Saturday 13 April 2019

ಮಹಾಭಾರತ ತಾತ್ಪರ್ಯನಿರ್ಣಯ, ಕನ್ನಡದಲ್ಲಿ 12: 42 - 47

ಅವದ್ಧ್ಯ ಏವ ಸರ್ವತಃ ಸುಯೋಧನೇ ಸಮುತ್ಥಿತೇ ।
ಘೃತಾಭಿಪೂರ್ಣ್ಣಕುಮ್ಭತಃ ಸ ಇನ್ದ್ರಜಿತ್ ಸಮುತ್ಥಿತಃ ॥೧೨.೪೨॥
ಎಲ್ಲರಿಂದ ಅವಧ್ಯನಾದ ದುರ್ಯೋಧನ ತಾನು,
ತುಪ್ಪದಿಂದ ಕೂಡಿದ ಮಡಕೆಯಿಂದೆದ್ದು ಬಂದನು.
ಹಿಂದೆ ಇಂದ್ರಜಿತುವಾಗಿದ್ದ -ರಾವಣನ ಮಗ,
ತುಪ್ಪದ ಘಟದಿಂದ ಮೇಲೆದ್ದು ಬಂದನಾಗ.




ಸ ದುಃಖಶಾಸನೋsಭವತ್ ತತೋsತಿಕಾಯಸಮ್ಭವಃ ।
ಸ ವೈ ವಿಕರ್ಣ್ಣ ಉಚ್ಯತೇ ತತಃ ಕರೋsಭವದ್ ಬಲೀ ॥೧೨.೪೩॥
ಸ ಚಿತ್ರಸೇನನಾಮಕಃ ತಥಾsಪರೇ ಚ ರಾಕ್ಷಸಾಃ ।
ಬಭೂವುರುಗ್ರಪೌರುಷಾ ವಿಚಿತ್ರವೀರ್ಯ್ಯಜಾತ್ಮಜಾಃ ॥೧೨.೪೪॥

ಹೀಗೆ ಹುಟ್ಟಿದ ಇಂದ್ರಜಿತ್ ಆಗಿದ್ದ ದುಃಖಶಾಸನ,
ಹಾಗಾಗೇ ಅವನ ಹೆಸರೂ ಆಯಿತು ದುಃಶ್ಯಾಸನ.
ಆನಂತರ ಹುಟ್ಟಿದ ರಕ್ಕಸನವ ಅತಿಕಾಯ,
ವಿಕರ್ಣವೆಂದಾಯ್ತು ಅವನ ನಾಮಧೇಯ.
ತದನಂತರ ಬಲಿಷ್ಠನಾದ ಖರಾಸುರನ ಜನನ,
ಆ ಖರಾಸುರನ ಹೆಸರಾಯ್ತು ಮುಂದೆ ಚಿತ್ರಸೇನ.
ಹೀಗೆ ಗಾಂಧಾರಿಯ ಎಲ್ಲಾ ಮಕ್ಕಳೂ ಆಗಿದ್ದರು ರಾಕ್ಷಸರು,
ವಿಚಿತ್ರವೀರ್ಯನ ಮೊಮ್ಮಗ ಧೃತರಾಷ್ಟ್ರನ ಮಕ್ಕಳು ವೀರ್ಯವತ್ತರು.

ಸಮಸ್ತದೋಷರೂಪಿಣಃ ಶರೀರಿಣೋ ಹಿ ತೇsಭವನ್ ।
ಮೃಷೇತಿ ನಾಮತೋ ಹಿ ಯಾ ಬಭೂವ ದುಃಶಳಾssಸುರೀ ॥೧೨.೪೫॥
ಹೀಗೆ ಮೈದಾಳಿ ಬಂದವರಿಗೆ ಬೇರೆ ಬೇರೆಯಾದ  ದೋಷವಿತ್ತು,
ಗಾಂಧಾರಿಯಲ್ಲಿ ಹುಟ್ಟಿಬಂದವರಿಗೆಲ್ಲ ಮಾನವ ಶರೀರ ಬಂದಿತ್ತು.
ಸುಳ್ಳಿಗೆ ಅಭಿಮಾನಿನಿಯಾದ ಮೃಷ ಎಂಬ ರಕ್ಕಸಿ,
ದುಷ್ಯಳಾ ಹೆಸರಿಂದ ಬಂದಳು ಅಣ್ಣಂದಿರನುಸರಿಸಿ.


ಕುಹೂಪ್ರವೇಶಸಂಯುತಾ ಯಯಾssರ್ಜ್ಜುನೇರ್ವಧಾಯ ಹಿ ।
ತಪಃ ಕೃತಂ ತ್ರಿಶೂಲಿನೇ ತತೋ ಹಿ ಸಾsತ್ರ ಜಜ್ಞುಷೀ ॥೧೨.೪೬॥
ಹೀಗೆ ದುಶ್ಯಳಾ ಆಗಿ ಹುಟ್ಟಿಬಂದಳು ರಕ್ಕಸಿ ಮೃಷ,
ಅಮಾವಾಸ್ಯೆ ಅಭಿಮಾನಿ ಕುಹೂ ಅವಳಲ್ಲಿ ಪ್ರವೇಶ.
ಇವಳಿಂದಾಗಿತ್ತು ಅಭಿಮನ್ಯುವಿನ ಕೊಲೆಗೆ ರುದ್ರನಲ್ಲಿ ತಪ,
ಆ ಕಾರಣದಿಂದಾಗಿ ದುಷ್ಯಳೆಯಾಗಿ ಹುಟ್ಟಿಬಂದದ್ದು ನೆಪ.

ತಯೋದಿತೋ ಹಿ ಸೈನ್ಧವೋ ಬಭೂವ ಕಾರಣಂ ವಧೇ ।
ಸ ಕಾಲಕೇಯದಾನವಸ್ತದರ್ತ್ಥಮಾಸ ಭೂತಳೇ ॥೧೨.೪೭॥
ದುಷ್ಯಳೆಯಿಂದಲೇ ಪ್ರಚೋದಿತನಾದ ಜಯದ್ರಥ,
ಮುಂದಾಗುತ್ತಾನೆ ಅಭಿಮನ್ಯು ವಧೆಗೆ ಕಾರಣಕರ್ತ.
ಜಯದ್ರಥನಾಗಿ ಕಾಲಕೇಯನೆಂಬ ದೈತ್ಯನ ಹುಟ್ಟು,
ಅಭಿಮನ್ಯುವಿನ ಕೊಲೆ ಸಾಧನವಾಗುವುದು ಗುಟ್ಟು.
[Contributed by Shri Govind Magal] 

No comments:

Post a Comment

ಗೋ-ಕುಲ Go-Kula