Tuesday 17 December 2019

ಮಹಾಭಾರತ ತಾತ್ಪರ್ಯನಿರ್ಣಯ, ಕನ್ನಡದಲ್ಲಿ 14:55 - 60

ಪಾಣ್ಡೋಃ ಸುತಾಶ್ಚ ಪೃಥಯಾ ಸಹಿತಾ ಮುನೀನ್ದ್ರೈರ್ನ್ನಾರಾಯಣಾಶ್ರಮತ ಆಶು ಪುರಂ ಸ್ವಕೀಯಮ್ ।
ಜಗ್ಮುಸ್ತಥೈವ ಧೃತರಾಷ್ಟ್ರಪುರೋ ಮುನೀನ್ದ್ರಾಃ ವೃತ್ತಂ ಸಮಸ್ತಮವದನ್ನನುಜಂ ಮೃತಂ ಚ ॥೧೪.೫೫॥
ಪಾಂಡುಪುತ್ರರು ಕುಂತಿ ಹಾಗೂ ಅಲ್ಲಿದ್ದ ಮುನಿಗಳ ವೃಂದ,
ಹಸ್ತಿನವತಿಗೆ ಬಂದರು ಬದರಿನಾರಾಯಣ ಆಶ್ರಮದಿಂದ.
ಮುನಿಗಳಿಂದ ಧೃತರಾಷ್ಟ್ರಗೆ ನಡೆದ ಎಲ್ಲಾ ಘಟನೆಗಳ ವಿವರ,
ತಮ್ಮನಾದ ಪಾಂಡು  ಕಾಡಿನಲ್ಲಿ ಮರಣಹೊಂದಿದ ವಿಚಾರ.

ತೂಷ್ಣೀಂ ಸ್ಥಿತೇ ತು ನೃಪತೌ ತನುಜೇ ಚ ನದ್ಯಾಃ ಕ್ಷತ್ತರ್ಯ್ಯುತಾsಪ್ತ ಉರುಮೋದಮತೀವ ಪಾಪಾಃ ।
ಊಚುಃ ಸುಯೋಧನಮುಖಾಃ ಸಹ ಸೌಬಲೇನ ಪಾಣ್ಡೋರ್ಮ್ಮೃತಿಃ ಕಿಲ ಪುರಾ ತನಯಾಃ ಕ್ವ ತಸ್ಯ ॥೧೪.೫೬॥
ನ ಕ್ಷೇತ್ರಜಾ ಅಪಿ ಮೃತೇ ಪಿತರಿ ಸ್ವಕೀಯೈಃ ಸಮ್ಯಙ್ ನಿಯೋಗಮನವಾಪ್ಯ ಭವಾಯ ಯೋಗ್ಯಾಃ ।
ತೇಷಾಮಿತೀರಿತವಚೋsನು ಜಗಾದ ವಾಯುರಾಭಾಷ್ಯ ಕೌರವಗಣಾನ್ ಗಗನಸ್ಥ ಏವ ॥೧೪.೫೭॥
ಧೃತರಾಷ್ಟ್ರ ಭೀಷ್ಮ ವಹಿಸಲು ಮೌನ,
ವಿದುರ ಅನುಭವಿಸಿದ ಸುಖದ ಕ್ಷಣ.
ಪಾಪಿಷ್ಠ ದುರ್ಯೋಧನಾದಿಗಳು ಶಕುನಿಯೊಡಗೂಡಿ,
ಮುನಿಗಳಿಗೆ ಹರಿಸಲಾರಂಭಿಸಿದರು ಪ್ರಶ್ನೆಗಳ ಕೋಡಿ.
ಮೊದಲಾಗಿತ್ತಲ್ಲವೇ ಪಾಂಡುವಿನ ಮರಣ,
ಅವ ಸತ್ತಮೇಲೆ ಮಕ್ಕಳಾಗಲು ಯಾರು ಕಾರಣ.
ತಂದೆಯ ಮರಣಾನಂತರ ಅವರದಾಗಿದ್ದರೆ ಜನನ,
ಅವರು ವಾರಸುದಾರರು ಎಂದಾಗುವುದಿಲ್ಲ ಮಾನ್ಯ.
ನಿಯೋಗ ಪದ್ಧತಿಗೆ ಖಚಿತವಾಗಿ ಆಗಿದೆ ಊನ,
ಅವರಿಲ್ಲಿರಲು ಇಲ್ಲ ಯೋಗ್ಯತೆ -ತುಂಬಾ ಹೀನ.
ನಡೆದಿರಲು ದುರ್ಯೋಧನಾದಿಗಳ ಅಸಂಬದ್ಧ ವಾದ,
ಗಗನದಿಂದ ಬಂದಿತ್ತು ಮುಖ್ಯಪ್ರಾಣನ ಮಾತಿನ ನಾದ.

ಏತೇ ಹಿ ಧರ್ಮ್ಮಮರುದಿನ್ದ್ರಭಿಷಗ್ವರೇಭ್ಯೋ ಜಾತಾಃ ಪ್ರಜೀವತಿ ಪಿತರ್ಯ್ಯುರುಧಾಮಸಾರಾಃ ।
ಶಕ್ಯಾಶ್ಚ ನೈವ ಭವತಾಂ ಕ್ವಚಿದಗ್ರಹಾಯ ನಾರಾಯಣೇನ ಸತತಂ ಪರಿರಕ್ಷಿತಾ ಯತ್ ॥೧೪.೫೮॥
ಧರ್ಮರಾಜ, ಮುಖ್ಯಪ್ರಾಣ, ಇಂದ್ರ, ಅಶ್ವಿದೇವತೆಗಳು,
ಪಾಂಡುವಿರುವಾಗಲೇ ಪಾಂಡವರ ಜನ್ಮದಾತದೇವತೆಗಳು.
ಎಲ್ಲದಕ್ಕೂ ಸಾಕ್ಷಿಯಾದ ಅಂತರ್ಯಾಮಿಯಾದ ಭಗವಂತ,
ಅವನ ರಕ್ಷಣೆಯಲ್ಲಿರುವವರ ಒಪ್ಪದಿರುವುದದು ಅಸಮ್ಮತ. 

ವಾಯೋರದೃಶ್ಯವಚನಂ ಪರಿಶಙ್ಕಮಾನೇಷ್ವಾವಿರ್ಬಭೂವ ಭಗವಾನ್ ಸ್ವಯಮಬ್ಜನಾಭಃ ।
ವ್ಯಾಸಸ್ವರೂಪ ಉರುಸರ್ವಗುಣೈಕದೇಹ ಆದಾಯ ತಾನಗಮದಾಶು ಚ ಪಾಣ್ಡುಗೇಹಮ್ ॥೧೪.೫೯॥
ಕಾಣದಂತೆ ಬಂದ ಮುಖ್ಯಪ್ರಾಣನ ಆ ನುಡಿ,
ದುರ್ಯೋಧನಾದಿಗಳಿಗೆ ಹೊತ್ತಿಸಿತು ಶಂಕೆಯ ಕಿಡಿ.
ಷಡ್ಗುಣೈಶ್ವರ್ಯ ಸಂಪನ್ನ ಭಗವಂತ ವ್ಯಾಸರಾಗಿ ಮೈದಾಳಿ ಬಂದ,
ಗುಣಸಾಗರನಾದ ಅವನು ಪಾಂಡವರನ್ನು  ಅವರರಮನೆಗೇ ಒಯ್ದ.

ತತ್ಸ್ವೀಕೃತೇಷು ಸಕಲಾ ಅಪಿ ಭೀಷ್ಮಮುಖ್ಯಾ ವೈಚಿತ್ರವೀರ್ಯ್ಯಸಹಿತಾಃ ಪರಿಪೂಜ್ಯ ಸರ್ವಾನ್ ।
ಕುನ್ತ್ಯಾ ಸಹೈವ ಜಗೃಹುಃ ಸುಭೃಶಂ ತದಾsರ್ತ್ತಾ ವೈಚಿತ್ರವೀರ್ಯ್ಯತನಯಾಃ ಸಹ ಸೌಬಲೇನ॥೧೪.೬೦ ॥
ವೇದವ್ಯಾಸರೇ ಬಂದು ಪಾಂಡವರನ್ನು ಮಾಡಲು ಸ್ವೀಕಾರ,
ದೃತರಾಷ್ಟ್ರ ಭೀಷ್ಮಾದಿಗಳಿಂದಲೂ ಗೌರವದಿಂದ ಅಂಗೀಕಾರ.
ಕುಂತೀ ಮತ್ತು ಮಕ್ಕಳೆಲ್ಲರೂ ಸೇರಿದರು ಪಾಂಡುವಿನ ಅರಮನೆ,
ಧೃತರಾಷ್ಟ್ರಪುತ್ರರು ಶಕುನಿ ಇತರರಿಗೆಲ್ಲ ಅದಾಯಿತು ದುಃಖದಬೇನೆ.
[Contributed by Shri Govind Magal] 

No comments:

Post a Comment

ಗೋ-ಕುಲ Go-Kula