Thursday, 11 April 2019

ಮಹಾಭಾರತ ತಾತ್ಪರ್ಯನಿರ್ಣಯ, ಕನ್ನಡದಲ್ಲಿ 12: 15 - 18

ತದಾ ಮುನೀನ್ದ್ರಸಂಯುತಃ ಸದೋ ವಿಧಾತುರುತ್ತಮಮ್ ।
ಸ ಪಾಣ್ಡುರಾಪ್ತುಮೈಚ್ಛತ ನ್ಯವಾರಯಂಶ್ಚ ತೇ ತದಾ ॥೧೨.೧೫॥
ಮುನಿಶ್ರೇಷ್ಠರ ಸಮೂಹದ ನಡುವೆ ಪಾಂಡುವಿನ ಚಿತ್ತ,
ಮಾಡಿದ ತಾನು ಬ್ರಹ್ಮಲೋಕಗಮನದ ಬಯಕೆಯ ವ್ಯಕ್ತ.
ಆ ಸಮಯದಿ ಮುನಿಶ್ರೇಷ್ಠರುಗಳಿಂದ ತಡೆಯಲ್ಪಟ್ಟ ಆತ.

ಯದರ್ತ್ಥಮೇವ ಜಾಯತೇ ಪುಮಾನ್ ಹಿ ತಸ್ಯ ಸೋsಕೃತೇಃ ।
ಶುಭಾಂ ಗತಿಂ ನತು ವ್ರಜೇದ್ ದ್ಧ್ರುವಂ ತತೋ ನ್ಯವಾರಯನ್ ॥೧೨.೧೬॥
ಪ್ರಧಾನದೇವತಾಜನೇ ನಿಯೋಕ್ತುಮಾತ್ಮನಃ ಪ್ರಿಯಾಮ್ ।
ಬಭೂವ ಪಾಣ್ಡುರೇಷ ತದ್ ವಿನಾ ನ ತಸ್ಯ ಸದ್ಗತಿಃ   ॥೧೨.೧೭॥
ಜೀವಾತ್ಮದ ಯಾವ ಉದ್ದೇಶ ಸಾಧನೆಗಿರುತ್ತದೋ ನಡೆ,
ಸಾಧಿಸದಿರೆ ಸದ್ಗತಿ ಹೊಂದಲಾಗದೆಂದು ಮುನಿಗಳ ತಡೆ.
ಪಾಂಡು ಮುಖೇನ ಆಗಬೇಕಿತ್ತು ಉತ್ತಮ ದೇವತೆಗಳ ಜನನ,
ತನ್ನ ಪತ್ನಿ ಮಕ್ಕಳ ಪಡೆಯಬೇಕಿತ್ತು ಮಾಡಿ ನಿಯೋಗ ಕಾರಣ.
ಹಾಗಾಗದ ಹೊರತು ದೊರಕುತ್ತಿದ್ದಿಲ್ಲ ಅವಗೆ ಸದ್ಗತಿಯ ಹೂರಣ.

ಅತೋsನ್ಯಥಾ ಸುತಾನೃತೇ ವ್ರಜನ್ತಿ ಸದ್ಗತಿಂ ನರಾಃ ।
ಯಥೈವ ಧರ್ಮ್ಮಭೂಷಣೋ ಜಗಾಮ ಸನ್ಧ್ಯಕಾಸುತಃ   ॥೧೨.೧೮॥

ಮಕ್ಕಳ ಪಡೆಯದಿದ್ದರೂ ಜೀವಿತದಿ ಮಾನವ,
ಸದ್ಗತಿ ಹೊಂದುವುದು ಬೇರೆ ಬಗೆಯಿಂದ ಜೀವ.
ಸಂಧ್ಯಾವಳಿಯ ಪುತ್ರ ಧರ್ಮಾಂಗದನ ಉದಾಹರಣೆ,
ಮಕ್ಕಳಿರದ ನಿಯೋಗ ಬಳಸದವರ ಸಾಧನಾ ವಿವರಣೆ.
[Contributed by Shri Govind Magal] 

No comments:

Post a Comment

ಗೋ-ಕುಲ Go-Kula