Wednesday 24 April 2019

ಮಹಾಭಾರತ ತಾತ್ಪರ್ಯನಿರ್ಣಯ, ಕನ್ನಡದಲ್ಲಿ 12: 76 - 81

ಅಥ ಪ್ರಭಾತೇ ಶಯನೇ ಶಯಾನಮಪಶ್ಯತಾಮಬ್ಜದಲಾಯತಾಕ್ಷಮ್ ।
ಕೃಷ್ಣಂ ಯಶೋದಾ ಚ ತಥೈವ ನನ್ದ ಆನನ್ದಸಾನ್ದ್ರಾಕೃತಿಮಪ್ರಮೇಯಮ್ ॥೧೨.೭೬॥
ಮರುಬೆಳಿಗ್ಗೆ ನಂದ ಯಶೋದೆಯರು ತಮ್ಮ ಹಾಸಿಗೆಯಲಿ ಕಂಡ ನೋಟ,
ತಾವರೆಕಂಗಳ ಆನಂದಮೈವೆತ್ತ ಪೂರ್ಣತಿಳಿಯಲಾಗದ ಕೃಷ್ಣನಾಟ.
ಮೇನಾತ ಏತೌ ನಿಜಪುತ್ರಮೇನಂ ಸ್ರಷ್ಟಾರಮಬ್ಜಪ್ರಭವಸ್ಯ  ಚೇಶಮ್ ।
ಮಹೋತ್ಸವಾತ್ ಪೂರ್ಣ್ಣಮನಾಶ್ಚ ನನ್ದೋ ವಿಪ್ರೇಭ್ಯೋsದಾಲ್ಲಕ್ಷಮಿತಾಸ್ತದಾ ಗಾಃ ॥೧೨.೭೭॥
ಕಮಲೋದ್ಭವ ಬ್ರಹ್ಮನ ಪಿತ ಸರ್ವಸಮರ್ಥ ಹರಿ,
ನಂದಯಶೋದೆಯರು ತಮ್ಮ ಮಗನೆಂದ ಆ ಪರಿ.
ಸಂತಸದ ಹೊಳೆ ಹರಿಸಿತು ಆ ಮಗುವಿನ ಜನನ,
ನಂದ ಮಾಡಿದ ಲಕ್ಷಕ್ಕೂ ಮಿಕ್ಕಿದ ಗೋವುದಾನ.

ಸುವರ್ಣ್ಣರತ್ನಾಮ್ಬರಭೂಷಣಾನಾಂ ಬಹೂನಿ ಗೋಜೀವಿಗಣಾಧಿನಾಥಃ ।
ಪ್ರಾದಾದಥೋಪಾಯನಪಾಣಯಸ್ತಂ ಗೋಪಾ ಯಶೋದಾಂ ಚ ಮುದಾ ಸ್ತ್ರಿಯೋsಗಮನ್ ॥೧೨.೭೮॥
ಗೊಲ್ಲರ ಗುಂಪಿನ ಒಡೆಯನಾದ ಆ ನಂದಗೋಪ,
ಸುವರ್ಣರತ್ನ ಬಟ್ಟೆ ಜೊತೆ ಗೋದಾನ ಕೊಟ್ಟ ಭೂಪ.
ಉಡುಗೊರೆಯೊಂದಿಗೆ ನಂದನ ಬಳಿಗೆ ಬಂದ ಗೊಲ್ಲರ ಹಿಂಡು,
ಆನಂದದಿಂದ ಯಶೋದೆಯ ಬಳಿ ಧಾವಿಸಿತು  ಗೋಪಿಯರ ದಂಡು.

ಗತೇಷು ತತ್ರೈವ ದಿನೇಷು ಕೇಷುಚಿಜ್ಜಗಾಮ ಕಂಸಸ್ಯ ಗೃಹಂ ಸ ನನ್ದಃ ।
ಪೂರ್ವಂ ಹಿ ನನ್ದಃ ಸ ಕರಂ ಹಿ ದಾತುಂ ಬೃಹದ್ವನಾನ್ನಿಸ್ಸೃತಃ ಪ್ರಾಪ ಕೃಷ್ಣಾಮ್ ॥೧೨.೭೯॥
ಸಹಾsಗತಾ ತೇನ ತದಾ ಯಶೋದಾ ಸುಷಾವ ದುರ್ಗ್ಗಾಮಥ ತತ್ರ ಶೌರಿಃ ।
ನಿಧಾಯ ಕೃಷ್ಣಂ ಪ್ರತಿಗೃಹ್ಯ ಕನ್ಯಕಾಂ ಗೃಹಂ ಯಯೌ ನನ್ದ ಉವಾಸ ತತ್ರ ॥೧೨.೮೦॥
ನಂದಗೋಪ ಕಂಸನಿಗೆ ಕಪ್ಪ ಕಾಣಿಕೆ ಕೊಡುವುದಕ್ಕೋಸ್ಕರ,
ಬೃಹದ್ವನದಿಂದ ಮಧುರಾ ಮಾರ್ಗ  ಸೇರಿದ ಯಮುನಾತೀರ.
ಆತನೊಂದಿಗೆ ಬಂದಿದ್ದ ಪತ್ನಿ ಯಶೋದಾದೇವಿ,
ದುರ್ಗೆಯ ಹೆತ್ತು ಅವಳಿಗಾಗಿದ್ದಳು ತಾನು ತಾಯಿ.
ಆಗಲೇ ವಸುದೇವ ಕೃಷ್ಣನ ತಂದು ಯಶೋದೆಯ ಪಕ್ಕದಲ್ಲಿಟ್ಟಿದ್ದ,
ಅಲ್ಲಿದ್ದ ದುರ್ಗೆಯನ್ನು ಎತ್ತಿಕೊಂಡು ಮತ್ತೆ ತಾನು ಹಿಂತಿರುಗಿದ್ದ.

ನಿರುಷ್ಯ ತಸ್ಮಿನ್ ಯಮುನಾತಟೇ ಸ ಮಾಸಂ ಯಯೌ ದ್ರಷ್ಟುಕಾಮೋ ನರೇನ್ದ್ರಮ್ ।
ರಾಜ್ಞೇsಥ ತಂ ದತ್ತಕರಂ ದದರ್ಶ ಶೂರಾತ್ಮಜೋ ವಾಕ್ಯಮುವಾಚ ಚೈನಮ್ ॥೧೨.೮೧॥
ಯಮುನಾತೀರದಲ್ಲಿ ಒಂದು ತಿಂಗಳಕಾಲ ಮಾಡಿ ವಾಸ,
ನಂದಗೋಪ ಕೈಗೊಂಡ ಕಂಸನ ಕಾಣಲು ಮಧುರಾ ಪ್ರವಾಸ.
ಅಲ್ಲಿ ಕಂಸನಿಗೆ ದತ್ತಕರ ಕೊಟ್ಟ ನಂದ,
ವಸುದೇವನ ಕಂಡು ಹೇಳಿದ ಮಾತೊಂದ.
[Contributed by Shri Govind Magal] 

No comments:

Post a Comment

ಗೋ-ಕುಲ Go-Kula