ಶ್ರುತ್ವಾ ತಯೋಕ್ತಂ ತು ತದೈವ ಕಂಸಃ
ಪಶ್ಚಾತ್ತಾಪಾದ್ ವಸುದೇವಂ ಸಭಾರ್ಯ್ಯಮ್ ।
ಪ್ರಸಾದಯಾಮಾಸ ಪುನಃಪುನಶ್ಚ ವಿಹಾಯ ಕೋಪಂ
ಚ ತಮೂಚತುಸ್ತೌ ।
ಸುಖಸ್ಯ ದುಃಖಸ್ಯ ಚ ರಾಜಸಿಂಹ ನಾನ್ಯಃ
ಕರ್ತ್ತಾ ವಾಸುದೇವಾದಿತಿ ಸ್ಮ ॥೧೨.೭೩ll
ದುರ್ಗೆಯ ಮಾತಿನಿಂದ ಕಂಸನಲ್ಲಿ ತೀವ್ರ ಪಶ್ಚಾತ್ತಾಪದ ಭಾವ,
ವಸುದೇವ ದೇವಕಿಯರನ್ನು ಮತ್ತೆ ಮತ್ತೆ ಸಾಂತ್ವನಗೊಳಿಸುತ್ತಾನವ.
ಅವರಿಬ್ಬರೂ ಕೂಡಾ ಕಂಸನ ಮೇಲಿನ ಕೋಪವ
ಬಿಟ್ಟು ಕೊಟ್ಟು,
ಹೇಳುತ್ತಾರೆ ಸುಖ ದುಃಖಗಳಿಗೆ ಕಾರಣ ನಾರಾಯಣ ಎಂಬ ಗುಟ್ಟು.
ಆನೀಯ ಕಂಸೋsಥ ಗೃಹೇ ಸ್ವಮನ್ತ್ರಿಣಃ ಪ್ರೋವಾಚ ಕನ್ಯಾವಚನಂ ಸಮಸ್ತಮ್ ।
ಶ್ರುತ್ವಾ ಚ ತೇ ಪ್ರೋಚುರತ್ಯನ್ತಪಾಪಾಃ
ಕಾರ್ಯ್ಯಂ ಬಾಲಾನಾಂ ನಿಧನಂ ಸರ್ವಶೋsಪಿ॥೧೨.೭೪॥
ನಂತರ ಕಂಸನ ಮನೆಯಲ್ಲಿ ನಡೆಯಿತು ವಿಷಯದ ಬಗ್ಗೆ ಮಂತ್ರಾಲೋಚನೆ,
ಪಾಪಿಮಂತ್ರಿಗಳಿಂದ ಎಲ್ಲಾ ಮಕ್ಕಳ ಕೊಲ್ಲಬೇಕೆಂಬ ದುಷ್ಟಹಿಂಸಾ ಸೂಚನೆ.
ತಥೇತಿ ತಾಂಸ್ತತ್ರ ನಿಯುಜ್ಯ ಕಂಸೋ ಗೃಹಂ
ಸ್ವಕೀಯಂ ಪ್ರವಿವೇಶ ಪಾಪಃ ।
ಚೇರುಶ್ಚ ತೇ ಬಾಲವಧೇ ಸದೋಧ್ಯತಾ
ಹಿಂಸಾವಿಹಾರಾಃ ಸತತಂ ಸ್ವಭಾವತಃ ॥೧೨.೭೫॥
ಅದಕ್ಕೆ ಒಪ್ಪಿಗೆ ಕೊಟ್ಟ ಕಂಸ ಮಾಡಿದ ಅಂತಃಪುರ ಪ್ರವೇಶ,
ಹಿಂಸೆಯೇ ಕ್ರೀಡೆಯಾದವರು ಪಡೆದರು ಬಾಲವಧೆಯಲ್ಲಿ ಹರುಷ.
No comments:
Post a Comment
ಗೋ-ಕುಲ Go-Kula