Monday 23 September 2019

ಮಹಾಭಾರತ ತಾತ್ಪರ್ಯನಿರ್ಣಯ, ಕನ್ನಡದಲ್ಲಿ 14: 06 - 10

ಸರ್ವೇsಪಿ ತೇ ಪತಿಮವಾಪ್ಯ ಹರಿಂ ಪುರಾsಭಿತಪ್ತಾ ಹಿ ಭೋಜಪತಿನಾ ಮುಮುದುರ್ನ್ನಿತಾನ್ತಮ್ ।
ಕಿಂ ವಾಚ್ಯಮತ್ರ ಸುತಮಾಪ್ಯ ಹರಿಂ ಸ್ವಪಿತ್ರೋರ್ಯ್ಯತ್ರಾಖಿಲಸ್ಯ ಸುಜನಸ್ಯ ಬಭೂವ ಮೋದಃ ॥೧೪.೦೬॥
ಕಂಸನಿಂದ ಸಂಕಟಕ್ಕೆ ಒಳಗಾಗಿದ್ದ ಯಾದವರೆಲ್ಲ,
ಕೃಷ್ಣನಹೊಂದಿ ಆತ್ಯಂತಿಕವಾದ ಸಂತೋಷಪಟ್ಟರೆಲ್ಲ.
ಮಗನಾಗವನ ಪಡೆದವರು ಹರ್ಷಿಸಿದರಂತ್ಹೇಳಬೇಕಿಲ್ಲ.

ಕೃಷ್ಣಾಶ್ರಯೋ ವಸತಿ ಯತ್ರ ಜನೋsಪಿ ತತ್ರ ವೃದ್ಧಿರ್ಭವೇತ್ ಕಿಮು ರಮಾಧಿಪತೇರ್ನ್ನಿವಾಸೇ ।
ವೃನ್ದಾವನಂ ಯದಧಿವಾಸತ ಆಸ ಸಧ್ರ್ಯಙ್ ಮಾಹೇನ್ದ್ರಸದ್ಮಸದೃಶಂ ಕಿಮು ತತ್ರ ಪುರ್ಯ್ಯಾಃ ॥೧೪.೦೭॥
ಕೃಷ್ಣನಾಶ್ರಯ ಪಡೆದ ಭಕ್ತನೆಲ್ಲಿ ಮಾಡುತ್ತಾನೋ ವಾಸ,
ಅದಾಗುತ್ತದೆ ಖಚಿತವಾಗಿ ಸರ್ವ ಸಂಪತ್ತುಗಳ ಆವಾಸ.
ಇನ್ನು ಸ್ವಯಂ ಭಗವಂತನೇ ತಾನು ವಾಸ ಮಾಡುವ ಜಾಗ,
ಕೃಷ್ಣನಿರುವಿಕೆಯಿಂದ ವೃಂದಾವನ ಅಮರಾವತಿ ಆಯಿತಾಗ.
ಹಾಗೇ ಮಧುರಾಪಟ್ಟಣದಲ್ಲೂ ಸರ್ವ ಸಂಪತ್ತಿನ ವೈಭೋಗ.

ಯೇನಾಧಿವಾಸಮೃಷಭೋ ಜಗತಾಂ ವಿಧತ್ತೇ ವಿಷ್ಣುಸ್ತತೋ ಹಿ ವರತಾ ಸದನೇsಪಿ ಧಾತುಃ ।
ತಸ್ಮಾತ್ ಪ್ರಭೋರ್ನ್ನಿವಸನಾನ್ಮಧುರಾ ಪುರೀ ಸಾ ಶಶ್ವತ್ ಸಮೃದ್ಧಜನಸಙ್ಕುಲಿತಾ ಬಭೂವ ॥೧೪.೦೮॥
ಸರ್ವೋತ್ತಮನಾದ ವಿಷ್ಣುವಿನ ವಾಸದಿಂದ ಬ್ರಹ್ಮಲೋಕಕ್ಕೆ ಉತ್ತಮತೆ,
ಅಂತಹಾ ನಾರಾಯಣನ ವಾಸದಿಂದ ಮಧುರಾಪುರಿಗೆ ಸಾತ್ವಿಕರ ಸಂಪನ್ನತೆ.

ರಕ್ಷತ್ಯಜೇ ತ್ರಿಜಗತಾಂ ಪರಿರಕ್ಷಕೇsಸ್ಮಿನ್ ಸರ್ವಾನ್ ಯದೂನ್ ಮಗಧರಾಜಸುತೇ ಸ್ವಭರ್ತ್ತುಃ ।
ಕೃಷ್ಣಾನ್ಮೃತಿಂ ಪಿತುರವಾಪ್ಯ ಸಮೀಪಮಸ್ತಿಪ್ರಾಸ್ತೀ ಶಶಂಸತುರತೀವ ಚ ದುಃಖಿತೇsಸ್ಮೈ ॥೧೪.೦೯॥
ಎಂದೂ ಹುಟ್ಟಿರದ ಜಗದ್ರಕ್ಷಕ ನಾರಾಯಣ,
ಎಲ್ಲಾ ಯದುಗಳನ್ನೂ ಮಾಡುತ್ತಿರಲು ರಕ್ಷಣ.
ಮಗಧರಾಜ ಜರಾಸಂಧನ ಹೆಣ್ಣುಮಕ್ಕಳಿಬ್ಬರು,
ಆಸ್ತಿ ಪ್ರಾಸ್ತೀ ಗಂಡ ಕಂಸ ಸತ್ತಸುದ್ದಿ ತಂದೆಗ್ಹೇಳಿದರು.

ಶ್ರುತ್ವೈವ ತನ್ಮಗಧರಾಜ ಉರುಪ್ರರೂಢಬಾಹ್ವೋರ್ಬಲೇನ ನಜಿತೋ ಯುಧಿ ಸರ್ವಲೋಕೈಃ ।
ಬ್ರಹ್ಮೇಶಚಣ್ಡಮುನಿದತ್ತವರೈರಜೇಯೋ ಮೃತ್ಯೂಜ್ಝಿತಶ್ಚ ವಿಜಯೀ ಜಗತಶ್ಚುಕೋಪ ॥೧೪.೧೦॥
ಮಗಧರಾಜ ಜರಾಸಂಧನದು ಚೆನ್ನಾಗಿ ಬಲಿತ ತೋಳ್ಬಲ,
ಬ್ರಹ್ಮ ರುದ್ರ ಚಂಡಕೌಶಿಕ ದುರ್ವಾಸರುಗಳ ವರ ಬಲ.
ಸಾವನ್ನೇ ಮೆಟ್ಟಿನಿಂತ ಜಗದ್ವಶ ಮಾಡಿಕೊಂಡ ಜರಾಸಂಧ,
ತನ್ನ ಹೆಣ್ಣು ಮಕ್ಕಳು ಹೇಳಿದ ಮಾತು ಕೇಳಿ ಕೋಪಗೊಂಡ.
[Contributed by Shri Govind Magal] 

No comments:

Post a Comment

ಗೋ-ಕುಲ Go-Kula