ನೈನಂ ಜಘಾನ ಭಗವಾನ್ ಸುಶಕಂ ಚ ಭೀಮೇ ಭಕ್ತಿಂ ನಿಜಾಂ ಪ್ರಥಯಿತುಂ ಯಶ
ಉಚ್ಚಧರ್ಮ್ಮಮ್ ।
[Contributed by Shri Govind Magal]
ಚೇದೀಶಪೌಣ್ಡ್ರಕಸಕೀಚಕಮದ್ರರಾಜಸಾಲ್ವೈಕಲವ್ಯಕಮುಖಾನ್
ವಿರಥಾಂಶ್ಚಕಾರ ॥೧೪.೩೧॥
ಭಗವಂತ ಸುಲಭವಾಗಿ ಜರಾಸಂಧನ ಕೊಲ್ಲಬಹುದಿತ್ತು,
ಆದರೆ ಭೀಮಸೇನಗೆ ಆ ಕೀರ್ತಿ ಮುಂದೆ ಕೊಡಲಿಕ್ಕೆ ಇತ್ತು.
ಹಾಗಾಗಿ ಜರಾಸಂಧನ ಕೊಲ್ಲದೇ ಉಳಿಸಿ ಇಟ್ಟನಾ ಕೃಷ್ಣವಾಸುದೇವ,
ರಥಹೀನರಾದರು-ಶಿಶುಪಾಲ ಪೌಂಡ್ರಕವಾಸುದೇವ ಕೀಚಕ ಶಲ್ಯ ಏಕಲವ್ಯ.
ಯೇ ಚಾಪಿ ಹಂಸಡಿಭಕದ್ರುಮರುಗ್ಮಿಮುಖ್ಯಾ
ಬಾಹ್ಲೀಕಭೌಮಸುತಮೈನ್ದಪುರಸ್ಸರಾಶ್ಚ ।
ಸರ್ವೇ ಪ್ರದುದ್ರು ವುರಜಸ್ಯ ಶರೈರ್ವಿಭಿನ್ನಾ ಅನ್ಯೇ ಚ ಭೂಮಿಪತಯೋ ಯ
ಇಹಾsಸುರುರ್ವ್ಯಾಮ್ ॥೧೪.೩೨॥
ಹಂಸ, ಡಿಬಕ, ದ್ರುಮ, ರುಗ್ಮಿ, ಬಾಹ್ಲೀಕ,ಭಗದತ್ತ,
ಮೈಂದ ಮೊದಲಾದ ರಾಜರ ಓಡಿಸಿದ ಭಗವಂತ.
ಛಿನ್ನಾಯುಧಧ್ವಜಪತಾಕರಥಾಶ್ವಸೂತವರ್ಮ್ಮಾಣ
ಉಗ್ರಶರತಾಡಿತಭಿನ್ನಗಾತ್ರಾಃ ।
ಸ್ರಸ್ತಾಮ್ಬರಾಭರಣಮೂರ್ದ್ಧಜಮಾಲ್ಯದೀನಾ ರಕ್ತಂ ವಮನ್ತ ಉರು ದುದ್ರುವುರಾಶು
ಭೀತಾಃ ॥೧೪.೩೩॥
ಆಯುಧ, ಧ್ವಜ, ಪತಾಕೆ, ರಥ, ಕುದುರೆ, ಸಾರಥಿ
ಮತ್ತು ಕವಚಗಳು,
ಜಾರಿದಬಟ್ಟೆ,ಆಭರಣ,ಕೂದಲು,ಮಾಲೆ, ಹೀನರಾದ
ರಾಜರ ಗೋಳು.
ಹೀನವಾಗಿ ದೀನರಾಗಿ ರಕ್ತಕಾರುತ್ತಾ ಓಡಿದ ರಾಜರು ಸಾಲು ಸಾಲು.
ಶೋಚ್ಯಾಂ ದಶಾಮುಪಗತೇಷು ನೃಪೇಷು ಸರ್ವೇಷ್ವಸ್ತಾಯುಧೇಷು ಹರಿಣಾ ಯುಧಿ
ವಿದ್ರವತ್ಸು ।
ನಾನಾಯುಧಾಢ್ಯಮಪರಂ ರಥಮುಗ್ರವೀರ್ಯ್ಯ ಆಸ್ಥಾಯ ಮಾಗಧಪತಿಃ ಪ್ರಸಸಾರ
ರಾಮಮ್॥೧೪.೩೪॥
ಹೀಗೆ ಎಲ್ಲ ರಾಜರೂ ಓಡುತ್ತಿರಲು ಕೃಷ್ಣನಿಂದಾಗಿ ನಿರಾಯುಧ,
ಮತ್ತೊಂದು ಶಸ್ತ್ರಭರಿತ ರಥವೇರಿ ಜರಾಸಂಧ ರಾಮನೆಡೆಗೆ ಬಂದ.
ಆಧಾವತೋsಸ್ಯ
ಮುಸಲೇನ ರಥಂ ಬಭಞ್ಜ ರಾಮೋ ಗದಾಮುರುತರೋರಸಿ ಸೋsಪಿ ತಸ್ಯ।
ಚಿಕ್ಷೇಪ ತಂ ಚ ಮುಸಲೇನ ತತಾಡ ರಾಮಸ್ತಾವುತ್ತಮೌ ಬಲವತಾಂ ಯುಯುಧಾತ
ಉಗ್ರಮ್॥೧೪.೩೫॥
ಬಲರಾಮ ತನ್ನೆಡೆಗೆ ಬಂದ ಜರಾಸಂಧನ ರಥವ ಮುಸಲದಿಂದ ಮುರಿದ,
ಜರಾಸಂಧ ಬಲರಾಮನ
ವಿಶಾಲ ಎದೆಯಮೇಲೆ ಗದಾಪ್ರಹಾರವ ಮಾಡಿದ.
ಬಲರಾಮನಾಗ
ಒನಕೆಯಿಂದ ಏಟು ಕೊಟ್ಟ,
ಸಾಗಿತ್ತು
ಬಲಿಷ್ಠರಲ್ಲಿ ಭೀಕರವಾದ ಹೋರಾಟ.
ತೌ ಚಕ್ರತುಃ ಪುರು ನಿಯುದ್ಧಮಪಿ ಸ್ಮ ತತ್ರ ಸಞ್ಚೂರ್ಣ್ಣ್ಯ ಸರ್ವಗಿರಿವೃಕ್ಷಶಿಲಾಸಮೂಹಾನ್ ।
ದೀರ್ಘಂ ನಿಯುದ್ಧಮಭವತ್ ಸಮಮೇತಯೋಸ್ತದ್ ವಜ್ರಾದ್
ದೃಢಾಙ್ಗತಮಯೋರ್ಬಲಿನೋರ್ನ್ನಿತಾನ್ತಮ್ ॥೧೪.೩೬॥
ವಜ್ರಕಾಯದ
ಅವರಿಬ್ಬರಿಂದ ನಡೆಯಿತು ಭಾರೀ ಮಲ್ಲಯುದ್ಧ,
ಸುತ್ತಮುತ್ತಲಿನ
ಬಂಡೆ ವೃಕ್ಷಗಳ ಪುಡಿ ಮಾಡಿದ ಮುಷ್ಠಿಯುದ್ಧ.[Contributed by Shri Govind Magal]
No comments:
Post a Comment
ಗೋ-ಕುಲ Go-Kula