ನೈಸರ್ಗ್ಗಿಕಪ್ರಿಯಮಿಮಂ ಪ್ರವದನ್ತಿ ವಿಪ್ರಾ ವಿಷ್ಣೋರ್ನ್ನಿತಾನ್ತಮಪಿ
ಸತ್ಯಮಿದಂ ಧ್ರುವಂ ಹಿ ।
ನೈವಾನ್ಯಥೌರಸಬಲಂ ಭವತೀದೃಶಂ ತದುತ್ಸಾದ್ಯ ಏಷ ಹರಿಣೈವ ಸಹೈಷ ನೋSರ್ತ್ಥಃ ॥೧೪.೮೧॥
ಸಹಜವಾದದ್ದನ್ನೇ
ಹೆಚ್ಚು ಇಷ್ಟಪಡುತ್ತಾನಂತೆ ಭಗವಂತ,
ವಿಪ್ರವಾಕ್ಯದಂತೆ
ನೈಜಬಲದ ಭೀಮ ಹರಿಗೆ ಪ್ರಿಯವಂತ.
ಇದು ಖಂಡಿತವಾಗಿಯೂ
ಸತ್ಯವಾದ ನುಡಿ,
ಸಹಜಸಿದ್ಧ ಗುಣ
ಭೀಮನಲ್ಲಿ ಬಲದ ಕಿಡಿ.
ಹರಿಯೊಂದಿಗೆ ಇವನದೂ
ಆಗಬೇಕು ನಾಶ,
ನಮಗನುಕೂಲವಾದ
ಇಷ್ಟದ ಪೀಯೂಷ.
ಕೃಷ್ಣಃ ಕಿಲೈಷ ಚ ಹರಿರ್ಯ್ಯದುಷು ಪ್ರಜಾತಃ ಸೋsಸ್ಯಾsಶ್ರಯಃ
ಕುರುತ ತಸ್ಯ ಬಹು ಪ್ರತೀಪಮ್ ।
ಸಮ್ಮನ್ತ್ರ್ಯ ಚೈವಮತಿಪಾಪತಮಾ ನರೇನ್ದ್ರಪುತ್ರಾ ಹರೇಶ್ಚ ಬಹು
ಚಕ್ರುರಥ ಪ್ರತೀಪಮ್ ॥೧೪.೮೨॥
ನಾರಾಯಣ ಯಾದವರಲ್ಲಿ
ಕೃಷ್ಣನಾಗಿ ಬಂದಿರುವ,
ಅವನೇ ಭೀಮಸೇನಗೆ
ಆಶ್ರಯದಾತನಾಗಿರುವ.
ಕೃಷ್ಣನಲ್ಲಿ
ವೈರತ್ವ ಮಾಡಲು ಹೊರಟ ಸೂಚನೆ,
ಪಾಪಿಷ್ಠ
ರಾಜಕುಮಾರರ ದುಷ್ಟ ಮಂತ್ರಾಲೋಚನೆ.
ತೈಃ ಪ್ರೇರಿತಾ ನೃಪತಯಃ ಪಿತರಶ್ಚ ತೇಷಾಂ ಸಾಕಂ ಬೃಹದ್ರಥಸುತೇನ ಹರೇಃ
ಸಕಾಶಮ್ ।
ಯುದ್ಧಾಯ ಜಗ್ಮುರಮುನಾsಷ್ಟದಶೇಷು ಯುದ್ಧೇಷ್ವತ್ಯನ್ತಭಗ್ನಬಲದರ್ಪ್ಪಮದಾ ನಿವೃತ್ತಾಃ ॥೧೪.೮೩॥
ಮಕ್ಕಳಿಂದ
ಪ್ರಚೋದಿತರಾದ ದುಷ್ಟರಾಜರ ಪಡೆ,
ಜರಾಸಂಧನೊಡಗೂಡಿ
ಕೃಷ್ಣನಮೇಲೆ ಯುದ್ಧದ ನಡೆ.
ಹದಿನೆಂಟು
ಯುದ್ಧಗಳಲ್ಲಿ ಅವರು ಉಂಡಿದ್ದು ಸೋಲು,
ಹಿಂದಿರುಗಿದವರ ಬಲ
ದರ್ಪ ಮದಗಳೆಲ್ಲ ಮಣ್ಣುಪಾಲು.
ತೇನಾsಗೃಹೀತಗಜವಾಜಿರಥಾ
ನಿತಾನ್ತಂ ಶಸ್ತ್ರೈಃ ಪರಿಕ್ಷತತನೂಭಿರಲಂ ವಮನ್ತಃ ।
ರಕ್ತಂ ವಿಶಸ್ತ್ರಕವಚಧ್ವಜವಾಜಿಸೂತಾಃ ಸ್ತ್ರಸ್ತಾಮ್ಬರಾಃ
ಶ್ಲಥಿತಮೂರ್ದ್ಧಜಿನೋ ನಿವೃತ್ತಾಃ ॥೧೪.೮೪॥
ಕೃಷ್ಣನಿಂದ ಸೋತವರು
ಕಳಕೊಂಡರು ಆನೆ ಕುದುರೆ ರಥ,
ಗಾಯಗೊಂಡವರಾಗಿ
ಬಳಲಿದರು ವಾಂತಿಮಾಡುತ್ತ ರಕ್ತ.
ಬಿಚ್ಚುಗೂದಲಿಂದ
ವಾಪಸಾದವರು ಶಸ್ತ್ರ ವಸ್ತ್ರ ಸರ್ವತ್ಯಕ್ತ.
ಏವಂ ಬೃಹದ್ರಥಸುತೋsಪಿ ಸುಶೋಚ್ಯರೂಪ ಆರ್ತ್ತೋ ಯಯೌ ಬಹುಶ ಏವ ಪುರಂ ಸ್ವಕೀಯಮ್ ।
ಕೃಷ್ಣೇನ ಪೂರ್ಣ್ಣಬಲವೀರ್ಯಗುಣೇನ ಮುಕ್ತೋ ಜೀವೇತ್ಯತೀವ ವಿಜಿತಃ
ಶ್ವಸಿತಾವಶೇಷಃ ॥೧೪.೮೫॥
ಹೀಗೆಯೇ ಬೃಹದ್ರಥನ
ಮಗನಾದ ಜರಾಸಂಧ,
ಅತ್ಯಂತ ಶೋಚನೀಯ
ಸಂಕಟದ ಸೋಲುಂಡ.
ಅನೇಕಬಾರಿ
ಆಗಿತ್ತವನಿಗೆ ಸರ್ವೋತ್ತಮನಿಂದ ಶಿಕ್ಷೆ,
ಬದುಕಿಕೋ ಹೋಗೆನುತ ಕೊಟ್ಟ ಉಸಿರೆಂಬ ಭಿಕ್ಷೆ.
No comments:
Post a Comment
ಗೋ-ಕುಲ Go-Kula