Monday 23 September 2019

ಮಹಾಭಾರತ ತಾತ್ಪರ್ಯನಿರ್ಣಯ, ಕನ್ನಡದಲ್ಲಿ 14: 11 - 15

ಕ್ಷುಬ್ಧೋsತಿಕೋಪವಶತಃ ಸ್ವಗದಾಮಮೋಘಾಂ ದತ್ತಾಂ ಶಿವೇನ ಜಗೃಹೇ ಶಿವಭಕ್ತವನ್ದ್ಯಃ ।
ಶೈವಾಗಮಾಖಿಲವಿದತ್ರ ಚ ಸುಸ್ಥಿರೋsಸೌ ಚಿಕ್ಷೇಪ ಯೋಜನಶತಂ ಸ ತು ತಾಂ ಪರಸ್ಮೈ ॥೧೪.೧೧॥
ಶೈವಾಗಮಗಳಲ್ಲಿ ಸರ್ವಜ್ಞ ಮತ್ತು ನಿಷ್ಠೆಯಿದ್ದವ ಜರಾಸಂಧ,
ಸಿಟ್ಟಿನಿಂದ ವ್ಯರ್ಥವಾಗದ ಶಿವಕೊಟ್ಟ ಗದೆಯನ್ನು ಹಿಡಿದ.
ಮಗಧದಿಂದ ನೂರುಯೋಜನಕ್ಕೆ ಕೃಷ್ಣನೆಂದು ಗದೆ ಎಸೆದ.

ಅರ್ವಾಕ್ ಪಪಾತ ಚ ಗದಾ ಮಧುರಾಪ್ರದೇಶಾತ್ ಸಾ ಯೋಜನೇನ ಯದಿಮಂ ಪ್ರಜಗಾದ ಪೃಷ್ಟಃ ।
ಏಕೋತ್ತರಾಮಪಿ ಶತಾಚ್ಛತಯೋಜನೇತಿ ದೇವರ್ಷಿರತ್ರ ಮಧುರಾಂ ಭಗವತ್ಪ್ರಿಯಾರ್ತ್ಥೇ ॥೧೪.೧೨॥
ಜರಾಸಂಧ ಕೃಷ್ಣಗೆ ಎಸೆದ ಆ ಗದೆ,
ಬಿದ್ದದ್ದು ಒಂದು ಯೋಜನ ಹಿಂದೆ.
ಜರಾಸಂಧನಿಂದ ಕೇಳಲ್ಪಟ್ಟ ದೇವಋಷಿ ನಾರದರು,
ಭಗವತ್ಪ್ರೀತಿಗಾಗಿ ನೂರೊಂದಿದ್ದರೂ ನೂರೆಂದು ಹೇಳಿದ್ದರು.

ಶಕ್ತಸ್ಯ ಚಾಪಿ ಹಿ ಗದಾಪ್ರವಿಘಾತನೇ ತು ಶುಶ್ರೂಷಣಂ ಮದುಚಿತಂ ತ್ವಿತಿ ಚಿನ್ತಯಾನಃ ।
ವಿಷ್ಣೋರ್ಮ್ಮುನಿಃ ಸ ನಿಜಗಾದ ಹ ಯೋಜನೋನಂ ಮಾರ್ಗ್ಗಂ ಪುರೋ ಭಗವತೋ ಮಗಧೇಶಪೃಷ್ಟಃ ॥೧೪.೧೩ ॥

ಗದೆ ಎದುರಿಸಲು ಕೃಷ್ಣನಾಗಿದ್ದ ಸದಾ ಶಕ್ತ,
ನಾರದರ ಯೋಚನೆ ಭಗವತ್ಸೇವೆಗಿದು ಸೂಕ್ತ.
ನುಡಿದರು ಮಧುರೆ ಒಂದು ಯೋಜನೆ ಕಡಿಮೆಯಂತ.

ಕ್ಷಿಪ್ತಾ ತು ಸಾ ಭಗವತೋsಥ ಗದಾ ಜರಾಖ್ಯಾಂ ತತ್ಸನ್ಧಿನೀಮಸುಭಿರಾಶು ವಿಯೋಜ್ಯ ಪಾಪಾಮ್ ।
ಮರ್ತ್ತ್ಯಾಶಿನೀಂ ಭಗವತಃ ಪುನರಾಜ್ಞಯೈವ ಯಾತಾ ಗಿರೀಶಸದನಂ ಮಗಧಂ ವಿಸೃಜ್ಯ ॥೧೪.೧೪ ॥
ಕೃಷ್ಣಗೆಂದು ಜರಾಸಂಧ ಎಸೆದ ಆ ಗದೆ,
ಜರೆಗೆ ಕೊಟ್ಟಿತ್ತು ಪ್ರಾಣಾಂತಿಕವಾದ ಒದೆ.
ಜರೆ ಜರಾಸಂಧನ ದೇಹ ಜೋಡಿಸಿದ ಅವನ ಅಮ್ಮ,
ಭಗವದಾಜ್ಞೆಯಂತೆ ಗದೆ ಜರೆಮುಗಿಸಿ ಕೈಲಾಸ ಸೇರಿದ ಮರ್ಮ.

ರಾಜಾ ಸ್ವಮಾತೃತ ಉತೋ ಗದಯಾ ಚ ಹೀನಃ ಕ್ರೋಧಾತ್ ಸಮಸ್ತನೃಪತೀನಭಿಸನ್ನಿಪಾತ್ಯ ।
ಅಕ್ಷೋಹಿಣೀತ್ರ್ಯಧಿಕವಿಂಶಯುತೋsತಿವೇಲದರ್ಪ್ಪೋದ್ಧತಃ ಸಪದಿ ಕೃಷ್ಣಪುರೀಂ ಜಗಾಮ ॥೧೪.೧೫॥
ಹೀಗೆ ಜರಾಸಂಧ ಗದೆ ಮತ್ತು ತಾಯಿಯನ್ನು ಕಳಕೊಂಡ ಬಗೆ,
ಎಲ್ಲ ರಾಜರ ಕಲೆಹಾಕಿದ ಹೊಂದಿ ಕೃಷ್ಣನಮೇಲೆ ತೀರದ ಹಗೆ.
ಇಪ್ಪತ್ಮೂರು ಅಕ್ಷೋಹಿಣಿ ಸೈನ್ಯದೊಂದಿಗೆ ಹೊರಟ ಮಧುರೆ ಕಡೆಗೆ.
[Contributed by Shri Govind Magal]

No comments:

Post a Comment

ಗೋ-ಕುಲ Go-Kula