Friday 20 December 2019

ಮಹಾಭಾರತ ತಾತ್ಪರ್ಯನಿರ್ಣಯ, ಕನ್ನಡದಲ್ಲಿ 14: 96 - 104

ಸೋsಯಾದ್ ಗಜಾಹ್ವಯಮಮುತ್ರ ವಿಚಿತ್ರವೀರ್ಯ್ಯಪುತ್ರೇಣ ಭೀಷ್ಮಸಹಿತೈಃ ಕುರುಭಿಃ ಸಮಸ್ತೈಃ ।
ಸಮ್ಪೂಜಿತಃ ಕತಿಪಯಾನವಸಚ್ಚ ಮಾಸಾನ್ ಜ್ಞಾತುಂ ಹಿ ಪಾಣ್ಡುಷು ಮನಃಪ್ರಸೃತಿಂ ಕುರೂಣಾಮ್ ॥೧೪.೯೬॥
ಹಸ್ತಿನಪುರಕ್ಕೆ ಹೊರಟು ತಲುಪಿದ ಅಕ್ರೂರ,
ಧೃತರಾಷ್ಟ್ರ ಭೀಷ್ಮಾದಿಗಳಿಂದವಗೆ ಪ್ರೀತಿ ಆದರ.
ಅರಿಯಲು ಪಾಂಡವರ ಬಗ್ಗೆ ಕೌರವರ ಮನಃಪ್ರವೃತ್ತಿ,
ಕೆಲವು ತಿಂಗಳುಗಳ ಕಾಲ ಅಕ್ರೂರ ಮಾಡಿದ ಅಲ್ಲೇ ವಸ್ತಿ.

ಜ್ಞಾತ್ವಾ ಸ ಕುನ್ತಿವಿದುರೋಕ್ತಿತ ಆತ್ಮನಾ ಚ ಮಿತ್ರಾರಿಮಧ್ಯಮಜನಾಂಸ್ತನಯೇಷು ಪಾಣ್ಡೋಃ ।
ವಿಜ್ಞಾಯ ಪುತ್ರವಶಗಂ ಧೃತರಾಷ್ಟ್ರಮಞ್ಜಃ  ಸಾಮ್ನೈವ ಭೇದಸಹಿತೇನ ಜಗಾದ ವಿದ್ವಾನ್ ॥೧೪.೯೭॥
ಜ್ಞಾನಿ ಅಕ್ರೂರ ಕುಂತಿ ಹಾಗೂ ವಿದುರರ ಮಾತುಗಳಿಂದ,
ತನ್ನ ಮತಿಯಿಂದ ಪಾಂಡುಪುತ್ರರ ಸ್ಥಿತಿಗತಿ ತಿಳಿದುಕೊಂಡ.
ಅವರ ಶತ್ರುಗಳ್ಯಾರು, ಮಿತ್ರರ್ಯಾರು, ತಟಸ್ಥರ್ಯಾರೆಂಬ ವಿಷಯ,
ಪುತ್ರವಶ ಧೃತರಾಷ್ಟ್ರಗೆ ತಿಳಿಸಿಹೇಳಿದ ಮಾಡುತ್ತಾ ಸಾಮೋಪಾಯ.

ಪುತ್ರೇಷು ಪಾಣ್ಡುತನಯೇಷು ಚ ಸಾಮ್ಯವೃತ್ತಿಃ ಕೀರ್ತ್ತಿಂ ಚ ಧರ್ಮ್ಮಮುರುಮೇಷಿ ತಥಾsರ್ತ್ಥಕಾಮೌ ।
ಪ್ರೀತಿಂ ಪರಾಂ ತ್ವಯಿ ಕರಿಷ್ಯತಿ ವಾಸುದೇವಃ ಸಾಕಂ ಸಮಸ್ತಯದುಭಿಃ ಸಹಿತಃ ಸುರಾದ್ಯೈಃ ॥೧೪.೯೮॥
ನಿನ್ನ ಮಕ್ಕಳಾಗಿರುವ ಪಾಂಡವರಲ್ಲಿ ನೀನು ತೋರಲು ಸಮನೀತಿ,
ಹೊಂದುವೆ ನೀನು ಉತ್ಕೃಷ್ಟಮಯವಾದ ಧರ್ಮಾರ್ಥಕಾಮ ಕೀರ್ತಿ.
ದೇವತೆಗಳು ಯಾದವರು ಕೃಷ್ಣನಿಂದ ನಿನಗೆ ಲಭ್ಯವಾಗುವುದು ಪ್ರೀತಿ.

ಧರ್ಮ್ಮಾರ್ತ್ಥಕಾಮಸಹಿತಾಂ ಚ ವಿಮುಕ್ತಿಮೇಷಿ ತತ್ಪ್ರೀತಿತಃ ಸುನಿಯತಂ ವಿಪರೀತವೃತ್ತಿಃ ।
ಯಾಸ್ಯೇವ ರಾಜವರ ತತ್ಫಲವೈಪರೀತ್ಯಮಿತ್ಥಂ ವಚೋ ನಿಗದಿತಂ ತವ ಕಾರ್ಷ್ಣಮಧ್ಯ ॥೧೪.೯೯॥
ಭಗವಂತ ಪ್ರೀತನಾಗಲು ನಿನ್ನೆಡೆಗೆ,
ಹೊಂದುವೆ ಧರ್ಮಾರ್ಥಕಾಮ-ಮೋಕ್ಷ ಕಡೆಗೆ.
ತೋರಿದರೆ ಇದಕ್ಕೆ ವಿರುದ್ಧವಾದ ಪ್ರವೃತ್ತಿ,
ಎಲ್ಲಿಯೂ ಸಲ್ಲದ ವಿಪರೀತ ಫಲದ ಗತಿ.
ಇದು ಶ್ರೀಕೃಷ್ಣನೇ ಕಳಿಸಿರುವ ಸಂದೇಶ,
ನನ್ನ ಮುಖೇನ ಬಂದಿರುವ ಉಪದೇಶ.

ಇತ್ಥಂ ಸಮಸ್ತಕುರುಮದ್ಧ್ಯ  ಉಪಾತ್ತವಾಕ್ಯೋ ರಾಜಾsಪಿ ಪುತ್ರವಶಗೋ ವಚನಂ ಜಗಾದ ।
ಸರ್ವಂ ವಶೇ ಭಗವತೋ ನ ವಯಂ ಸ್ವತನ್ತ್ರಾ ಭೂಭಾರಸಂಹೃತಿಕೃತೇ ಸ ಇಹಾವತೀರ್ಣ್ಣಃ ॥೧೪.೧೦೦॥
ಕೌರವರ ಮಧ್ಯದಲ್ಲಿದ್ದ ಧೃತರಾಷ್ಟ್ರಗೆ ಅಕ್ರೂರನಿಂದ ಕೃಷ್ಣಸಂದೇಶ,
ಕೇಳಿಸಿಕೊಂಡು ಮಾತಾಡಿದರೂ ಅವನಾಗಿದ್ದ ಪೂರ್ಣ ಪುತ್ರವಶ.
ಪುತ್ರಾಧೀನ ತಂದೆ ಹೇಳುತ್ತಾನೆ ಎಲ್ಲವೂ ಭಗವದಧೀನ,
ಭೂಭಾರಹರಣಕ್ಕಾಗಿಯೇ ಆಗಿದೆ ಅವನ ಅವತರಣ.

ಏತನ್ನಿಶಮ್ಯ ವಚನಂ ಸ ತು ಯಾದವೋsಸ್ಯ ಜ್ಞಾತ್ವಾ ಮನೋsಸ್ಯ ಕಲುಷಂ ತವ ನೈವ ಪುತ್ರಾಃ ।
ಇತ್ಯೂಚಿವಾನ್ ಸಹ ಮರುತ್ತನಯಾರ್ಜ್ಜುನಾಭ್ಯಾಂ ಪ್ರಾಯಾತ್ ಪುರೀಂ ಚ ಸಹದೇವಯುತಃ ಸ್ವಕೀಯಾಮ್ ॥೧೪.೧೦೧॥
ಧೃತರಾಷ್ಟ್ರನ ಮಾತಕೇಳಿದ ಅಕ್ರೂರಗಾಯಿತು ಅಂಧಕನ ಮನವೆಷ್ಟು ಕಲುಷಿತ,
ಹೇಳುತ್ತಾನೆ -ನಿನ್ನ ಮಕ್ಕಳೆಂದೂ ಒಳ್ಳೇ ಕೀರ್ತಿ ಪಡೆಯಲಾರರು ಇದು ಖಚಿತ.
ಭೀಮಾರ್ಜುನರು ಸಹದೇವನ ಕೂಡಿಕೊಂಡು ಹೊರಟ ಮಧುರಾಪಟ್ಟಣದತ್ತ.

ಜ್ಞಾನಂ ತು ಭಾಗವತಮುತ್ತಮಮಾತ್ಮಯೋಗ್ಯಂ ಭೀರ್ಮಾರ್ಜ್ಜುನೌ ಭಗವತಃ ಸಮವಾಪ್ಯ ಕೃಷ್ಣಾತ್ ।
ತತ್ರೋಷತುರ್ಭಗವತಾ ಸಹ ಯುಕ್ತಚೇಷ್ಟೌ ಸಮ್ಪೂಜಿತೌ ಯದುಭಿರುತ್ತಮಕರ್ಮ್ಮಸಾರೌ ॥೧೪.೧೦೨॥
ಭೀಮಾರ್ಜುನರು ಮಧುರಾಪಟ್ಟಣದಲ್ಲಿ ಭಗವಾನ್ ಕೃಷ್ಣನಿಂದ,
ಹೊಂದಿದರು ಭಗವತ್ಸಂಬಂಧಿ ಜ್ಞಾನವ ಅನುಸರಿಸಿ ಯೋಗ್ಯತೆಯಿಂದ.
ಸತ್ಕ್ರಿಯೆಯಲ್ಲಿ ವಾಸಿಸುತ್ತಾ ಅಲ್ಲಿ ಪೂಜಿಸಲ್ಪಟ್ಟರು ಯದುಗಳಿಂದ.

ಪ್ರತ್ಯುದ್ಯಮೋ ಭಗವತಾsಪಿ ಭವೇದ್ ಗದಾಯಾಃ ಶಿಕ್ಷಾ ಯದಾ ಭಗವತಾ ಕ್ರಿಯತೇ ನಚೇಮಮ್ ।
ಕುರ್ಯ್ಯಾಮಿತಿ ಸ್ಮ ಭಗವತ್ಸಮನುಜ್ಞಯೈವ ರಾಮಾದಶಿಕ್ಷದುರುಗಾಯಪುರಃ ಸ ಭೀಮಃ ॥೧೪.೧೦೩॥
ಯಾವಾಗ ಕೃಷ್ಣನಿಂದಲೇ ಕಲಿಯಬೇಕಾಗುತ್ತದೋ ಗದಾಯುದ್ಧ,
ಅವನ ವಿರುದ್ಧ ಗದೆಯೆತ್ತಲು ನಾನೂ ಆಗಬೇಕಾಗುತ್ತದೆ ಬದ್ಧ.
ಹಾಗೆ ಮಾಡಲಾರೆನೆಂದ ಭೀಮ ಕೃಷ್ಣನಾಜ್ಞೆ ಪಡೆಯುತ್ತ,
ಬಲರಾಮನೊಡನೆ ಅಭ್ಯಸಿಸಿದ ವಿನಯಶೀಲ ಗುಣವಂತ.

ರಾಮೋsಪಿ ಶಿಕ್ಷಿತಮರೀನ್ದ್ರಧರಾತ್ ಪುರೋsಸ್ಯ ಭೀಮೇ ದದಾವಥ ವರಾಣಿ ಹರೇರವಾಪ ।
ಅಸ್ತ್ರಾಣಿ ಶಕ್ರತನಯಃ ಸಹದೇವ ಆರ ನೀತಿಂ ತಥೋದ್ಧವಮುಖಾತ್ ಸಕಲಾಮುದಾರಾಮ್ ॥೧೪.೧೦೪॥
ಬಲರಾಮ ಕೃಷ್ಣನಿಂದ ಕಲಿತಂಥ ಎಲ್ಲಾ ಪಾಠ,
ಕೃಷ್ಣಸಮ್ಮುಖದಲ್ಲೇ ಭೀಮಗೆ ತಾ ಕಲಿಸಿಕೊಟ್ಟ.
ಅರ್ಜುನ ಕೃಷ್ಣನಿಂದಲೇ ಉತ್ತಮ ಅಸ್ತ್ರಗಳ ಪಡೆದ,
ಸಹದೇವ ಉದ್ಧವನಿಂದ ನೀತಿಶಾಸ್ತ್ರ ಕಲಿತವನಾದ. 

No comments:

Post a Comment

ಗೋ-ಕುಲ Go-Kula