Saturday, 20 April 2019

ಮಹಾಭಾರತ ತಾತ್ಪರ್ಯನಿರ್ಣಯ, ಕನ್ನಡದಲ್ಲಿ 12: 69 - 72

ಗರ್ಭಂ ದೇವಕ್ಯಾಃ ಸಪ್ತಮಂ ಮೇನಿರೇ ಹಿ ಲೋಕಾಃ ಸೃತಂ ತ್ವಷ್ಟಮಂ ತಾಂ ತತಃ ಸಃ ।
ಮತ್ವಾ ಹನ್ತುಂ ಪಾದಯೋಃ ಸಮ್ಪ್ರಗೃಹ್ಯ ಸಮ್ಪೋಥಯಾಮಾಸ ಶಿಲಾತಳೇ ಚ ॥೧೨.೬೯॥
ಸಾ ತದ್ಧಸ್ತಾತ್ ಕ್ಷಿಪ್ರಮುತ್ಪತ್ಯ ದೇವೀ ಖೇsದೃಶ್ಯತೈವಾಷ್ಟಭುಜಾ ಸಮಗ್ರಾ ।
ಬ್ರಹ್ಮಾದಿಭಿಃ ಪೂಜ್ಯಮಾನಾ ಸಮಗ್ರೈರತ್ಯದ್ಭುಥಾಕಾರವತೀ ಹರಿಪ್ರಿಯಾ ॥೧೨.೭೦॥
ದೇವಕಿಯ ಏಳನೇ ಮಗುವಿನದು ಆಗಿದೆಯೆಂದು ಗರ್ಭಸ್ರಾವ,
ಕಂಸನೂ ಸೇರಿದಂತೆ ಉಳಿದೆಲ್ಲರದೂ ಹಾಗಾಗಿದೆ ಎಂದೇ ಭಾವ.
ಹೀಗೆ ಕಂಸ ದುರ್ಗೆಯನ್ನು ಎಂಟನೇ ಮಗುವೆಂದು ಬಗೆದ,
ಕಾಲುಗಳಲ್ಲಿ ಮಗುವ ಹಿಡಿದು ಬಂಡೆಗಲ್ಲಿಗಪ್ಪಳಿಸಲು ಹೋದ.
ಹಿಡಿತದಿಂದ ಬಿಡಿಸಿಕೊಂಡ ದುರ್ಗೆ ಮೇಲಕ್ಕೇರಿ ಆಕಾಶದಲ್ಲಿ,
ಎಂಟು ತೋಳ್ಗಳ ಅತ್ಯದ್ಭುತವಾದ ದೇವಿಯಾಗಿ ಕಂಡಳಲ್ಲಿ.
ಬ್ರಹ್ಮಾದಿ ಸಮಗ್ರ ದೇವತೆಗಳಿಂದ ಪೂಜೆಗೊಂಬ ಹರಿಪ್ರಿಯಳಲ್ಲಿ.

ಉವಾಚ ಚಾSರ್ಯ್ಯಾ ತವ ಮೃತ್ಯುರತ್ರ ಕ್ವಚಿತ್ ಪ್ರಜಾತೋ ಹಿ ವೃಥೈವ ಪಾಪ ।
ಅನಾಗಸೀಂ ಮಾಂ ವಿನಿಹನ್ತುಮಿಚ್ಛಸ್ಯಶಕ್ಯಕಾರ್ಯ್ಯೇ ತವ ಚೋಧ್ಯಮೋSಯಮ್ ॥೧೨.೭೧॥
ಆಕಾಶದಿ ದಿವ್ಯರೂಪದಿಂದ ಕಾಣಿಸಿಕೊಂಡ ದುರ್ಗೆ ಕಂಸನ ಕುರಿತು,
ನನ್ನ ಕೊಲ್ಲಲು ನಿನ್ನಿಂದಾಗಲ್ಲ,ಇನ್ನೆಲ್ಲೋ ಹುಟ್ಟ್ಯಾಗಿದೆ ನಿನ್ನ ಮೃತ್ಯು.
ತಪ್ಪು ಮಾಡಿರದ ನನ್ನ ಕೊಲ್ಲುವ ನಿನ್ನ ಬಯಕೆಯದು ವ್ಯರ್ಥಮಾತು.

 ಉಕ್ತ್ವೇತಿ ಕಂಸಂ ಪುನರೇವ ದೇವಕೀತಲ್ಪೇsಶಯದ್ ಬಾಲರೂಪೈವ ದುರ್ಗ್ಗಾ ।
ನಾಜ್ಞಾಸಿಷುಸ್ತಾಮಥ ಕೇಚನಾತ್ರ ಋತೇ ಹಿ ಮಾತಾಪಿತರೌ ಗುಣಾಢ್ಯಾಮ್ ॥೧೨.೭೨॥
ಈ ರೀತಿ ಕಂಸನಿಗೆ ಹೇಳಿದ ಆ ದುರ್ಗೆ,
ಶಿಶುವಾಗಿ ಮಲಗಿದಳು ದೇವಕಿಯ ಬಗಲಿಗೆ.
ಅವಳ ಆ ಇರುವಿಕೆ ತಂದೆತಾಯಿಗಳ ಬಿಟ್ಟು,
ಇನ್ಯಾರಿಗೂ ಅರಿವಾಗದಂಥ ದೈವೀ ಪಟ್ಟು.

No comments:

Post a Comment

ಗೋ-ಕುಲ Go-Kula