Monday 23 September 2019

ಮಹಾಭಾರತ ತಾತ್ಪರ್ಯನಿರ್ಣಯ, ಕನ್ನಡದಲ್ಲಿ 14: 01 - 05


೧೪. ಉದ್ಧವಪ್ರತಿಯಾನಮ್

॥ ಓಂ ॥
ಕೃಷ್ಣೋ ವಿಮೋಚ್ಯ ಪಿತರಾವಭಿವನ್ದ್ಯ ಸರ್ವವನ್ದ್ಯೋsಪಿ ರಾಮಸಹಿತಃ ಪ್ರತಿಪಾಲನಾಯ ।
ಧರ್ಮ್ಮಸ್ಯ ರಾಜ್ಯಪದವೀಂ ಪ್ರಣಿಧಾಯ ಚೋಗ್ರಸೇನೇ ದ್ವಿಜತ್ವಮುಪಗಮ್ಯ ಮುಮೋಚ ನನ್ದಮ್ ॥೧೪.೦೧॥
ತಂದೆ ತಾಯಿಗಳಿಗೆ ಕೃಷ್ಣ ನೀಡಿದ ಕಂಸ ಬಂಧನದಿಂದ ಬಿಡುಗಡೆ,
ಸರ್ವವಂದ್ಯನಾದರೂ ಅಣ್ಣನೊಂದಿಗೆ ಹೆತ್ತವರಿಗೆ ನಮಸ್ಕರಿಸಿದ ನಡೆ.
ಧರ್ಮಪಾಲನೆಗೆ ರಾಜ್ಯಪದವಿಯ ಉಗ್ರಸೇನನಲ್ಲಿ ಇಟ್ಟ,
ಉಪನಯನ ಮಾಡಿಕೊಂಡ ಕೃಷ್ಣ ನಂದನನ್ನು ಬೀಳ್ಕೊಟ್ಟ.

ನನ್ದೋsಪಿ ಸಾನ್ತ್ವವಚನೈರನುನೀಯ ಮುಕ್ತಃ ಕೃಷ್ಣೇನ ತಚ್ಚರಣಪಙ್ಕಜಮಾತ್ಮಸಂಸ್ಥಮ್ ।
ಕೃತ್ವಾ ಜಗಾಮ ಸಹ ಗೋಪಗಣೇನ ಕೃಚ್ಛ್ರಾದ್ ದ್ಧ್ಯಾಯನ್ ಜನಾರ್ದ್ದನಮುವಾಸ ವನೇ ಸಭಾರ್ಯ್ಯಃ ॥೧೪.೦೨॥
ನಂದನನ್ನು ಕಳಿಸುತ್ತಾ ಕೃಷ್ಣ ಮಾಡಿದ ಸಮಾಧಾನ,
ಕೃಷ್ಣಪಾದಗಳ ನಂದ ಧರಿಸಿದ್ದು ತನ್ನ ಹೃದಯಸ್ಥಾನ.
ಬಹಳ ಪ್ರಯಾಸದಿಂದ ಗೋಪಾಲಕರ ಒಡಗೂಡಿ,
ನಾರಾಯಣಸ್ಮರಣೆಯಲ್ಲಿದ್ದ ಕಾಡಲ್ಲಿ ಪತ್ನಿ ಜೊತೆಗೂಡಿ.

ಕೃಷ್ಣೋsಪ್ಯವನ್ತಿಪುರವಾಸಿನಮೇತ್ಯ ವಿಪ್ರಂ ಸಾನ್ದೀಪನಿಂ ಸಹ ಬಲೇನ ತತೋsದ್ಧ್ಯಗೀಷ್ಟ ।
ವೇದಾನ್ ಸಕೃನ್ನಿಗಾದಿತಾನ್ ನಿಖಿಲಾಶ್ಚ ವಿದ್ಯಾಃ ಸಮ್ಪೂರ್ಣ್ಣಸಂವಿದಪಿ ದೈವತಶಿಕ್ಷಣಾಯ ॥೧೪.೦೩॥
ಶ್ರೀಕೃಷ್ಣ ಬಲರಾಮ ಇಬ್ಬರು ಆವಂತಿ ಪಟ್ಟಣವ  ಸೇರಿ,
ಅಲ್ಲಿದ್ದ ಸಾಂದೀಪನೀ ಶಿಷ್ಯತ್ವ ಪಡೆದರು ಶಿಕ್ಷಣ ಕೋರಿ.
ಪೂರ್ಣಪ್ರಜ್ಞ ಸುಮ್ಮನೆ ಎಲ್ಲ ವಿದ್ಯೆ ಕೇಳಿದ ಒಂದು ಬಾರಿ,
ದೇವತೆಗಳ ಶಿಕ್ಷಣಕ್ಕಾಗಿ ಕೃಷ್ಣ ತೋರಿದ ಕಲಿಕೆಯ ದಾರಿ.

ಧರ್ಮ್ಮೋ ಹಿ ಸರ್ವವಿದುಷಾಮಪಿ ದೈವತಾನಾಂ ಪ್ರಾಪ್ತೇ ನರೇಷು ಜನನೇ ನರವತ್ ಪ್ರವೃತ್ತಿಃ ।
ಜ್ಞಾನಾದಿಗೂಹನಮುತಾದ್ಧ್ಯಯನಾದಿರತ್ರ ತಜ್ಜ್ಞಾಪನಾರ್ತ್ಥಮವಸದ್ ಭಗವಾನ್ ಗುರೌ ಚ ॥೧೪.೦೪॥
ದೇವತೆಗಳು ಮನುಷ್ಯರಾಗಿ ಮಾಡಿದಾಗ ಅವತಾರ,
ಮನುಷ್ಯರಂತೆ ನಡೆ,ಜ್ಞಾನ ಮುಚ್ಕೊಳ್ಳೋ ವ್ಯಾಪಾರ.
ಅಧ್ಯಯನ ಮೊದಲಾದ ಅನೇಕ ಧರ್ಮಪಾಲನೆ,
ದೇವತಾಶಿಕ್ಷಣಕ್ಕೆ ಕೃಷ್ಣ ತೋರಿದ ಗುರುಕುಲವಾಸವನ್ನೆ.

ಗುರ್ವರ್ತ್ಥಮೇಷ ಮೃತಪುತ್ರಮದಾತ್ ಪುನಶ್ಚ ರಾಮೇಣಾ ಸಾರ್ದ್ಧಮಗಮನ್ಮಧುರಾಂ ರಮೇಶಃ ।
ಪೌರೈಃ ಸಜಾನಪದಬನ್ಧುಜನೈರಜಸ್ರಮಭ್ಯರ್ಚ್ಚಿತೋ ನ್ಯವಸದಿಷ್ಟಕೃದಾತ್ಮಪಿತ್ರೋಃ ॥೧೪.೦೫॥
ಶ್ರೀಕೃಷ್ಣ ಗುರುಗಳಿಗೆ ಕೊಟ್ಟ ಗುರುದಕ್ಷಿಣೆ,
ಹಿಂತಿರುಗಿಸಿ ಕೊಟ್ಟ ಸತ್ತ ಅವರ ಮಗನನ್ನೆ.
ಅಣ್ಣ ರಾಮನ ಕೂಡಿಕೊಂಡು ಕೃಷ್ಣ ಮಧುರೆಗೆ ತೆರಳಿದ,
ತನ್ನ ಜನ ಮತ್ತು ನಾಗರೀಕರಿಂದ ಸದಾ ಪೂಜೆಗೆ ಒಳಗಾದ.
ಹೆತ್ತವರ ಇಷ್ಟ ಪೂರೈಸುತ್ತಾ ಅವರೊಡನೆ ವಾಸ ಮಾಡಿದ.

No comments:

Post a Comment

ಗೋ-ಕುಲ Go-Kula