Saturday 13 April 2019

ಮಹಾಭಾರತ ತಾತ್ಪರ್ಯನಿರ್ಣಯ, ಕನ್ನಡದಲ್ಲಿ 12: 31-36

ಇತೀರಿತೋsಬ್ರವೀನ್ನೃಪೋ ನ ಧರ್ಮ್ಮತೋ ವಿನಾ ಭುವಃ ।
ನೃಪೋsಭಿರಕ್ಷಿತಾ ಭವೇತ್ ತದಾಹ್ವಯಾsಶು ತಂ ವಿಭುಮ್ ॥೧೨.೩೧॥
ಈ ರೀತಿಯಾಗಿ ಹೇಳಲ್ಪಟ್ಟ ಪಾಂಡುರಾಜನ ಮಾತು,
ಧರ್ಮವಿರದ ಭೂಮಿ ವ್ಯವಸ್ಥಿತವಾಗಿ ಹೇಗಿದ್ದೀತು.
ರಾಜನೊಬ್ಬ ಧರ್ಮದ ಹೊರತು ಭೂರಕ್ಷಕನಾಗಲಾರದ ಕಾರಣ,
ಅದಕ್ಕಾಗಿ ಧರ್ಮರಕ್ಷಕನಾದ ಯಮಧರ್ಮಗೆ ಕೊಡು ಆಹ್ವಾನ.


ಸ ಧರ್ಮ್ಮಜಃ ಸುಧಾರ್ಮ್ಮಿಕೋ ಭವೇದ್ಧಿ ಸೂನುರುತ್ತಮಃ ।
ಇತೀರಿತೇ ತಯಾ ಯಮಃ ಸಮಾಹುತೋsಗಮದ್ ದ್ರುತಮ್ ॥೧೨.೩೨ ॥
ಧರ್ಮದಿಂದಾಗುತ್ತದೆ ಧಾರ್ಮಿಕ ಮಗನ ಹುಟ್ಟು,
ಪ್ರತ್ಯಕ್ಷನಾದ ಯಮ ಕುಂತಿಯಿಂದ ಕರೆಯಲ್ಪಟ್ಟು.

ತತಶ್ಚ ಸದ್ಯ ಏವ ಸಾ ಸುಷಾವ ಪುತ್ರಮುತ್ತಮಮ್ ।
ಯುದಿಷ್ಠಿರಂ ಯಮೋ ಹಿ ಸ ಪ್ರಪೇದ ಆತ್ಮಪುತ್ರತಾಮ್ ॥೧೨.೩೩॥
ಕುಂತಿಯಲ್ಲಿ ಯಮನಿಂದ ಉತ್ಕೃಷ್ಟ ಮಗ ಹುಟ್ಟಿ ಬಂದ,
ಕುಂತಿಗೆ ವರವಾಗಿ ಯಮಧರ್ಮನೇ ಯುಧಿಷ್ಠರ ತಾನಾದ.

ಯಮೇ ಸುತೇ ತು ಕುನ್ತಿತಃ ಪ್ರಜಾತ ಏವ ಸೌಬಲೀ ।
ಅದ̐ಹ್ಯತೇರ್ಷ್ಯಯಾ ಚಿರಂ ಬಭಞ್ಜ ಗರ್ಭಮೇವ ॥೧೨.೩೪॥

ಕುಂತಿಯಿಂದ ಯಮನು ಮಗನಾಗಿ ಹುಟ್ಟಿಬಂದಾಗ,
ಗಾಂಧಾರಿ ಹೊಟ್ಟೆಕಿಚ್ಚಿನಿಂದ ಉರಿದುಹೋದಳಾಗ.
ಮಾಡಿಕೊಂಡಳು ಧರಿಸಿಕೊಂಡಿದ್ದ ಗರ್ಭದ ಭಂಗ.
ಸ್ವಗರ್ಭಪಾತನೇ ಕೃತೇ ತಯಾ ಜಗಾಮ ಕೇಶವಃ ।
ಪರಾಶರಾತ್ಮಜೋ ನ್ಯಧಾದ್ ಘಟೇಷು ತಾನ್ ವಿಭಾಗಶಃ ॥೧೨.೩೫॥
ಹೀಗೆ ಗಾಂಧಾರಿ ಮಾಡಿಕೊಳ್ಳುತ್ತಿರಲು ಗರ್ಭನಾಶವ,
ಓಡಿಬಂದ ತಾನು ವೇದವ್ಯಾಸರೂಪಿಯಾದ ಕೇಶವ.
ಗರ್ಭವ ತುಣುಕುಗಳಾಗಿ ಮಾಡಿದ ನೂರಾಒಂದು ವಿಭಾಗ,
ಪ್ರತಿಯೊಂದನ್ನೂ ಮಡಿಕೆಗಳಲ್ಲಿ ಶೇಖರಿಸಿ ಇಟ್ಟ ಯೋಗ.

ಶತಾತ್ಮನಾ ವಿಭೇದಿತಾಃ ಶತಂ ಸುಯೋಧನಾದಯಃ ।
ಬಭೂವುರನ್ವಹಂ ತತಃ ಶತೋತ್ತರಾ ಚ ದುಶ್ಶಳಾ ॥೧೨.೩೬॥
ನೂರರ ಸಂಖ್ಯೆಯಲ್ಲಿ ವಿಭಾಗಿಸಲ್ಪಟ್ಟು,
ಪಿಂಡಗಳಿಂದ ಸುಯೋಧನಾದಿಗಳ ಹುಟ್ಟು.
ನೂರಾದಮೇಲೆ ಒಂದು ಹೆಣ್ಣಿನ ಬರುವಿಕೆ,
ಅವಳೇ ಮಗಳು ದುಶ್ಯಳಾ ನಾಮಕ ಕನ್ನಿಕೆ.

No comments:

Post a Comment

ಗೋ-ಕುಲ Go-Kula