ಇತ್ಯುಕ್ತೋ ನಾರದಃ ಪ್ರಾಹ ರಾಜಸೂಯಕೃತೋನ್ನತಿಮ್ ।
ಹರಿಶ್ಚನ್ದ್ರಸ್ಯ ತಾಂ ದೃಷ್ಟ್ವಾ ಪಿತಾ ಯಮಸಭಾತಳೇ ।
ಸ್ಥಿತಸ್ತ್ವಾಮವದತ್ ಪಾಣ್ಡೂ ರಾಮದ್ವಯಸುದೈವತೇ
॥೨೧.೭೨॥
ಧರ್ಮರಾಜನ ಪ್ರಶ್ನೆಗೆ
ನಾರದರಿಂದ ಬಂದ ಉತ್ತರ,
ರಾಜಸೂಯದಿಂದ ಹರಿಶ್ಚಂದ್ರಗೆ
ಉನ್ನತಿಯ ಎತ್ತರ.
ಹರಿಶ್ಚಂದ್ರಗೆ ಇಂದ್ರಲೋಕ
ಲಭ್ಯವಾಗಿಸಿದ್ದು ರಾಜಸೂಯಯಾಗ,
ಪಾಂಡುರಾಜ ಅದ
ಮಾಡಿಲ್ಲವಾದ್ದರಿಂದ ಇಲ್ಲ ಇಂದ್ರಲೋಕದ ಯೋಗ.
ಈ ಸಂದೇಹ ನಿನಗೊಂದಲ್ಲ, ನಿನ್ನ ಅಪ್ಪ
ಪಾಂಡುವಿಗೂ ಬಂದ ಸಲುವಾಗಿ,
ರಾಮ ಪರಶುರಾಮರು ಆರಾಧ್ಯರಾದ
ಯಮಸಭೆಯಿಂದ ಸಂದೇಶ ನಿನಗಾಗಿ.
ಕರೋತು ರಾಜಸೂಯಂ ಮೇ ಪುತ್ರೋsಜೇಯಾನುಜಾರ್ಚ್ಚಿತಃ ।
ಪಾಲಿತೋ ವಾಸುದೇವೇನ ಕಿಂ ತಸ್ಯಾಸಾದ್ಧ್ಯಮತ್ರ ಹಿ ॥೨೧.೭೩॥
ನನ್ನ ಮಗ ಧರ್ಮರಾಜನಿಗುಂಟು
ಅಜೇಯ ತಮ್ಮಂದಿರ ಬಲ,
ಅವರಿಂದ ಕೂಡಿಕೊಂಡು
ಮಾಡಿದರಾಗುವುದು ರಾಜಸೂಯ ಸಫಲ.
ಶ್ರೀಕೃಷ್ಣರಕ್ಷಿತನಾಗಿರುವ
ಅವನಿಗೆ ಇದ್ಯಾವುದೂ ಅಸಾಧ್ಯದ ಮಾತಲ್ಲ.
ಏತಚ್ಛ್ರುತ್ವಾ ಧರ್ಮ್ಮಸುತೋ ಭ್ರಾತೃಭಿಃ ಸಹಿತೋ ವಶೀ ।
ಅವಾಪ್ತಿಂ ರಾಜಸೂಯಸ್ಯ ಮನ್ತ್ರಯಾಮಾಸ ಧರ್ಮ್ಮವಿತ್ ॥೨೧.೭೪॥
ನಾರದ ಮುನಿಗಳ ಮಾತನ್ನು
ಕೇಳಿಸಿಕೊಂಡ ಧರ್ಮರಾಜ ತಾನು,
ತಮ್ಮಂದಿರೊಡನೆ ರಾಜಸೂಯದ
ಮಂತ್ರಾಲೋಚನೆ ಮಾಡಿದನು.
ಸುಕಾರ್ಯ್ಯಮೇತದಿತ್ಯಲಂ ನಿಶಮ್ಯ ಸೋದರೋದಿತಮ್ ।
ಅಯಾತಯತ್ ಸ್ವಸಾರಥಿಂ ಸ ಕೇಶವಾಯ ಭೂಪತಿಃ ॥೨೧.೭೫॥
ಇದು ಮಾಡಲೇಬೇಕಾದ ಒಳ್ಳೇ
ಕಾರ್ಯವೆಂಬುದು ತಮ್ಮಂದಿರ ಅಭಿಪ್ರಾಯ,
ಸಮಾಲೋಚನೆ ಬಳಿಕ ಕೃಷ್ಣನೆಡೆ
ತನ್ನ ಸಾರಥಿಯ ಕಳಿಸಿದ ಧರ್ಮರಾಯ.
ತದೈವ ಕೇಶವಸ್ಯ ಯಾಃ ಸ್ತ್ರಿಯಸ್ತದೀಯತಾತಕೈಃ ।
ಸಹೋದರೈಶ್ಚ ಯಾಪಿತಃ ಸುದೂತ ಆಪ ಮಾಧವಮ್
॥೨೧.೭೬॥
ಅದೇ ಸಮಯದಲ್ಲಿ ಕೃಷ್ಣನ
ಹದಿನಾರುಸಾವಿರದ ನೂರು ಪತ್ನಿಯರ ಅಪ್ಪಂದಿರಿಂದ,
ಅವರೆಲ್ಲರ ಅಣ್ಣ
ತಮ್ಮಂದಿರಿಂದಲೂ ಕಳಿಸಲ್ಪಟ್ಟ ಬೇರೊಬ್ಬ ದೂತನೂ ಬಂದ.
ಪ್ರಣಮ್ಯ ಕೇಶವಂ ವಚಃ ಸ ಆಹ ಮಾಗಧೇನ ತೇ ।
ವಿವಾಹಬಾನ್ಧವಾ ರಣೇ ವಿಜಿತ್ಯ ರೋಧಿತಾ ಗಿರೌ ॥೨೧.೭೭॥
ಆ ದೂತ ಕೇಶವನಿಗೆ ನಮಸ್ಕಾರ
ಮಾಡಿ ಹೀಗೆ ಹೇಳಿದ ,
ನಿನ್ನ ವಿವಾಹಬಂಧುಗಳೆಲ್ಲಾ
ಸೋತಿದ್ದಾರೆ ಜರಾಸಂಧನಿಂದ.
ಜರಾಸಂಧನೊಡನೆ ಆದ
ಯುದ್ಧದಲ್ಲಿ ಅವರು ಸೋತಿದ್ದಾರೆ,
ಹಾಗೆ ಸೋತವರು ಪರ್ವತದ
ತಪ್ಪಲಿನಲ್ಲಿ ಬಂಧಿತರಾಗಿದ್ದಾರೆ.
ನೃಪಾಯುತದ್ವಯೇನ ಸೋsಷ್ಟವಿಂಶಕೈಃ ಶತೈರಪಿ ।
ಯಿಯಕ್ಷುರುಗ್ರರೂಪಿಣಂ ತ್ರಿಲೋಚನಂ ತ್ವಯಿ ಸ್ಥಿತೇ ॥೨೧.೭೮॥
ಕೃಷ್ಣಾ, ನೀನಿದ್ದಾಗಲೇ
ಇಪ್ಪತ್ತೆರಡು ಸಾವಿರದ ಎಂಟುನೂರು ಅರಸರ ಬಲಿಯಾಗುತ್ತಿದೆ,
ಉಗ್ರರೂಪಿಯಾದ
ರುದ್ರನಿಗೋಸ್ಕರ ಯಾಗ ನೆರವೇರಿಸುವ ಸಂಕಲ್ಪವೂ ಮಾಡಿಯಾಗಿದೆ.
ವಿಮೋಚಯಸ್ವ ತಾನ್ ಪ್ರಭೋ ನಿಹತ್ಯ ಮಾಗಧೇಶ್ವರಮ್ ।
ಅವೈದಿಕಂ ಮಖಂ ಚ ತಂ ವಿಲುಮ್ಪ ಧರ್ಮ್ಮಗುಪ್ತಯೇ
॥೨೧.೭೯॥
ಪ್ರಭುವೇ, ಜರಾಸಂಧನ ವಧಿಸಿ
ರಾಜರುಗಳನ್ನು ಮಾಡು ಬಿಡುಗಡೆ,
ಧರ್ಮರಕ್ಷಣೆಗಾಗಿ ಅವನು
ಮಾಡುತ್ತಿರುವ ಅವೈದಿಕ ಯಜ್ಞವ ತಡೆ.
ಇತೀರಿತೋsಥ ಸಾರಥಿಂ ನಿಶಾಮ್ಯ ಧರ್ಮ್ಮಜಸ್ಯ ಚ ।
ನಿಶಮ್ಯ ತದ್ವಚಸ್ತದಾ ಜಗಾಮ ಪಾಣ್ಡವಾಲಯಮ್
॥೨೧.೮೦॥
ಈ ರೀತಿಯಾಗಿತ್ತು ರಾಜರ
ಕಡೆಯಿಂದ ಬಂದ ಸಾರಥಿಯ ಸಂದೇಶದ ಪೂರ್ಣ ಪಾಠ,
ಧರ್ಮಜನ ಕಡೆಯಿಂದ ಬಂದ
ಸಾರಥಿಯ ಮಾತು ಕೇಳಿದ ಕೃಷ್ಣ ಇಂದ್ರಪ್ರಸ್ಥಕ್ಕೆ ಹೊರಟ.
No comments:
Post a Comment
ಗೋ-ಕುಲ Go-Kula