Monday, 29 April 2019

ಮಹಾಭಾರತ ತಾತ್ಪರ್ಯನಿರ್ಣಯ, ಕನ್ನಡದಲ್ಲಿ 12: 82 - 88

ಯಾಹ್ಯುತ್ಪಾತಾಃ ಸನ್ತಿ ತತ್ರೇತ್ಯುದೀರಿತೋ ಜಗಾಮ ಶೀಘ್ರಂ ಯಮುನಾಂ ಸ ನನ್ದಃ ।
ರಾತ್ರಾವೇವಾsಗಚ್ಛಮಾನೇ ತು ನನ್ದೇ ಕಂಸಸ್ಯ ಧಾತ್ರೀ ತು ಜಗಾಮ ಗೋಷ್ಠಮ್ ॥೧೨.೮೨॥
ನಿನ್ನ ಹೆಂಡತಿ ಇರುವ ದಿಕ್ಕಲ್ಲಿ ನಾನಾ ಬಗೆಯ ಉತ್ಪಾತಗಳ ನೋಟ,
ವಸುದೇವನಿಂದ ಹೇಳಲ್ಪಟ್ಟ ನಂದ ಯಮುನಾತೀರದತ್ತ ಹೊರಟ.
ರಾತ್ರಿಯಲ್ಲಿಯೇ ನಂದಗೋಪ ಹೀಗೆ ಶಿಬಿರದತ್ತ ಬರುತ್ತಿರಲು,
ಕಂಸನ ಸಾಕುತಾಯಿ ಪೂತನೆ ಯಶೋದೆಯೆಡೆ ತೆರಳಿದಳು.

ಸಾ ಪೂತನಾ ನಾಮ ನಿಜಸ್ವರೂಪಮಾಚ್ಛಾಧ್ಯ ರಾತ್ರೌ ಶುಭರೂಪವಚ್ಚ ।
ವಿವೇಶ ನನ್ದಸ್ಯ ಗೃಹಂ ಬೃಹದ್ವನಪ್ರಾನ್ತೇ ಹಿ ಮಾರ್ಗ್ಗೇ ರಚಿತಂ ಪ್ರಯಾಣೇ  ॥೧೨.೮೩॥
ತೀರೇ ಭಗಿನ್ಯಾಸ್ತು ಯಮಸ್ಯ ವಸ್ತ್ರಗೃಹೇ ಶಯಾನಂ ಪುರುಷೋತ್ತಮಂ ತಮ್ ।
ಜಗ್ರಾಹ ಮಾತ್ರಾ ತು ಯಶೋದಯಾ ತಯಾ ನಿದ್ರಾಯುಜಾ ಪ್ರೇಕ್ಷ್ಯಮಾಣಾ ಶುಭೇವ ॥೧೨.೮೪॥
ಆ ಪೂತನೆಯೆಂಬ ರಾಕ್ಷಸಿ ಧರಿಸಿ ಸುಂದರಿಯ ವೇಷ,
ಮಾಡಿದಳು ಆ ರಕ್ಕಸಿ ನಂದಗೋಪನ ಮನೆ ಪ್ರವೇಶ.
ಬೃಹದ್ವನ ಹಾಗೂ ಮಧುರಾ ಮಧ್ಯದ ದಾರಿಯ ಭಾಗ,
ಯಮುನಾತೀರದಿ ಮಾಡಲ್ಪಟ್ಟ ನಂದನ ಶಿಬಿರದ ಜಾಗ.
ಶಿಬಿರದಲ್ಲಿ ಯಶೋದೆಯೊಂದಿಗೆ ಮಲಗಿದ ಕೃಷ್ಣನ ಕಂಡಳು,
ಸಭ್ಯಳಂತೆ ನಟಿಸಿದ ಪೂತನೆ ಯಶೋದೆ ಮಗುವನ್ನು ಎತ್ತಿಕೊಂಡಳು.

ತನ್ಮಾಯಯಾ ಧರ್ಷಿತಾ ನಿದ್ರಯಾ ಚ ನ್ಯವಾರಯನ್ನೈವ ಹಿ ನನ್ದಜಾಯಾ ।
ತಯಾ ಪ್ರದತ್ತಂ ಸ್ತನಮೀಶಿತಾsಸುಭಿಃ ಪಪೌ ಸಹೈವಾsಶು ಜನಾರ್ದ್ದನಃ ಪ್ರಭುಃ ॥೧೨.೮೫॥
ಪೂತನೆಯ ಮಾಯೆಯ ಮೋಸದ ಜಾಲ,
ನಿದ್ದೆಯಲ್ಲಿದ್ದ ಯಶೋದೆ ರಕ್ಕಸಿಯ ತಡೆಯಲಿಲ್ಲ.
ಜಗದ್ಪಿತನಿಗೆ ಪೂತನೆಯಿಂದ ಎದೆಹಾಲುಣಿಸುವ ಆಟ,
ಮೊಲೆಹಾಲೊಂದಿಗೆ ಅವಳ ಪ್ರಾಣ ಹೀರಿದ ಜಾಣ ತುಂಟ.

ಮೃತಾ ಸ್ವರೂಪೇಣ ಸುಭೀಷಣೇನ ಪಪಾತ ಸಾ ವ್ಯಾಪ್ಯ ವನಂ ಸಮಸ್ತಮ್ ।
ತದಾssಗಮನ್ನನ್ದಗೋಪೋsಪಿ ತತ್ರ ದೃಷ್ಟ್ವಾ ಚ ಸರ್ವೇsಪ್ಯಭವನ್ ಸುವಿಸ್ಮಿತಾಃ ॥೧೨.೮೬॥
ಪೂತನೆ ಸಾಯುವಾಗ ವ್ಯಕ್ತವಾದ ಮೂಲರೂಪ,
ಇಡೀ ಕಾಡನ್ನೇ ವ್ಯಾಪಿಸಿ ಸತ್ತು ಬಿದ್ದಳವಳು ಪಾಪ.
ಆಗಲೇ ನಂದಗೋಪ ಶಿಬಿರಕ್ಕೆ ಬಂದ ಸಮಯ,
ಅಲ್ಲಿದ್ದವರಿಗೆಲ್ಲಾ ಪೂತನೆಯ ಕಂಡಾಯಿತು ಆಶ್ಚರ್ಯ.

ಸ ತಾಟಕಾ ಚೋರ್ವಶಿಸಮ್ಪ್ರವಿಷ್ಟಾ ಕೃಷ್ಣಾವದ್ಧ್ಯಾನಾನ್ನಿರಯಂ ಜಗಾಮ ।
ಸಾ ತೂರ್ವಶೀ ಕೃಷ್ಣಭುಕ್ತಸ್ತನೇನ ಪೂತಾ ಸ್ವರ್ಗ್ಗಂ ಪ್ರಯಯೌ ತತ್ಕ್ಷಣೇನ ॥೧೨.೮೭॥
ಪೂತನೆಯೇ ಊರ್ವಶಿಯಿಂದ ಆವಿಷ್ಟಳಾದ ತಾಟಕೆ,
ಕೃಷ್ಣನಲ್ಲಿ ಮಾಡಿದ ಅಪರಾಧದಿಂದ ತಮಸ್ಸು ಹೊಕ್ಕಳಾಕೆ.
ಊರ್ವಶಿಯ ಎದೆಹಾಲನ್ನು ಕೃಷ್ಣ ಉಂಡದ್ದರಿಂದ ಅವಳಾದಳು ಪವಿತ್ರ,
ಆ ಪರಿಣಾಮವಾಗಿ ಅವಳಿಗೆ ಆಯಿತು ಆ ಕ್ಷಣದಲ್ಲಿ ಸ್ವರ್ಗದೆಡೆ ಯಾತ್ರ.
ಒಂದೇ ದೇಹದಲ್ಲಿದ್ದರೂ ಎರಡು ಜೀವದ ಭಿನ್ನ ಸ್ವಭಾವ,
ಅದನ್ನ ಅನುಸರಿಸಿ ಗತಿ ಪಾಲಿಸಿದ ಕೃಷ್ಣನೆಂಬ ಹೆದ್ದೈವ.

ಸಾ ತುಮ್ಬುರೋಃ ಸಙ್ಗತ ಆವಿವೇಶ ರಕ್ಷಸ್ತನುಂ ಶಾಪತೋ ವಿತ್ತಪಸ್ಯ ।
ಕೃಷ್ಣಸ್ಪರ್ಶಾಚ್ಛುದ್ಧರೂಪಾ ಪುನರ್ದ್ದಿವಂ ಯಯೌ ತುಷ್ಟೇ ಕಿಮಲಭ್ಯಂ ರಮೇಶೇ ॥೧೨.೮೮॥
ಊರ್ವಶಿ ಬಯಸಿದ್ದಳು ತುಂಬುರು ಎನ್ನುವ ಗಂಧರ್ವನ ಸಂಗಮ,
ಕುಬೇರನ ಶಾಪಕ್ಕೊಳಗಾಗಿ ಆಯಿತು ರಾಕ್ಷಸಿ ಶರೀರದ ಸಮಾಗಮ.
ಕೃಷ್ಣಸ್ಪರ್ಶದಿಂದ ಪರಿಶುದ್ಧವಾಗಿ ಸ್ವರ್ಗ ಸೇರಿದಳು,
ಭಗವಂತ ಸಂತುಷ್ಟನಾದರೆ ಏನು ಅಸಾಧ್ಯ ಹೇಳು.
[Contributed by Shri Govind Magal]

No comments:

Post a Comment

ಗೋ-ಕುಲ Go-Kula