Wednesday, 1 January 2020

ಮಹಾಭಾರತ ತಾತ್ಪರ್ಯನಿರ್ಣಯ, ಕನ್ನಡದಲ್ಲಿ 15: 36 - 40

ಉನ್ಮಾದನಾದೀನಿ ಸ ವೇದ ಕೃಷ್ಣಾದಸ್ತ್ರಾಣ್ಯನಾಪತ್ಸು ನ ತಾನಿ ಮುಞ್ಚೇತ್ ।
ಇತ್ಯಾಜ್ಞಯಾ ಕೇಶವಸ್ಯಾಪರಾಣಿ ಪ್ರಯೋಗಯೋಗ್ಯಾನಿ ಸದೇಚ್ಛತಿ ಸ್ಮ ॥೧೫.೩೬॥
ಅರ್ಜುನ ಉನ್ಮಾದನಾದಿ ಅಸ್ತ್ರಗಳ ಕೃಷ್ಣನಿಂದ ತಿಳಿದಿದ್ದ,
ಆಪತ್ಕಾಲದಲ್ಲಿ ಮಾತ್ರ ಅವುಗಳ ಬಳಕೆಯೆಂದೂ ಅರಿತಿದ್ದ.
ಸದಾ ಪ್ರಯೋಗಯೋಗ್ಯ ಅಸ್ತ್ರಗಳ ಕಲಿಯಲು ಬಯಸಿದ್ದ.

ಭೀಷ್ಮಾದಿಭಿರ್ಭವಿತಾ ಸಙ್ಗರೋ ನಸ್ತದಾ ನಾಹಂ ಗುರುಭಿರ್ನ್ನಿತ್ಯಯೋದ್ಧಾ ।
ಭವೇಯಮೇಕಃ ಫಲ್ಗುನೋsಸ್ತ್ರಜ್ಞ ಏಷಾಂ ನಿವಾರಕಶ್ಚೇನ್ಮಮ ಧರ್ಮ್ಮಲಾಭಃ             ॥೧೫.೩೭॥
ನ ಬುದ್ಧಿಪೂರ್ವಂ ವರ ಇನ್ದಿರಾಪತೇರನ್ಯತ್ರ ಮೇ ಗ್ರಾಹ್ಯ ಇತಶ್ಚ ಜಿಷ್ಣುಃ ।
ಕರೋತು ಗುರ್ವರ್ತ್ಥಮಿತಿ ಸ್ಮ ಚಿನ್ತಯನ್ ಭೀಮಃ ಪ್ರತಿಜ್ಞಾಂ ನ ಚಕಾರ ತತ್ರ             ॥೧೫.೩೮॥
ಭೀಷ್ಮ ಮೊದಲಾದವರೊಡನೆ ಮುಂದಾಗಲಿದೆ ಯುದ್ಧ,
ಗುರುಹಿರಿಯರೊಡನೆ ಕಾದಲು ನಾನೆಂದೂ ಇಲ್ಲ ಸಿದ್ಧ.
ಅಸ್ತ್ರಬಲ್ಲ ಅರ್ಜುನನಿಂದಾದರೆ ಭೀಷ್ಮಾದಿಗಳ ನಿವಾರಣ,
ಭೀಮಗನಿಸಿತು ಅವನಿಗದರಿಂದ ಲಾಭ ಮತ್ತು ಸಮಾಧಾನ.
ಇಂದಿರಾಪತಿ ಹರಿಯಲ್ಲದ ಹೊರತು ಬೇರೆಯವರಿಂದ ವರ ಪಡೆಯುವಂತಿಲ್ಲ,
ಅರ್ಜುನ ಗುರುಗಳಿಗಾಗಿ ಪ್ರತಿಜ್ಞೆ ಮಾಡಲೆಂದೇ ಭೀಮಸೇನ ತಾನು ಮಾಡಲಿಲ್ಲ.

ತತ್ಪ್ರೇರಿತೇನಾರ್ಜ್ಜುನೇನ ಪ್ರತಿಜ್ಞಾ ಕೃತಾ ಯದಾ ವಿಪ್ರವರಸ್ತತಃ ಪರಮ್ ।
ಸ್ನೇಹಂ ನಿತಾನ್ತಂ ಸುರರಾಜಸೂನೌ ಕೃತ್ವಾ ಮಹಾಸ್ತ್ರಾಣಿ ದದೌ ಸ ತಸ್ಯ             ॥೧೫.೩೯॥
ಭೀಮಸೇನನಿಂದ ಪ್ರೇರಿತನಾದ ಅರ್ಜುನ,
ಯಾವಾಗ ತಾನು ಮಾಡಿದನೋ ಪ್ರತಿಜ್ಞ.
ದ್ರೋಣರು ಇಂದ್ರಪುತ್ರ ಅರ್ಜುನನಿಗೆ,
ಪ್ರೀತಿಯಲಿ ಕೊಟ್ಟರು ಮಹಾಸ್ತ್ರಗಳ ಕೊಡುಗೆ.

ಸ ಪಕ್ಷಪಾತಂ ಚ ಚಕಾರ ತಸ್ಮಿನ್ ಕರೋತಿ ಚಾಸ್ಯೋರುತರಾಂ ಪ್ರಶಂಸಾಮ್ ।
ರಹಸ್ಯವಿದ್ಯಾಶ್ಚ ದದಾತಿ ತಸ್ಯ ನಾನ್ಯಸ್ಯ ಕಸ್ಯಾಪಿ ತಥಾ ಕಥಞ್ಚಿತ್ ॥೧೫.೪೦॥
ದ್ರೋಣರಲ್ಲಿ ಬೆಳೆಯಿತು ಅರ್ಜುನನಲ್ಲಿ ಪಕ್ಷಪಾತದ ಧೋರಣೆ,
ಅವನನ್ನು ಹೊಗಳುತ್ತಾ ಮಾಡುತ್ತಿದ್ದರು ಅತಿಯಾದ ಆದರಣೆ.
ಅವನಿಗೆ ಮಾಡಿದರು ಅನೇಕ ರಹಸ್ಯ ವಿದ್ಯೆಗಳ ಉಪದೇಶ,
ಅರ್ಜುನನಂತೆ ಉಳಿದವರಿಗೆ ಇರಲಿಲ್ಲೆಂಬುದು ವಿಶೇಷ.
[Contributed by Shri Govind Magal] 

No comments:

Post a Comment

ಗೋ-ಕುಲ Go-Kula