Wednesday, 31 October 2018

ಮಹಾಭಾರತ ತಾತ್ಪರ್ಯನಿರ್ಣಯ, ಕನ್ನಡದಲ್ಲಿ 10: 52 - 55

(ವ್ಯಾಸರೂಪದಿಂದ ಭುವಿಯಲ್ಲಿ ಅವತರಿಸಿದ ಶ್ರೀಮನ್ನಾರಾಯಣನ ಸ್ವರೂಪ,
ತಂದೆಯ ಸುಂದರ ಚಿತ್ರಣ ಬಿಚ್ಚಿ ತೋರಲು ಮಧ್ವರು  ಹಚ್ಚಿಟ್ಟ ವರ್ಣನಾ ದೀಪ. )

ಅಗಣ್ಯದಿವ್ಯೋರುಗುಣಾರ್ಣ್ಣವಃ ಪ್ರಭುಃ ಸಮಸ್ತವಿದ್ಯಾಧಿಪತಿರ್ಜ್ಜಗದ್ಗುರುಃ ।
ಅನನ್ತಶಕ್ತಿರ್ಜ್ಜಗದೀಶ್ವರೇಶ್ವರಃ ಸಮಸ್ತದೋಷಾತಿವಿದೂರವಿಗ್ರಹಃ  ॥೧೦.೫೨ ॥

ಶುಭಮರತಕವರ್ಣ್ಣೋ ರಕ್ತಪಾದಾಭ್ಜನೇತ್ರಾಧರಕರನಖರಸನಾಗ್ರಶ್ಚಕ್ರಶಙ್ಖಾಬ್ಜರೇಖಃ ।
ರವಿಕರವರಗೌರಂ ಚರ್ಮ್ಮ ಚೈಣಂ ವಸಾನಸ್ತಟಿದಮಲಜಟಾಸನ್ದೀಪ್ತಜೂಟಂ 
ದಧಾನಃ  ॥೧೦.೫೩॥

ಅಸಂಖ್ಯ ದಿವ್ಯ ಮಹಾಗುಣಗಳ ಉತ್ಕೃಷ್ಟ ಸಾಗರ,
ಸರ್ವಕರ್ತ ಸಮರ್ಥ ವೇದವಿದ್ಯೆ ಶಾಸ್ತ್ರಗಳ ಆಗರ.
ಸರ್ವಶಕ್ತ ಒಡೆಯರಿಗೇ ಒಡೆಯ ದೋಷಗಳಿಗೆ ದೂರ,
ಗುಣಗಳೇ ಮೈದಾಳಿದ ಸ್ವರೂಪಭೂತ ಅಪ್ರಾಕೃತ ಶರೀರ.
ಮರತಕಮಣಿಯಂತೆ ನೀಲಿಯಾದ ಅವನ ಮೈಬಣ್ಣ,
ಪಾದ ಕಣ್ತುದಿ ತುಟಿ ಕೈ ನಾಲಿಗೆಯ ತುದಿಗಳು ಕೆಂಬಣ್ಣ.
ಕೈ ಮತ್ತು ಕಾಲುಗಳಲ್ಲಿ ಶಂಖ ಚಕ್ರ ಕಮಲಗಳ ಭವ್ಯ ರೇಖೆ,
ಮೈಗೆ ಸೂರ್ಯಕಾಂತಿಯ ಹಳದಿ ಜಿಂಕೆ ಚರ್ಮದ ಹೊದಿಕೆ.
ಮಿಂಚಿನಂಥಾ ನಿರ್ಮಲವಾದ ಜಟಾಜೂಟಧಾರಿ,
ಭಗವಂತ ತಾನು ವೇದವ್ಯಾಸರಾಗಿ ಕಂಡದ್ದೀ ಪರಿ.

ವಿಸ್ತೀರ್ಣ್ಣವಕ್ಷಾಃ  ಕಮಳಾಯತಾಕ್ಷೋ ಬೃಹದ್ಭುಜಃ ಕಮ್ಬುಸಮಾನಕಣ್ಠಃ ।
ಸಮಸ್ತವೇದಾನ್ ಮುಖತಃ ಸಮುದ್ಗಿರನ್ನನ್ತಚನ್ದ್ರಾಧಿಕಕಾನ್ತಸನ್ಮುಖಃ  ॥೧೦.೫೪॥

ಪ್ರಬೋಧಮುದ್ರಾಭಯದೋರ್ದ್ಧ್ವಯಾನ್ವಿತೋ 
ಯಜ್ಞೋಪವೀತಾಜಿನಮೇಖಲೋಲ್ಲಸನ್ ।
ದೃಶಾ ಮಹಾಜ್ಞಾನಭುಜಙ್ಗದಷ್ಟಮುಜ್ಜೀವಯಾನೋ ಜಗದತ್ಯರೋಚತ  ॥೧೦.೫೫॥

ವಿಶಾಲವಾದ ವಕ್ಷ,
ಕಮಲದಂಥ ಅಕ್ಷ.
ವಿಸ್ತಾರ ಭುಜ ನಿಡಿದಾದ ತೋಳು,
ಶಂಖದಂತೆ ನುಣುಪಾದ ಕೊರಳು.
ಸಮಸ್ತ ವೇದಗಳ ಹೇಳುವ ದಿವ್ಯ ಮುಖ,
ಕೊಡುವುದದು ಅಸಂಖ್ಯ ಚಂದ್ರರ ಸುಖ.
ಜ್ಞಾನ ಅಭಯ ಮುದ್ರೆಗಳ ಎರಡು ಹಸ್ತ,
ಕಂಗೊಳಿಸುವ ಕೃಷ್ಣಾಜಿನ ಯಜ್ನೋಪವೀತ.
ಅಜ್ಞಾನದ ಹಾವಿನಿಂದ ಕಚ್ಚಲ್ಪಟ್ಟ ಭಕ್ತವೃಂದ,
ದೃಷ್ಟಿಯಿಂದ ಬದುಕಿಸುವ ವೇದವ್ಯಾಸ ಚೆಂದ. 

ಮಹಾಭಾರತ ತಾತ್ಪರ್ಯನಿರ್ಣಯ, ಕನ್ನಡದಲ್ಲಿ 10: 47 - 51

ಇತೀರಿತಶ್ಚಕ್ರಧರೇಣ ತಾಂ ಮುನಿರ್ಜ್ಜಗಾಮ ಮಾರ್ತ್ತಾಣ್ಡಸುತಾಂ ಸಮುದ್ರಗಾಮ್
ಉತ್ತಾರಯನ್ತೀಮಥ ತತ್ರ ವಿಷ್ಣುಃ ಪ್ರಾದುರ್ಬಭೂವಾsಶು ವಿಶುದ್ಧಚಿದ್ಧನಃ   ॥೧೦.೪೭

ರೀತಿ ಭಗವಂತನಿಂದ ಹೇಳಲ್ಪಟ್ಟ ಮುನಿ ಪರಾಶರ,
ಸೇರಿದ;ಸಮುದ್ರ ಸೇರಲು ಹೊರಟಿದ್ದ ಯಮುನಾ ನದಿತೀರ.
ಅಲ್ಲಿ ನದಿ ದಾಟಿಸುತ್ತಿದ್ದ ಸತ್ಯವತಿಯ ಸಾರಿ ಸೇರಿದ,
ಆಗ ನಾರಾಯಣ ಅವರ ಮಗನಾಗಿ ಆವಿರ್ಭವಿಸಿದ.

ವಿದೋಷವಿಜ್ಞಾನಸುಖೈಕರೂಪೋsಪ್ಯಜೋ ಜನಾನ್ ಮೋಹಯಿತುಂ 
ಮೃಷೈವ
ಯೋಷಿತ್ಸು ಪುಂಸೋ ಹ್ಯಜನೀವ ದೃಷ್ಯತೇ ಜಾಯತೇ ಕ್ವಾಪಿ 
ಬಲಾದಿವಿಗ್ರಹಃ  ೧೦.೪೮

ಯಥಾ ನೃಸಿಂಹಾಕೃತಿರಾವಿರಾಸೀತ್ ಸ್ತಮ್ಭಾತ್ ತಥಾ ನಿತ್ಯತನುತ್ವತೋ ವಿಭುಃ
ಆವಿರ್ಭವದ್ ಯೋಷಿತಿ ನೋ ಮಲೋತ್ಥಸ್ತಥಾsಪಿ ಮೋಹಾಯ ನಿದರ್ಶಯೇತ್ 
ತಥಾ ೧೦.೪೯

ದೋಷವಿರದ ವಿಜ್ಞಾನಸುಖಗಳೇ ಮೈದಾಳಿ ಬಂದ ಶ್ರೀಮನ್ನಾರಾಯಣ,
ಜನರ ಮೋಹನಕ್ಕೆ ತೋರುವ ತನ್ನ ಹುಟ್ಟಿಗೆ ಪುರುಷ ಸ್ತ್ರೀಸಂಗ ಕಾರಣ.
ಬಲವೇ ಮೈವೆತ್ತಿ ಬಂದ ನಾರಾಯಣಗೆ ಹುಟ್ಟೆಲ್ಲಿ,
ಕಂಬದಿ ಬಂದ ನರಸಿಂಹನಂತೆ ತೂರಿಬಂದ ಹೆಣ್ಣಲ್ಲಿ.
ಶುಕ್ಲ ಶೋಣಿತ ಮಲದಿಂದಾಗಲ್ಲ ಅವನ ಜನನ,
ತೋರುತ್ತಾನೆ ಮಾಡಲು ಅಯೋಗ್ಯ ಜನಮೋಹನ.

ಸ್ತ್ರೀಪುಂಪ್ರಸಙ್ಗಾತ್ ಪರತೋ ಯತೋ ಹರಿಃ ಪ್ರಾದುರ್ಭವತ್ಯೇಷ ವಿಮೋಹಯನ್ 
ಜನಮ್
ಅತೋ ಮಲೋತ್ಥೋsಯಮಿತಿ ಸ್ಮ ಮನ್ಯತೇ 
ಜನೋsಶುಭಃ ಪೂರ್ಣ್ಣಗುಣೈಕವಿಗ್ರಹಮ್  ೧೦.೫೦

ಯಾವ ಕಾರಣದಿಂದ ಗಂಡು ಹೆಣ್ಣಿನ ಸಂಪರ್ಕದ ನಂತರ ಆಗುತ್ತದವನ ಪ್ರಾದುರ್ಭಾವ,
ಅದೇ ಕಾರಣದಿಂದಾಗುತ್ತದೆ ಅಯೋಗ್ಯರಿಗೆ ಅವನು ಹುಟ್ಟಿದ್ದು ಶುಕ್ಲಶೋಣಿತದಿಂದೆಂಬ ಭಾವ.

ದ್ವೀಪೇ ಭಗಿನ್ಯಾಃ ಯಮಸ್ಯ ವಿಶ್ವಕೃತ್ ಪ್ರಕಾಶತೇ ಜ್ಞಾನಮರೀಚಿಮಣ್ಡಲಃ
ಪ್ರಭಾಸಯನ್ನಣ್ಡಬಹಿಸ್ತಥಾsನ್ತಃ ಸಹಸ್ರಲಕ್ಷಾಮಿತಸೂರ್ಯ್ಯದೀಧಿತಿಃ  ೧೦.೫೧

ಯಮನ ತಂಗಿಯಾದ ಯಮುನೆಯ ದ್ವೀಪ,
ವಿಶ್ವ ಸೃಷ್ಟಿಸಿ ಜ್ಞಾನಕಾಂತಿ ತೋರಿದ ಪ್ರತಾಪ.
ಆವಿರ್ಭವಿಸಿದ ಜ್ಞಾನಕಾಂತಿಯುಳ್ಳ ನಾರಾಯಣ,
ಬ್ರಹ್ಮಾಂಡದೊಳಹೊರಗಾದ ಅನಂತಜ್ಯೋತಿ ಕಿರಣ.