ಭೀಮಃ ಸಮಸ್ತಂ ಪ್ರತಿಭಾಬಲೇನ ಜಾನನ್ ಸ್ನೇಹಂ ತ್ವದ್ವಿತೀಯಂ ಕನಿಷ್ಠೇ
।
ದ್ರೋಣಸ್ಯ ಕೃತ್ವಾ ಸಕಲಾಸ್ತ್ರವೇದಿನಂ ಕರ್ತುಂ ಪಾರ್ತ್ಥಂ
ನಾರ್ಜ್ಜುನವಚ್ಚಕಾರ ॥೧೫.೪೧॥
ಭೀಮಸೇನ
ತನ್ನಲ್ಲಿದ್ದರೂ ಸಮಸ್ತ ಪ್ರತಿಭೆ ಮತ್ತು ಬಲ,
ತೋರದೇ, ಅರ್ಜುನಗೆ ದ್ರೋಣಪ್ರೀತಿ ಕೊಡಿಸುವ ಛಲ.
ಮಾಡಲೆಂದೇ ಅರ್ಜುನನ
ಸರ್ವಾಸ್ತ್ರಕೋವಿದ,
ಭೀಮ
ಪ್ರತಿಜ್ಞೆಗೈಯ್ಯದೇ ತಾನು ಸುಮ್ಮನಾದ.
ನೈವಾತಿಯತ್ನೇನ ದದರ್ಶ
ಲಕ್ಷಂ^ ಶುಶ್ರೂಷಾಯಾಂ
ಪಾರ್ತ್ಥಮಗ್ರೇ ಕರೋತಿ ।
ಸ್ವಬಾಹುವೀರ್ಯ್ಯಾದ್ ಭಗವತ್ಪ್ರಸಾದಾನ್ನಿಹನ್ಮಿ ಶತ್ರೂನ್ ಕಿಮನೇನ
ಚೇತಿ ॥೧೫.೪೨॥
ಭೀಮ
ಮಾಡುತ್ತಿರಲಿಲ್ಲ ಶರಪ್ರಯೋಗದಲ್ಲಿ ಮಹಾಪ್ರಯತ್ನ,
ದ್ರೋಣರ ಕಣ್ಣಲ್ಲಿ
ಪಾರ್ಥ ದೊಡ್ಡವನಾಗಲೆಂದು ಅವನ ಯತ್ನ.
ಗುರುಸೇವೆಯಲ್ಲಿ
ಅರ್ಜುನನ ಬಿಡುತ್ತಿದ್ದ ಮುಂದೆ,
ಕೊಲ್ಲಬಲ್ಲೆ ನಾ
ಸಹಜಬಲ ಹರಿ ಅನುಗ್ರಹದಿಂದೆ.
ಏನಾಗಬೇಕಿದೆ
ಪ್ರತಿಜ್ಞೆ ಅಸ್ತ್ರೋಪದೇಶಗಳಿಂದೆ.
ತದಾ ಸಮೀಯುಃ ಸಕಲಾಃ ಕ್ಷಿತೀಶಪುತ್ರಾ ದ್ರೋಣಾತ್
ಸಕಲಾಸ್ತ್ರಾಣ್ಯವಾಪ್ತುಮ್ ।
ದದೌ ಸ ತೇಷಾಂ ಪರಮಾಸ್ತ್ರಾಣಿ ವಿಪ್ರೋ ರಾಮಾದವಾಪ್ತಾನ್ಯಗತಾನಿ
ಚಾನ್ಯೈಃ ॥೧೫.೪೩॥
ರಾಜಕುಮಾರರು ಬಂದರು
ದ್ರೋಣಾಚಾರ್ಯರಿಂದ ಪಡೆಯಲು ಅಸ್ತ್ರ,
ಪರಶುರಾಮರಿಂದ ಕಲಿತ
ದ್ರೋಣರು ಕೊಟ್ಟರೆಲ್ಲರಿಗೆ ಅದ್ವಿತೀಯ ಶಾಸ್ತ್ರ.
ಅಸ್ತ್ರಾಣಿ ಚಿತ್ರಾಣಿ ಮಹಾನ್ತಿ ದಿವ್ಯಾನ್ಯನ್ಯೈರ್ನೃಪೈರ್ಮ್ಮನಸಾsಪ್ಯಸ್ಮೃತಾನಿ
।
ಅವಾಪ್ಯ ಸರ್ವೇ ತನಯಾ ನೃಪಾಣಾಂ ಶಕ್ತಾ ಬಭೂವುರ್ನ್ನ ಯಥೈವ
ಪೂರ್ವೇ ॥೧೫.೪೪॥
ಹೊಂದಿದರು
ಆಶ್ಚರ್ಯಕರ ಮಹತ್ತರ ಅಲೌಕಿಕವಾದ ದಿವ್ಯಾಸ್ತ್ರ,
ಪಡೆದರು ಬೇರಾರೂ
ಯೋಚಿಸಲಾಗದ ಬಲಶಕ್ತಿಯ ಅಸ್ತ್ರ.
ನೈತಾದೃಶಾಃ ಪೂರ್ವಮಾಸನ್ ನರೇನ್ದ್ರಾ ಅಸ್ತ್ರೇ ಬಲೇ ಸರ್ವವಿದ್ಯಾಸು
ಚೈವ ।
ದೌಷ್ಷನ್ತಿಮಾನ್ಧಾತೃಮರುತ್ತಪೂರ್ವಾಶ್ಚೈತತ್ಸಮಾನಾಃ ಸುರುದಾರವೀರ್ಯಾಃ ॥೧೫.೪೫॥
ಹೀಗೆ ಅಸ್ತ್ರದಲ್ಲಿ
ಬಲದಲ್ಲಿ ವಿದ್ಯೆಗಳಲ್ಲಿ ದ್ರೋಣಶಿಷ್ಯರಾದರು ಉತ್ತಮ,
ಹಿಂದಾರೂ ಇರದ, ಭರತ ಮಾಂಧಾತೃ ಮೊದಲಾದವರ ಸರಿಸಮ.[Contributed by Shri Govind Magal]