Tuesday, 17 December 2019

ಮಹಾಭಾರತ ತಾತ್ಪರ್ಯನಿರ್ಣಯ, ಕನ್ನಡದಲ್ಲಿ 14: 61 - 65

ವೈಚಿತ್ರವೀರ್ಯ್ಯತನಯಾಃ ಕೃಪತೋ ಮಹಾಸ್ತ್ರಾಣ್ಯಾಪುಶ್ಚ ಪಾಣ್ಡುತನಯೈಃ ಸಹ ಸರ್ವರಾಜ್ಞಾಮ್ ।
ಪುತ್ರಾಶ್ಚ ತತ್ರ ವಿವಿಧಾ ಅಪಿ ಬಾಲಚೇಷ್ಟಾಃ ಕುರ್ವತ್ಸು ವಾಯುತನಯೇನ ಜಿತಾಃ ಸಮಸ್ತಾಃ ॥೧೪.೬೧॥
ಧೃತರಾಷ್ಟ್ರಪುತ್ರರು ಉಳಿದೆಲ್ಲ ರಾಜಪುತ್ರರು ಪಾಂಡವರಿಂದ ಕೂಡಿಕೊಂಡು,
ಗುರು ಕೃಪಾಚಾರ್ಯರಿಂದ ಪ್ರಾಥಮಿಕ ವಿದ್ಯಾಭ್ಯಾಸದ ಅಸ್ತ್ರಗಳ ಪಡೆದುಕೊಂಡು,
ಈ ಘಟ್ಟದಲ್ಲಿ ತರತರ ಆಟಗಳು ನಡೆಯುತ್ತಿರಲು,
ಎಲ್ಲರೂ ಎದುರಿಸುತ್ತಿದ್ದುದು ಭೀಮನಿಂದ ಸೋಲು.

ಪಕ್ವೋರುಭೋಜ್ಯಫಲಸನ್ನಯನಾಯ ವೃಕ್ಷೇಷ್ವಾರೂಢರಾಜತನಯಾನಭಿವೀಕ್ಷ್ಯ ಭೀಮಃ ।
ಪಾದಪ್ರಹಾರಮುರುವೃಕ್ಷತಳೇ ಪ್ರದಾಯ ಸಾಕಂ ಫಲೈರ್ವಿನಿಪತತ್ಸು ಫಲಾನ್ಯಭುಙ್ಕ್ತ ॥೧೪.೬೨॥
ಒಳ್ಳೊಳ್ಳೆಯ ಹಣ್ಣುಗಳ ಪಡೆಯಲೆಂದು,
ಮರವೇರುತ್ತಿದ್ದರು ರಾಜಪುತ್ರರು ಬಂದು,
ಭೀಮಸೇನ ಕೊಡುತ್ತಿದ್ದ ಮರದ ಬುಡಕ್ಕೊಂದು ಒದೆತ,
ಹಣ್ಣು ಮತ್ತು ಮಕ್ಕಳ ಬೀಳಿಸಿ, ಸುಖಿಸುತ್ತಿದ್ದ ಹಣ್ಣು ತಿನ್ನುತ.

ಯುದ್ಧೇ ನಿಯುದ್ಧ ಉತ ಧಾವನ ಉತ್ಪ್ಲವೇ ಚ ವಾರಿಪ್ಲವೇ ಚ ಸಹಿತಾನ್ ನಿಖಿಲಾನ್ ಕುಮಾರಾನ್ ।
ಏಕೋ ಜಿಗಾಯ ತರಸಾ ಪರಮಾರ್ಯ್ಯಕರ್ಮ್ಮಾ ವಿಷ್ಣೋಃ ಸುಪೂರ್ಣ್ಣಸದನುಗ್ರಹತಃ ಸುನಿತ್ಯಾತ್ ॥೧೪.೬೩॥
ಆಯುಧಯುದ್ಧ ಮಲ್ಲಯುದ್ಧ ಓಡುವಾಟ,
ಜಿಗಿಯುವಾಟ ನೀರಿಗೆ ಹಾರಿ ಈಜುವಾಟ,
ಏನೇ ಇರಲಿ ಎಲ್ಲದರಲ್ಲೂ ಭೀಮಸೇನನದೇ ಗೆಲುವು,
ಶ್ರೇಷ್ಠಕರ್ಮ ಪೂರ್ಣಧರ್ಮದ ವಾಯುತತ್ವದ ಸುಳಿವು.

ಸರ್ವಾನ್ ಪ್ರಗೃಹ್ಯ ವಿನಿಮಜ್ಜತಿ ವಾರಿಮದ್ಧ್ಯೇ ಶ್ರಾನ್ತಾನ್ ವಿಸೃಜ್ಯ ಹಸತಿ ಸ್ಮ ಸ ವಿಷ್ಣುಪದ್ಯಾಮ್ ।
ಸರ್ವಾನುದೂಹ್ಯ ಚ ಕದಾಚಿದುರುಪ್ರವಾಹಾಂ ಗಙ್ಗಾಂ ಸುತಾರಯತಿ ಸಾರಸುಪೂರ್ಣ್ಣಪೌಂಸ್ಯಃ ॥೧೪.೬೪॥
ಸಾರಭೂತ ಪೂರ್ಣಜ್ಞಾನ ಬಲದ ಭೀಮಸೇನ ತಾನು,
ಎಲ್ಲರೊಂದಿಗೆ ಗಂಗಾಮಧ್ಯದಿ ಮುಳುಗುತ್ತಿದ್ದ ಅವನು.
ಬಳಲವರು ಅವರ ಬಿಟ್ಟು ತಾನು ನಗುತಲಿದ್ದ,
ಪ್ರವಾಹದ ಗಂಗೆಯ ಎಲ್ಲರ ಹೊತ್ತು ದಾಟಿಸುತ್ತಿದ್ದ.

ದ್ವೇಷಂ ಹ್ಯೃತೇ ನಹಿ ಹರೌ ತಮಸಿ ಪ್ರವೇಶಃ ಪ್ರಾಣೇ ಚ ತೇನ ಜಗತೀಮನು ತೌ ಪ್ರಪನ್ನೌ।
ತತ್ಕಾರಣಾನ್ಯಕುರುತಾಂ ಪರಮೌ ಕರಾಂಸಿ ದೇವದ್ವಿಷಾಂ ಸತತವಿಸ್ತೃತಸಾಧುಪೌಂಸ್ಯೌ ॥೧೪.೬೫॥
ಭೀಮಸೇನ ಈ ರೀತಿ ಮಾಡುವುದಕ್ಕೆ ಕಾರಣ,
ಆಚಾರ್ಯರಿಂದ ತಾತ್ವಿಕ ಹಿನ್ನೆಲೆ ಅರ್ಥದ ಹೂರಣ.
ಇರದೇ ಭಗವಂತ- ಮುಖ್ಯಪ್ರಾಣನಲ್ಲಿ ದ್ವೇಷ,
ಸಾಧ್ಯವಿಲ್ಲ ಅದು ಯಾರಿಗೂ ತಮಸ್ಸಿಗೆ ಪ್ರವೇಶ.
ವಿಸ್ತೃತ ಜ್ಞಾನ ಶಕ್ತಿಗಳ ನೈಜಮೂಲ ಕೃಷ್ಣ ಮತ್ತು ಭೀಮ,
ದೈತ್ಯರಲ್ಲಿ ದೈವದ್ವೇಷ ಹುಟ್ಟಿಸಲೆಂದೇ ಕರ್ಮಗಳ ನೇಮ.
[Contributed by Shri Govind Magal]

No comments:

Post a Comment

ಗೋ-ಕುಲ Go-Kula