Monday, 15 April 2019

ಮಹಾಭಾರತ ತಾತ್ಪರ್ಯನಿರ್ಣಯ, ಕನ್ನಡದಲ್ಲಿ 12: 55 - 58


ತಜ್ಜನ್ಮಮಾತ್ರೇಣ ಧರಾ ವಿದಾರಿತಾ ಶಾರ್ದೂಲಭೀತಾಜ್ಜನನೀಕರಾದ್ ಯದಾ ।
ಪಪಾತ ಸಞ್ಚೂರ್ಣ್ಣಿತ ಏವ ಪರ್ವತಸ್ತೇನಾಖಿಲೋsಸೌ ಶತಶೃಙ್ಗನಾಮಾ ॥೧೨.೫೫॥
ಭೀಮಸೇನ ಹುಟ್ಟಿದ ಮಾತ್ರಕ್ಕೆ ಭೂಮಿ ಬಿರಿಯಿತು,
ಹುಲಿಯನ್ನು ಕಂಡ ಕುಂತಿದೇವಿಯ ಕೈ ನಡುಗಿತು.
ಕುಂತೀಕೈಯಲ್ಲಿದ್ದ ಭೀಮ ಕೆಳಗೆ ಬಿದ್ದಾಗ,
ಪುಡಿಪುಡಿಯಾದ ಪರ್ವತವದು ಶತಶೃಂಗ.
ತಸ್ಮಿನ್ ಪ್ರಜಾತೇ ರುಧಿರಂ ಪ್ರಸುಸ್ರುವುರ್ಮ್ಮಹಾಸುರಾ ವಾಹನಸೈನ್ಯಸಂಯುತಾಃ ।
ನೃಪಾಶ್ಚ ತತ್ ಪಕ್ಷಭವಾಃ ಸಮಸ್ತಾಸ್ತದಾ ಭೀತಾ ಅಸುರಾ ರಾಕ್ಷಸಾಶ್ಚ ॥೧೨.೫೬॥
ಪ್ರಾಣದೇವ ಭೀಮಸೇನನಾಗಿ ಹುಟ್ಟಿಬಂದಾಗ,
ಸ್ವಭಾವತಃ ಮಹಾಸುರರೆಲ್ಲ ಭಯಭೀತರಾದರಾಗ.
ವಾಹನ ಸೈನ್ಯಯುಕ್ತರಾದ ಅಸುರ-ರಾಜ-ರಕ್ಕಸರು,
ವಿಪರೀತ ಹೆದರಿದವರಾಗಿ ರಕ್ತವನ್ನೇ ಸುರಿಸಿದರು.

ಅವರ್ದ್ಧತಾತ್ರೈವ ವೃಕೋದರೋ ವನೇ ಮುದಂ ಸುರಾಣಾಮಭಿತಃ ಪ್ರವರ್ದ್ಧಯನ್ ।
ತದೈವ ಶೇಷೋ ಹರಿಣೋದಿತೋsವಿಷದ್ ಗರ್ಭಂ ಸುತಾಯಾ ಅಪಿ ದೇವಕಸ್ಯ ॥೧೨.೫೭॥
ವೃಕೋದರ ದೇವತೆಗಳಿಗೆ ಪಡಿಸುತ್ತಾ ಆನಂದ,
ಆನಂದ ವೃದ್ಧಿಸುತ್ತಾ ಆ ಕಾಡಿನಲ್ಲೇ ತಾನು ಬೆಳೆದ.
ಆಗ ಹರಿಯಾಜ್ಞೆಯಿಂದ ಕೂಡಿದ ಶೇಷ,
ಮಾಡಿದ ದೇವಕಿದೇವಿಯ ಗರ್ಭಪ್ರವೇಶ.

ಸ ತತ್ರ ಮಾಸತ್ರಯಮುಷ್ಯ ದುರ್ಗ್ಗಯಾsಪವಾಹಿತೋ ರೋಹಿಣೀಗರ್ಭಮಾಶು ।
ನಿಯುಕ್ತಯಾ ಕೇಶವೇನಾಥ ತತ್ರ ಸ್ಥಿತ್ವಾ ಮಾಸಾನ್ ಸಪ್ತ ಜಾತಃ ಪೃಥಿವ್ಯಾಮ್ ॥೧೨.೫೮॥
ಶೇಷ ದೇವಕಿದೇವಿಯ ಗರ್ಭದಲ್ಲಿದ್ದದ್ದು ಮೂರು ತಿಂಗಳು,
ಹರಿಯಾಜ್ಞೆಯಂತೆ ದುರ್ಗೆ ಅವನ ರೋಹಿಣಿಗರ್ಭಕೆ ಸಾಗಿಸಿದಳು.
ಏಳು ತಿಂಗಳು ಶೇಷ ರೋಹಿಣಿಗರ್ಭದಲ್ಲಿದ್ದ,
ನಂತರ ಭೂಮಿಯಲ್ಲಿ ತಾನು ಜನಿಸಿ ಬಂದ.

No comments:

Post a Comment

ಗೋ-ಕುಲ Go-Kula