ಸಾರ ಸಂಗಮ by “ತ್ರಿವೇಣಿ ತನಯ”
ಅಸ್ವತಂತ್ರ
-ಸರ್ವಸ್ವತಂತ್ರ
ಎಲ್ಲರೊಳಗಾಡುವ
ಅಂತರ್ಯಾಮಿಯನೋಡು,
ಜ್ಞಾನ ಗಟ್ಟಿಯಾಗಲೆಂದು ಅನವರತ
ಬೇಡು,
ಏನು ಮಾಡಬಲ್ಲೆ ನೀನು
ಅಸ್ವತಂತ್ರ,
ಸರ್ವಾಂತರ್ಯಾಮಿ ಅವ
ಸರ್ವಸ್ವತಂತ್ರ.
ಬಿಂಬ -ಪ್ರತಿಬಿಂಬ
ನಾನೆಂಬ ಬೋನೋಳಗೆ ಅಹಂಕಾರದ
ಸಿಂಹ,
ಹುಡುಕಾಟವಿದ್ದವರಿಗೆ ಅರಿವಾಗುವ
ಗುಮ್ಮ ,
ನಾನೆಂದು
ಹೇಳಿಕೊಳ್ಳಬಲ್ಲವನೊಬ್ಬನೇ ಪರಬ್ರಹ್ಮ,
ಮಿಕ್ಕವರೆಲ್ಲರೂ ಅವನದೇ
ಪ್ರತಿಬಿಂಬವಮ್ಮ.
ಶಿಸ್ತು -ಬಿಡುಗಡೆಗೆ
ಅಸ್ತು
ಲೋಕದಲ್ಲಿ ಕೂಡಾ ಶಿಸ್ತೇ
ಪ್ರಧಾನ ನೋಡು,
ಶಿಸ್ತಿನ ಬಂಧನದಲ್ಲೇ ಬಿಡುಗಡೆಯ
ಬೇಡು,
ಮಿತಿ ಅರಿತು ನಿಯಾಮಕಗೆ
ಮಣಿವುದೇ ಶಿಸ್ತು,
ಶರಣಾದವರಿಗಷ್ಟೇ ಸಿಕ್ಕೀತು
ಬಿಡುಗಡೆಗೆ ಅಸ್ತು.
ಪದಬಂಧ
ಬದುಕೊಂದು ಪದಬಂಧ,
ಇರಲಿ ಮಧುರ ಸಂಬಂಧ,
ಪದಗಳಲ್ಲಿರಲಿ ನಿರ್ಮಲ ಪ್ರೀತಿ,
ಅದೇ ನೋಡು ಬಾಳುವ ರೀತಿ.
ಪುರದ ಸ್ವತ್ತು
-ಪುರುಸೊತ್ತು
ಕಾಣದ ಮಹತ್ತು ಎಲ್ಲರ ಪುರದ
ಸ್ವತ್ತು,
ಕಾಣದ ಕಾಂಬುದಕೆ ಯಾರಿಗಿಲ್ಲ
ಪುರುಸೊತ್ತು,
ಪುರುಸೊತ್ತಾಗಿದೆ ಅನ್ಸಿದಾಗ
ಎಷ್ಟಿರತ್ತೊ ಹೊತ್ತು,
ಈ ಮತಿಹೀನಬಾಳ ಓಟವೇ ಜೀವನ
ಅನ್ನೋ ಗಮ್ಮತ್ತು.
(Contributed by Shri Govind Magal)
No comments:
Post a Comment
ಗೋ-ಕುಲ Go-Kula