Saturday 2 March 2019

ಮಹಾಭಾರತ ತಾತ್ಪರ್ಯನಿರ್ಣಯ, ಕನ್ನಡದಲ್ಲಿ 12: 11 - 14

ಯೇಯೇ ಹಿ ದೇವಾಃ ಪೃಥಿವೀಂ ಗತಾಸ್ತೇ ಸರ್ವೇ ಶಿಷ್ಯಾಃ ಸತ್ಯವತೀಸುತಸ್ಯ ।
ವಿಷ್ಣುಜ್ಞಾನಂ ಪ್ರಾಪ್ಯ ಸರ್ವೇsಖಿಲಜ್ಞಾಸ್ತಸ್ಮಾದ್ ಯಥಾಯೋಗ್ಯತಯಾ ಬಭೂವುಃ ॥೧೨.೧೧॥

ಭೂಮಿಯಲ್ಲಿ ಅವತರಿಸಿದ ದೇವತೆಗಳೆಲ್ಲರು,
ವ್ಯಾಸರಿಂದ ವಿಷ್ಣುಜ್ಞಾನ ಪಡೆದ ಅವರ ಶಿಷ್ಯರು.
ಅವರವರ ಯೋಗ್ಯತಾನುಸಾರ ಸರ್ವಜ್ಞರಾದರು.

ಮರೀಚಿಜಾಃ ಷಣ್ ಮುನಯೋ ಬಭೂವುಸ್ತೇ ದೇವಕಂ ಪ್ರಾಹಸನ್ ಕಾರ್ಶ್ಯಹೇತೋಃ ।
ತಚ್ಛಾಪತಃ ಕಾಲನೇಮಿಪ್ರಸೂತಾ ಅವಧ್ಯತಾರ್ತ್ಥಂ ತಪ ಏವ ಚಕ್ರುಃ ॥೧೨.೧೨॥

ಮರೀಚಿ ಮುನಿಯ ಪುತ್ರರು ಆರುಮಂದಿ ಮುನಿಗಳಿದ್ದರು,
ಅವರು ದೇವಕ ಮುನಿಯ ಕೃಶತ್ವದ ಪರಿಹಾಸ್ಯ ಮಾಡಿದರು.
ದೇವಕನ ಶಾಪದಿಂದ ಕಾಲನೇಮಿಯ ಮಕ್ಕಳಾದರು,
ಹಾಗೆ ಹುಟ್ಟಿದವರು ಅವಧ್ಯತ್ವಕ್ಕಾಗಿ ತಪಸ್ಸು ಮಾಡಿದರು.

ಧಾತಾ ಪ್ರಾದಾದ್ ವರಮೇಷಾಂ ತಥೈವ ಶಶಾಪ ತಾನ್ ಕ್ಷ್ಮಾತಳೇ ಸಮ್ಭವಧ್ವಮ್ ।
ತತ್ರ ಸ್ವತಾತೋ ಭವತಾಂ ನಿಹನ್ತೇತ್ಯಾತ್ಮಾನ್ಯತೋ ವರಲಿಪ್ಸೂನ್ ಹಿರಣ್ಯಃ ॥೧೨.೧೩॥

ಬ್ರಹ್ಮ ಅವರಿಗೆ ಹಾಗೇ ಅವಧ್ಯತ್ವದ ವರ ನೀಡಿದ,
ಅಹಂಕಾರಿ ಹಿರಣ್ಯಕಶಿಪು ಇದರಿಂದ ಮುನಿದ.
ಜಗದೀಶ್ವರ ಇರಲು ಇಲ್ಲಿ ನಾನು,
ಇನ್ನೊಬ್ಬರಿಂದ ವರ ಬಯಸಿದಿರೇನು?
ಶಾಪವಿತ್ತ -ನೀವು ಹುಟ್ಟಿರಿ ಭೂಮಿಯಲ್ಲಿ,
ಆಗ ನಿಮ್ಮನ್ನು ನಿಮ್ಮ ತಂದೆ ಕೊಲ್ಲುತ್ತಾನಲ್ಲಿ.


ದುರ್ಗ್ಗಾ  ತದಾ ತಾನ್ ಭಗವತ್ಪ್ರಚೋದಿತಾ ಪ್ರಸ್ವಾಪಯಿತ್ವಾ ಪ್ರಚಕರ್ಷ ಕಾಯಾತ್ ।
ಕ್ರಮಾತ್ ಸಮಾವೇಶಯದಾಶು ದೇವಕೀಗರ್ಭಾಶಯೇ ತಾನ್ಯಹನಚ್ಚ ಕಂಸಃ ॥೧೨.೧೪॥

ಭಗವಂತನಿಂದ ಪ್ರೇರಿತಳಾದ ದುರ್ಗಾದೇವಿ,
ಕಾಲನೇಮಿಪುತ್ರರ ನಿದ್ರೆಗೊಳಿಸವರ ಕೆಡವಿ,
ಅವರ ಶರೀರದಿಂದ ಅಂಶ ಅಂಶವಾಗಿ ಸೆಳೆದಳಂತೆ,
ದೇವಕಿಯ ಗರ್ಭದಲ್ಲವರ ಪ್ರವೇಶಗೊಳಿಸಿದಳಂತೆ.
ಕಂಸ ಅವರ ಕೊಂದ -ಅದು ದೈವನಿಯಮದಂತೆ. 
[Contributed by Shri Govind Magal]

No comments:

Post a Comment

ಗೋ-ಕುಲ Go-Kula