Friday 12 April 2019

ಮಹಾಭಾರತ ತಾತ್ಪರ್ಯನಿರ್ಣಯ, ಕನ್ನಡದಲ್ಲಿ 12: 19 - 23

ತದಾ ಕಲಿಶ್ಚ ರಾಕ್ಷಸಾ ಬಭೂವುರಿನ್ದ್ರಜಿನ್ಮುಖಾಃ।
ವಿಚಿತ್ರವೀರ್ಯ್ಯನನ್ದನಪ್ರಿಯೋದರೇ ಹಿ ಗರ್ಭಗಾಃ ॥ ೧೨.೧೯ ॥

ಇದೇ ಕಾಲದಲ್ಲಿ ಕಲಿ ಮತ್ತು ಇಂದ್ರಜಿತ್ ಮುಂತಾದ ರಕ್ಕಸರು,
ವಿಚಿತ್ರವೀರ್ಯಪುತ್ರ ಧೃತರಾಷ್ಟ್ರಪತ್ನಿ ಗಾಂಧಾರಿ ಗರ್ಭ ಸೇರಿದರು.

ತದಸ್ಯ ಸೋsನುಜೋsಶೃಣೋನ್ಮುನೀನ್ದ್ರದೂಷಿತಂ ಚ ತತ್ ।
ವಿಚಾರ್ಯ್ಯ ತು ಪ್ರಿಯಾಮಿದಂ ಜಗಾದ ವಾಸುದೇವಧೀಃ ॥ ೧೨.೨೦ ॥

ಋಷಿಶ್ರೇಷ್ಠರಿಂದ ಗಾಂಧಾರಿಯ ಗರ್ಭಪ್ರಾಪ್ತಿಯ ವಿಷಯವನ್ನು,
ತಿಳಿದುಕೊಂಡವನಾದ ಭಗವದ್ಭಕ್ತ ಧೃತರಾಷ್ಟ್ರನ  ತಮ್ಮನು.
ಮುಂದೇನೆಂದು ಯೋಚಿಸುತ ಪಾಂಡು ಹೇಳಿದ ಕುರಿತು ಕುಂತಿಯನ್ನು.

ಯ ಏವ ಮದ್ಗುಣಾಧಿಕಸ್ತತಃ ಸುತಂ ಸಮಾಪ್ನುಹಿ ।
ಸುತಂ ವಿನಾ ನ ನೋ ಗತಿಂ ಶುಭಾಂ ವದನ್ತಿ ಸಾಧವಃ ॥ ೧೨.೨೧ ॥

ನನಗಿಂತ ಗುಣದಲ್ಲಿ ಶ್ರೇಷ್ಠನಾದವನಿಂದ ಮಗನ ಪಡೆ ನೀನು,
ಮಗನಿಲ್ಲದೇ ನಮಗೆ ಸದ್ಗತಿ ಇಲ್ಲವೆಂದು ಸಾಧುಗಳ ನುಡಿ ತಾನು.

ತದಸ್ಯ ಕೃಚ್ಛ್ರತೋ ವಚಃ ಪೃಥಾsಗ್ರಹೀಜ್ಜಗಾದ ಚ  ।
ಮಮಾಸ್ತಿ ದೇವವಶ್ಯದೋ ಮನೂತ್ತಮಃ ಸುತಾಪ್ತಿದಃ  ॥ ೧೨.೨೨ ॥

ಪಾಂಡುವಿನಿಂದ ಬಂದ ಮಾತಾಗಿತ್ತು ಈ ರೀತಿ,
ಸ್ವೀಕರಿಸಿದಳು ಬಲುಕಷ್ಟದಿಂದ ಅವಳು ಕುಂತಿ.
ನನ್ನಲ್ಲಿರುವ ಮಂತ್ರದಿಂದ ದೇವತೆಗಳಾಗುತ್ತಾರೆ ವಶ,
ಸಿದ್ಧವಾಗಿದೆಎನಗೆ ಪುತ್ರಪ್ರಾಪ್ತಿಯ ಮಂತ್ರೋಪದೇಶ.

ನ ತೇ ಸುರಾನೃತೇ ಸಮಃ ಸುರೇಷು ಕೇಚಿದೇವ ಚ ।
ಅತಸ್ತವಾಧಿಕಂ ಸುರಂ ಕಮಾಹ್ವಯೇ ತ್ವದಾಜ್ಞಯಾ ॥ ೧೨.೨೩ ॥

ಮುಂದುವರಿದ ಕುಂತಿ ಹೇಳುತ್ತಾಳೆ ಪಾಂಡುವಿಗೆ,
ದೇವತೆಗಳ ಬಿಟ್ಟು ಮನುಜರಲ್ಲಿ ಸಮರಿಲ್ಲ ನಿನಗೆ.
ದೇವತೆಗಳಲ್ಲೂ ಕೆಲವರು ಮಾತ್ರ ನಿನಗೆ ಸಮಾನ,
ನಿನಗಧಿಕರೂ ಉಂಟಲ್ಲಿ ದೇವತೆಗಳ ಗಣ,
ಆಜ್ಞೆ ಮಾಡು ಯಾರಿಗೀಯಲಿ ನಾನು ಆಹ್ವಾನ.
[Contributed by Shri Govind Magal] 

No comments:

Post a Comment

ಗೋ-ಕುಲ Go-Kula