Friday 20 December 2019

ಮಹಾಭಾರತ ತಾತ್ಪರ್ಯನಿರ್ಣಯ, ಕನ್ನಡದಲ್ಲಿ 14:1 05 - 112


ಕೃಷ್ಣೋsಥ ಚೌಪಗವಿಮುತ್ತಮನೀತಿಯುಕ್ತಂ ಸಮ್ಪ್ರೇಷಯನ್ನಿದಮುವಾಚ ಹ ಗೋಕುಲಾಯ ।
ದುಃಖಂ ವಿನಾಶಯ ವಚೋಭಿರರೇ ಮದೀಯೈರ್ನ್ನನ್ದಾದಿನಾಂ ವಿರಹಜಂ ಮಮ ಚಾsಶು ಯಾಹಿ ॥೧೪.೧೦೫ ॥
ಕೆಲದಿನಗಳ ನಂತರ ಶ್ರೀಕೃಷ್ಣ ನೀತಿಜ್ಞ ಉದ್ಧವನ ಗೋಕುಲಕ್ಕೆ ಕಳಿಸುತ್ತಾನೆ,
ಉಪಗವ ಯಾದವನ ಪುತ್ರ ಉದ್ಧವನ ಕಳಿಸುತ್ತಾ ಕೆಳಗಿನಂತೆ ಹೇಳುತ್ತಾನೆ.
ಉದ್ಧವಾ ಶೀಘ್ರವಾಗಿ ನೀನು ನಂದಗೋಕುಲಕ್ಕೆ ಹೋಗು,
ನಂದಾದಿಗಳ ನನ್ನ ವಿಯೋಗದುಃಖವ ನನ್ನ ಮಾತಿಂದ ನೀಗು.

ಮತ್ತೋ ವಿಯೋಗ ಇಹ ಕಸ್ಯಚಿದಸ್ತಿ ನೈವ ಯಸ್ಮಾದಹಂ ತನುಭೃತಾಂ ನಿಹಿತೋsನ್ತರೇವ ।
ನಾಹಂ ಮನುಷ್ಯ ಇತಿ ಕುತ್ರಚ ವೋsಸ್ತು ಬುದ್ಧಿರ್ಬ್ರಹ್ಮೈವ ನಿರ್ಮ್ಮಲತಮಂ ಪ್ರವದನ್ತಿ ಮಾಂ ಹಿ ॥೧೪.೧೦೬॥
ಯಾಕಾಗಿ ನಾನು ಸಮಸ್ತ  ದೇಹಿಗಳ ಒಳಗೇ ಇದ್ದೇನೆ,
ಹಾಗಾಗಿ ಯಾರಿಗೂ ಆಗುವುದಿಲ್ಲ ವಿಯೋಗದ ಬೇನೆ.
ಬಾರದಿರಲಿ ನಿಮಗೆ ನಾನು ಮನುಷ್ಯ ಎಂಬ ಬುದ್ಧಿ,
ನಾನು ದೋಷರಹಿತ ಪರಬ್ರಹ್ಮನೆಂದೇ ಪ್ರಸಿದ್ಧಿ.


ಪೂರ್ವಂ ಯದಾ ಹ್ಯಜಗರೋ ನಿಜಗಾರ ನನ್ದಂ ಸರ್ವೇ ನ ಶೇಕುರಥ ತತ್ಪ್ರವಿಮೋಕ್ಷಣಾಯ ।
ಮತ್ಪಾದಸಂಸ್ಪರ್ಶತಃ ಸ ತದಾsತಿದಿವ್ಯೋ ವಿದ್ಯಾಧರಸ್ತದುದಿತಂ ನಿಖಿಲಂ ಸ್ಮರನ್ತು ॥೧೪.೧೦೭॥
ಹಿಂದೊಮ್ಮೆ ಹೆಬ್ಬಾವಿನಿಂದ ನಂದನಾದ ಬಂಧಿತ,
ಬಿಡಿಸಲು ಅವನ ಯಾರಾಗಲಿಲ್ಲ ಅಲ್ಲಿ ಸಮರ್ಥ.
ನನ್ನ ಪಾದಸ್ಪರ್ಶದಿಂದ ಹೆಬ್ಬಾವು ವಿದ್ಯಾಧರನಾದ ಘಟನೆ,
ಶಾಪವಿಮುಕ್ತನಾದ ವಿದ್ಯಾಧರ ಹೇಳಿದ ಮಾತುಗಳ ಸ್ಮರಣೆ.

ಪೂರ್ವಂ ಸ ರೂಪಮದತಃ ಪ್ರಜಹಾಸ ವಿಪ್ರಾನ್ ನಿತ್ಯಂ ತಪಃಕೃಶತರಾಙ್ಗಿರಸೋ ವಿರೂಪಾನ್ ।
ತೈಃ ಪ್ರಾಪಿತಃ ಸಪದಿ ಸೋsಜಗರತ್ವಮೇವ ಮತ್ತೋ ನಿಜಾಂ ತನುಮವಾಪ್ಯ ಜಗಾದ ನನ್ದಮ್ ॥೧೪.೧೦೮॥
ಹಿಂದೆ ವಿದ್ಯಾಧರಗೆ ಆವರಿಸಿತ್ತು ತನ್ನ ರೂಪಮದ,
ಕೃಶತಪಸ್ವೀ ಬ್ರಾಹ್ಮಣರ ನೋಡಿ ಅಪಹಾಸ್ಯ ಮಾಡಿದ್ದ.
ಅಂತಹ ವಿದ್ಯಾಧರ ತಾನು ಹೆಬ್ಬಾವಿನ ರೂಪ ಪಡೆದ, ನನ್ನಿಂದ ಸ್ವರೂಪ ಪಡೆದು ನಂದಗೆ ಈರೀತಿ ನುಡಿದ.

ನಾಯಂ ನರೋ ಹರಿರಯಂ ಪರಮಃ ಪರೇಭ್ಯೋ ವಿಶ್ವೇಶ್ವರಃ ಸಕಲಕಾರಣ ಆತ್ಮತನ್ತ್ರಃ ।
ವಿಜ್ಞಾಯ ಚೈನಮುರುಸಂಸೃತಿತೋ ವಿಮುಕ್ತಾ ಯಾನ್ತ್ಯಸ್ಯ ಪಾದಯುಗಳಂ ಮುನಯೋ ವಿರಾಗಾಃ’ ॥೧೪.೧೦೯॥
ಇವನಲ್ಲವೇ ಅಲ್ಲ ಮನುಷ್ಯ-ಇವನು ಭಗವಂತ,
ಜಗದೊಡೆಯನಾಗಿ ಶ್ರೇಷ್ಠರಲ್ಲಿಯೂ ಶ್ರೇಷ್ಠನೀತ.
ಸರ್ವಕ್ಕೂ ಕಾರಣ ಸರ್ವಸ್ವತಂತ್ರ-ವಿರಾಗಿಗಳಿಗೆ ಆಗಿ ಇವನ ಜ್ಞಾನ,
ಸಂಸಾರವಿಮೋಚನೆಯಾಗಿ ಜೋಡಿ ಪಾದಗಳಲ್ಲಿ ಆಗುವರು ಲೀನ.

ನನ್ದಂ ಯದಾ ಚ ಜಗೃಹೇ ವರುಣಸ್ಯ ದೂತಸ್ತತ್ರಾಪಿ ಮಾಂ ಜಲಪತೇರ್ಗ್ಗೃಹಮಾಶು ಯಾತಮ್ ।
ಸಮ್ಪೂಜ್ಯ ವಾರಿಪತಿರಾಃ ವಿಮುಚ್ಚ್ಯ ನನ್ದಂ ನಾಯಂ ಸುತಸ್ತವ ಪುಮಾನ್ ಪರಮಃ ಸ ಏಷಃ ॥೧೪.೧೧೦॥
ಒಮ್ಮೆ ವರುಣಭೃತ್ಯನೊಬ್ಬ ನಂದನ ಹಿಡಿದ,
ವರುಣ ನನ್ನನೋಡಿ ಪೂಜಿಸಿ ನಂದನ ಬಿಡುತ್ತ ಹೇಳಿದ.
ಇವನಲ್ಲವೇ ಅಲ್ಲ ನಿನ್ನ ಪುತ್ರ,
ಉತ್ಕೃಷ್ಟ ಪುರುಷ ಸರ್ವಸ್ವತಂತ್ರ.

ಸನ್ದರ್ಶಿತೋ ನನು ಮಯೈವ ವಿಕುಣ್ಠಲೋಕೋ ಗೋಜೀವಿನಾಂ ಸ್ಥಿತಿರಪಿ ಪ್ರವರಾ ಮದೀಯಾ ।
ಮಾನುಷ್ಯಬುದ್ಧಿಮಪನೇತುಮಜೇ ಮಯಿ ಸ್ಮ ತಸ್ಮಾನ್ಮಯಿ ಸ್ಥಿತಿಮವಾಪ್ಯ ಶಮಂ ಪ್ರಯಾನ್ತು॥೧೪.೧೧೧॥
ನನ್ನಿಂದಲೇ ಆಗಿದೆ ಗೋಪಾಲಕರಿಗೆ ವೈಕುಂಠದರ್ಶನ,
ತೋರಿರುವೆ ನನ್ನ ಮಹಿಮೆ -ನನಗೆಂದೂ ಇಲ್ಲ ಜನನ.
ನಾನು ಮನುಷ್ಯನೆಂಬ ಬುದ್ಧಿ ನಾಶವಾಗಿ ಹೋಗಲು,
ಆ ಜ್ಞಾನ ಬಂದು ನಿಮ್ಮಲ್ಲಿ ಶಾಂತಿಯದು ನೆಲೆಸಲು.

ಶ್ರುತ್ವೋದ್ಧವೋ ನಿಗದಿತಂ ಪರಮಸ್ಯ ಪುಂಸೋ ವೃನ್ದಾವನಂ ಪ್ರತಿ ಯಯೌ ವಚನೈಶ್ಚ ತಸ್ಯ।
ದುಃಖಂ ವ್ಯಪೋಹ್ಯ ನಿಖಿಲಂ ಪಶುಜೀವನಾನಾಮಾಯಾತ್ ಪುನಶ್ಚರಣಸನ್ನಿಧಿಮೇವ ವಿಷ್ಣೋಃ ॥೧೪.೧೧೨॥
ಉದ್ಧವ ಕೃಷ್ಣನ ಮಾತಕೇಳಿ ವೃಂದಾವನಕ್ಕೆ ತೆರಳಿದ,
ಗೋಪರ ದುಃಖತೊಡೆದು ಮತ್ತೆ ಕೃಷ್ಣಸನ್ನಿಧಿಗೆ ಬಂದ.

ಇತಿ ಶ್ರೀಮದಾನನ್ದತೀರ್ತ್ಥಭಗವತ್ಪಾದವಿರಚಿತೇ ಶ್ರೀಮಹಾಭಾರತತಾತ್ಪರ್ಯ್ಯನಿರ್ಣ್ಣಯೇ
ಉದ್ಧವಪ್ರತಿಯಾನಂ ನಾಮ ಚತುರ್ದ್ದಶೋsದ್ಧ್ಯಾಯಃ ॥
ಶ್ರೀಮದಾನಂದತೀರ್ಥರಿಂದ ವಿರಚಿತವಾದ, ಮಹಾಭಾರತ ತಾತ್ಪರ್ಯ ನಿರ್ಣಯಾನುವಾದ.
ಉದ್ಧವಪ್ರತಿಯಾನವೆಂಬ ಹದಿನಾಕನೇ ಅಧ್ಯಾಯ,
ಆತ್ಮಸಖನಾದ ಶ್ರೀಕೃಷ್ಣಗರ್ಪಿಸಿದ ಧನ್ಯತಾಭಾವ.

No comments:

Post a Comment

ಗೋ-ಕುಲ Go-Kula