅಮೋಘವೀರ್ಯರಾದವರ ಕೂಡುವುದಿಲ್ಲ.
ಅವ್ಯುಚ್ಛಿನ್ನೇ ಸಕಲಾನಾಂ ಸುರಾಣಾಂ ತನ್ತೌ ಕಲಿರ್ನ್ನೋ ಭವಿತಾ
ಕಥಞ್ಚಿತ್ ।
ತಸ್ಮಾದುತ್ಸಾದ್ಯಾಃ ಸರ್ವ ಏತೇ ಸುರಾಂಶಾ ಏತೇನ ಸಾಕಂ ತನಯೇನ ವೀರಾಃ
॥೧೫.೧೫॥
ಆಗದಿದ್ದರೆ
ದೇವತೆಗಳ ಸಂತತಿಯ ಸಂಹಾರ,
ಮುಂದೆ
ಸಾಗುವುದಿಲ್ಲ ಕಲಿಯುಗದ ವ್ಯಾಪಾರ.
ದೇವತಾವತಾರಿಗಳು ಅಶ್ವತ್ಥಾಮನಿಂದ
ಆಗಬೇಕು ನಾಶ,
ದೈವಹೆಣೆದ ದ್ರೋಣ ಅಶ್ವತ್ಥಾಮರ ಸಾಂದರ್ಭಿಕ ಪಾಶ.ಮಹಾಭಾರತ ತಾತ್ಪರ್ಯನಿರ್ಣಯ, ಕನ್ನಡದಲ್ಲಿ 15:
No comments:
Post a Comment
ಗೋ-ಕುಲ Go-Kula