ಸರ್ವಾಂ ಪುರೀಂ ಪ್ರತಿನಿರುದ್ಧ್ಯ ದಿದೇಶ ವಿನ್ದವಿನ್ದಾನುಜೌ ಭಗವತಃ
ಕುಮತಿಃ ಸ ದೂತೌ ।
ತಾವೂಚತುರ್ಭಗವತೇsಸ್ಯ ವಚೋsತಿದರ್ಪ್ಪಪೂರ್ಣ್ಣಂ
ತಥಾ ಭಗವತೋsಪ್ಯಪಹಾಸಯುಕ್ತಮ್
॥೧೪.೧೬॥
ಮಧುರಾಪಟ್ಟಣವನ್ನು
ಎಲ್ಲೆಡೆಯಿಂದ ಮುತ್ತಿಗೆ ಹಾಕಿದ ಜರಾಸಂಧ,
ತನ್ನ ದೂತರನ್ನಾಗಿ
ಕೃಷ್ಣನಲ್ಲಿಗೆ ಕಳಿಸಿದ್ದು ವಿಂದ ಮತ್ತು ಅನುವಿಂದ.
ಅವರಾಡಿದ ಮಾತು
ತುಂಬಿಕೊಂಡಿತ್ತು ಅಪಹಾಸ್ಯ ಮತ್ತು ದರ್ಪದಿಂದ.
ಲೋಕೇ(s)ಪ್ರತೀತಬಲಪೌರುಷಸಾರರೂಪಸ್ತ್ವಂ
ಹ್ಯೇಕ ಏಷ್ಯಭವತೋ ಬಲವೀರ್ಯ್ಯಸಾರಮ್ ।
ಜ್ಞಾತ್ವಾ ಸುತೇ ನತು ಮಯಾ ಪ್ರತಿಪಾದಿತೇ ಹಿ ಕಂಸಸ್ಯ ವೀರ್ಯ್ಯರಹಿತೇನ
ಹತಸ್ತ್ವಯಾ ಸಃ ॥೧೪.೧೭॥
ಸೋsಹಂ ಹಿ
ದುರ್ಬಲತಮೋ ಬಲಿನಾಂ ವರಿಷ್ಠಂ ಕೃತ್ವೈವ ದೃಷ್ಟಿವಿಷಯಂ ವಿಗತಪ್ರತಾಪಃ ।
ಯಾಸ್ಯೇ ತಪೋವನಮಥೋ ಸಹಿತಃ ಸುತಾಭ್ಯಾಂ ಕ್ಷಿಪ್ರಂ ಮಮಾದ್ಯ ವಿಷಯೇ ಭವ
ಚಕ್ಷುಷೋsತಃ
॥೧೪.೧೮॥
ನಾನು ಮಕ್ಕಳನ್ನು
ಕೊಟ್ಟ ಕಂಸ ಏನೂ ಕೈಲಾಗದವನು,
ಅರಿಯದಾದೆ-ನೀನು ಪರಾಕ್ರಮಿ
ಬಲವೀರ್ಯ ಉಳ್ಳವನು.
ನಿನ್ನಿಂದಾಗಿದೆ
ಕಂಸನ ಸಂಹಾರ,
ನಾನು ದುರ್ಬಲ
ಅತ್ಯಂತ ನಿಸ್ಸಾರ.
ನಿನ್ನನ್ನೊಮ್ಮೆ
ನೋಡಬೇಕಿದೆ ಕಂಸವೈರಿ,
ಹಿಡಿವೆ ನಂತರ
ಮಕ್ಕಳೊಂದಿಗೆ ಕಾಡದಾರಿ.
ಮಾತವನದು
ಬಾರಿಸಿತ್ತು ದರ್ಪ ವ್ಯಂಗದ ನಗಾರಿ.
ಸಾಕ್ಷೇಪಮೀರಿತಮಿದಂ ಬಲದರ್ಪ್ಪಪೂರ್ಣ್ಣಮಾತ್ಮಾಪಹಾಸಸಹಿತಂ ಭಗವಾನ್
ನಿಶಮ್ಯ ।
ಸತ್ಯಂ ತದಿತ್ಯುರು ವಚೋsರ್ತ್ಥವದಭ್ಯುದೀರ್ಯ್ಯ ಮನ್ದಂ ಪ್ರಹಸ್ಯ ನಿರಗಾತ್ ಸಹಿತೋ
ಬಲೇನ॥೧೪.೧೯॥
ಜರಾಸಂಧನ
ಮಾತಾಗಿತ್ತು ಆಕ್ಷೇಪಗರ್ಭಿತ,
ಬಲ
ದರ್ಪಪೂರ್ಣವೆಂದರಿತ ಭಗವಂತ.
ಕೃಷ್ಣ
ಹೌದೆಂದುಕೊಳ್ಳುತ್ತಾ ಶುರುಮಾಡಿದ ಆಟ,
ನಗುತ್ತಾ ಬಲರಾಮನ
ಕೂಡಿ ಯುದ್ಧಕೆ ಹೊರಟ.
ದ್ವಾರೇಷು ಸಾತ್ಯಕಿಪುರಸ್ಸರಮಾತ್ಮಸೈನ್ಯಂ ತ್ರಿಷ್ವಭ್ಯುದೀರ್ಯ್ಯ
ಭಗವಾನ್ ಸ್ವಯಮುತ್ತರೇಣ ।
ರಾಮದ್ವಿತೀಯ ಉದಗಾನ್ಮಗಧಾಧಿರಾಜಂ ಯೋದ್ಧುಂ ನೃಪೇನ್ದ್ರಕಟಕೇನ ಯುತಂ
ಪರೇಶಃ ॥೧೪.೨೦॥
ಮೂರು ದಿಕ್ಕುಗಳಿಗೆ
ಸಾತ್ಯಕಿಯನ್ನು ಮಾಡಿದ ಸೈನ್ಯದ ಮುಂದಾಳು,
ಉತ್ತರದಿಂದ
ಬಲರಾಮನೊಂದಿಗೆ ಹೊರಟ ಕೃಷ್ಣ ಜರಾಸಂಧನೆದುರಿಸಲು.
ಜರಾಸಂಧನ
ಸೈನ್ಯದೊಂದಿಗಿದ್ದರು ದೇಶದ ದೊಡ್ಡ ದೊಡ್ಡ ರಾಜರುಗಳು.
No comments:
Post a Comment
ಗೋ-ಕುಲ Go-Kula