Wednesday 1 January 2020

ಮಹಾಭಾರತ ತಾತ್ಪರ್ಯನಿರ್ಣಯ, ಕನ್ನಡದಲ್ಲಿ 15: 31 - 35

ಯಥೇಷ್ಟವಿತ್ತಾಶನಪಾನಮಸ್ಯ ಧರ್ಮ್ಮಾತ್ಮಜಃ ಪ್ರತಿಜಜ್ಞೇ ಸುಶೀಘ್ರಮ್ ।
ತಥೈವ ತೇನೋದ್ಧೃತಮಙ್ಗುಲೀಯಂ ತ್ರಿವರ್ಗ್ಗಮುಖ್ಯಾತ್ಮಜವಾಕ್ಯತೋsನು             ॥೧೫.೩೧॥
ಧರ್ಮರಾಜ ಕೊಡುತ್ತಾನೆ ದ್ರೋಣಾಚಾರ್ಯರಿಗೆ ವಚನ,
ಕೊಡುವೆ ನಿಮಗೆ ಊಟ ಪಾನೀಯ ಬೇಡಿದಷ್ಟು ಹಣ.
ತ್ರಿವರ್ಗಗಳಲ್ಲಿ ಮುಖ್ಯನಾದ ಧರ್ಮನ ಮಗನ ಮಾತು,
ಅನುಸರಿಸಿ ದ್ರೋಣರಿಂದ ಉಂಗುರವೂ ಎತ್ತಲ್ಪಟ್ಟಿತು.

ಪಪ್ರಚ್ಛುರೇನಂ ಸಹಿತಾಃ ಕುಮಾರಾಃ ಕೋsಸೀತಿ ಸೋsಪ್ಯಾಹ ಪಿತಾಮಹೋ ವಃ ।
ವಕ್ತೇತಿ ತೇ ದುದ್ರುವುರಾಶು ಭೀಷ್ಮಂ ದ್ರೋಣೋsಯಮಿತ್ಯೇವ ಸ ತಾಂಸ್ತದೋಚೇ             ॥೧೫.೩೨॥
ಕುಮಾರರು ಕೇಳುತ್ತಾರೆ ದ್ರೋಣರನ್ನು -ನೀನ್ಯಾರು,
ದ್ರೋಣರೆಂದರು ನಿಮ್ಮ ತಾತ ಹೇಳುವ -ನಾನ್ಯಾರು.
ಮಕ್ಕಳೆಲ್ಲ ಭೀಷ್ಮರಲ್ಲಿ ವಿಷಯ ಕೇಳಿದರು,
ಭೀಷ್ಮರು ಇದು ದ್ರೋಣ ಎಂದು ಹೇಳಿದರು.

ನ ರಾಜಗೇಹಂ ಸ ಕದಾಚಿದೇತಿ ತೇನಾದೃಷ್ಟಃ ಸ ಕುಮಾರೈಃ ಪುರಾsತಃ ।
ಭೀಷ್ಮೋ ವಿದ್ಯಾಸ್ತೇನ ಸಹೈವ ಚಿನ್ತಯನ್ನಸ್ತ್ರಪ್ರಾಪ್ತಿಂ ತಸ್ಯ ಶುಶ್ರಾವ ರಾಮಾತ್ ॥೧೫.೩೩॥
ದ್ರೋಣರು ಅರಮನೆಗೆಂದೂ ಹೋಗುತ್ತಿರಲಿಲ್ಲ,
ಹಾಗಾಗಿ ಕುಮಾರರೂ ಅವರನ್ನು ನೋಡಿರಲಿಲ್ಲ.
ಭೀಷ್ಮರಿಗೂ ದ್ರೋಣರಿಗೂ ಇತ್ತು ಸಂಪರ್ಕ ಮತ್ತು  ಮಾತುಕತೆ,
ಗೊತ್ತಿತ್ತು ಅಸ್ತ್ರವಿದ್ಯೆ ಕಲಿತದ್ದವರು ಪರಶುರಾಮರ ಜೊತೆ.

ಶ್ರುತ್ವಾ ವೃದ್ಧಂ ಕೃಷ್ಣವರ್ಣ್ಣಂ ದ್ವಿಜಂ ತಂ ಮಹಾಸ್ತ್ರವಿದ್ಯಾಮಪಿ ತಾಂ ಮಹಾಮತಿಃ ।
ದ್ರೋಣಂ ಜ್ಞಾತ್ವಾ ತಸ್ಯ ಶಿಷ್ಯತ್ವ ಏತಾನ್ ದದೌ ಕುಮಾರಾಂಸ್ತತ್ರ ಗತ್ವಾ ಸ್ವಯಂ ಚ ॥೧೫.೩೪॥
ಮಕ್ಕಳಿಂದ ಕೇಳಿಸಿಕೊಂಡು ಅವ ಕಪ್ಪಾದ ಮುದುಕ ಬ್ರಾಹ್ಮಣ,
ವಿದ್ಯಾಬಲದ ಚತುರ ಇವನು ನಿಶ್ಚಯವಾಗಿಯೂ ದ್ರೋಣ.
ದ್ರೋಣರಲ್ಲಿ ಹೋಗಿ ಒಪ್ಪಿಸಿದ ಮಕ್ಕಳಿಗೀಯಲು ವಿದ್ಯಾದಾನ.

ದ್ರೋಣೋsಥ ತಾನವದದ್ ಯೋ ಮದಿಷ್ಟಂ ಕರ್ತ್ತುಂ ಪ್ರತಿಜ್ಞಾಂ ಪ್ರಥಮಂ ಕರೋತಿ ।
ತಂ ಧನ್ವಿನಾಂ ಪ್ರವರಂ ಸಾಧಯಿಷ್ಯ ಇತ್ಯರ್ಜ್ಜುನಸ್ತಾಮಕರೋತ್ ಪ್ರತಿಜ್ಞಾಮ್ ॥೧೫.೩೫॥
ಪ್ರತಿಜ್ಞೆ ಮಾಡುವಿರಾ ನಿಮ್ಮಲ್ಲಿ ಯಾರು,
ನನ್ನ ಇಷ್ಟಾರ್ಥವನ್ನು ಪೂರೈಸುವವರು.
ಅವನನ್ನು ಮಾಡುತ್ತೇನೆ ಜಗದ ಶ್ರೇಷ್ಠ ಧನುರ್ಧಾರಿ,
ಅರ್ಜುನ ಪ್ರತಿಜ್ಞೆಗೈಯ್ಯುತ್ತಾನೆ ಸಂದರ್ಭಾನುಸಾರಿ.
[Contributed by Shri Govind Magal] 

No comments:

Post a Comment

ಗೋ-ಕುಲ Go-Kula