ತಥಾssಸ ನಿರ್ಋಥಾಭಿಧೋsನುಜಃ ಸ
ನಿರ್ಋತೇರಭೂತ್ ।
ಸ ನಾಸಿಕಾಮರುಧ್ಯುತೋ ಯುಯುತ್ಸುನಾಮಕಃ ಕೃತೀ ॥೧೨.೪೮॥
ಸ ಚಾsಮ್ಬಿಕೇಯವೀರ್ಯ್ಯಜಃ
ಸುಯೋಧನಾದನನ್ತರಃ ।
ಬಭೂವ ವೈಶ್ಯಕನ್ಯಕೋದರೋದ್ಭವೋ ಹರಿಪ್ರಿಯಃ ॥೧೨.೪೯॥
ದುರ್ಯೋಧನನ
ಜನನವಾದಮೇಲೆ,
ನಿರ್ಋಥಿಯ ತಮ್ಮ
ನಿರ್ಋಥ ಬಂದ ಲೀಲೆ.
ಅವನು
ಪ್ರವಹವಾಯುವಿನಿಂದ ಯುಕ್ತ,
ನಿಪುಣನವ-
ಸತ್ಕರ್ಮದಲ್ಲಿಯೇ ನಿರತ.
ಯುಯುತ್ಸು ಎಂಬ
ಹೆಸರಿಂದ ಭುವಿಯಲ್ಲಿ ಹುಟ್ಟಿದ,
ಧೃತರಾಷ್ಟ್ರ
ವೈಶ್ಯಸ್ತ್ರೀಯಲ್ಲಿ ಹುಟ್ಟಿ ಹರಿಪ್ರಿಯನಾಗಿದ್ದ.
ಯುಧಿಷ್ಠಿರೇ ಜಾತ ಉವಾಚ ಪಾಣ್ಡುರ್ಬಾಹ್ವೋರ್ಬಲಾಜ್ಜ್ಞಾನಬಲಾಚ್ಚ
ಧರ್ಮ್ಮಃ ।
ರಕ್ಷ್ಯೋsನ್ಯಥಾ ನಾಶಮುಪೈತಿ
ತಸ್ಮಾದ್ ಬಲದ್ವಯಾಢ್ಯಂ ಪ್ರಸುವಾsಶು ಪುತ್ರಮ್ ॥೧೨.೫೦॥
ಪಾಂಡು ಕುಂತಿಗೆ
ಹೇಳಿದ-ಯುಧಿಷ್ಠಿರನದಾದಮೇಲೆ ಹುಟ್ಟು,
ಧರ್ಮರಕ್ಷಣೆಗೆ
ಬೇಕು ಬಾಹು ಜ್ಞಾನ ಬಲಗಳ ವಿಶಿಷ್ಟ ಪಟ್ಟು.
ಇಲ್ಲವಾದರೆ ಧರ್ಮ
ಹೊರಡುತ್ತದೆ ನಾಶದ ಕಡೆ,
ಶೀಘ್ರವೇ ಬಾಹು
ಜ್ಞಾನಬಲದ ಮಗನನ್ನು ಪಡೆ.
ಯಜ್ಞಾಧಿಕೋ ಹ್ಯಶ್ವಮೇಧೋ ಮನುಷ್ಯದೃಶ್ಯೇಷು ತೇಜಸ್ಸ್ವಧಿಕೋ ಹಿ
ಭಾಸ್ಕರಃ ।
ವರ್ಣ್ಣೇಷು ವಿಪ್ರಃ ಸಕಲೈರ್ಗ್ಗುಣೈರ್ವರೋ ದೇವೇಷು ವಾಯುಃ
ಪುರುಷೋತ್ತಮಾದೃತೇ ॥೧೨.೫೧॥
ಅಶ್ವಮೇಧಯಾಗವದು
ಯಜ್ಞಗಳಲ್ಲಿ ಮೇಲು,
ಕಾಣುವ
ತೇಜಸ್ಸುಗಳಲ್ಲಿ ಸೂರ್ಯನೇ ಮಿಗಿಲು.
ಸಕಲಗುಣಶ್ರೇಷ್ಠನಾದ
ಬ್ರಾಹ್ಮಣ ಮನುಜರಲ್ಲಿ ಶೇಷ್ಠ,
ಸರ್ವೋತ್ತಮನ
ಬಿಟ್ಟರೆ ಗುಣಗಳಲ್ಲಿ ಪ್ರಾಣದೇವ ವಿಶಿಷ್ಟ.
ವಿಶೇಷತೋsಪ್ಯೇಷ ಪಿತೈವ ಮೇ
ಪ್ರಭುರ್ವ್ಯಾಸಾತ್ಮನಾ ವಿಷ್ಣುರನನ್ತಪೌರುಷಃ ।
ಅತಶ್ಚ ತೇ ಶ್ವಶುರೋ ನೈವ ಯೋಗ್ಯೋ ದಾತುಂ ಪುತ್ರಂ ವಾಯುಮುಪೈಹಿ ತತ್
ಪ್ರಭುಮ್॥೧೨.೫೨॥
ವೇದವ್ಯಾಸರೂಪದ
ಅನಂತನಾದ ಭಗವಂತನಾಗಿದ್ದಾನೆ ನನ್ನ ಪಿತ,
ನಿನಗೆ
ಮಾವನಾದವನಿಂದ ಮಗನ ಪಡೆಯುವುದದು ಅಸಮ್ಮತ.
ನಂತರದ
ಪ್ರಭುತ್ವದವನು ಮುಖ್ಯಪ್ರಾಣ ನೋಡು,
ಅವನಲ್ಲೇ ಕುಂತಿ
ನೀನು ಪುತ್ರಭಿಕ್ಷೆಯನ್ನು ಬೇಡು.
ಇತೀರಿತೇ ಪೃಥಯಾssಹೂತವಾಯುಸಂಸ್ಪರ್ಶಮಾತ್ರಾದಭವದ್
ಬಲದ್ವಯೇ ।
ಸಮೋ ಜಗತ್ಯಸ್ತಿ ನ ಯಸ್ಯ ಕಶ್ಚಿದ್ ಭಕ್ತೌ ಚ ವಿಷ್ಣೋರ್ಭಗವದ್ವಶಃ
ಸುತಃ ॥೧೨.೫೩॥
ಈ ತೀರ್ಮಾನದ ನಂತರ
ಕುಂತಿಯಿಂದ ಕರೆಯಲ್ಪಟ್ಟ ಮುಖ್ಯಪ್ರಾಣ,
ತನ್ನ ಸ್ಪರ್ಶ
ಮಾತ್ರದಿಂದಲೇ ಕುಂತಿಗೆ ಮಗನಾಗಿ ಬಂದ ತಾ ಜಾಣ.
ಜಗತ್ತಿನಲ್ಲಿ
ಜ್ಞಾನಕರ್ಮಗಳಲ್ಲಿ ಸಮನಿಲ್ಲದವ,
ವಿಷ್ಣು
ಭಕ್ತಿಯಲ್ಲಿಯೂ ತಾನು ಮೊದಲಿಗ ಇವ.
ಭಕ್ತಿಯಿಂದ ಭಗವಂತನ
ವಶಮಾಡಿಕೊಂಡವ,
ಕುಂತಿಯಲ್ಲಿ
ಮಗನಾಗಿ ಹುಟ್ಟಿಬಂದ ಪ್ರಾಣನವ.
ಸ ವಾಯುರೇವಾಭವದತ್ರ ಭೀಮನಾಮಾ ಭೃತಾ ಮಾಃ ಸಕಲಾ ಹಿ ಯಸ್ಮಿನ್ ।
ಸ ವಿಷ್ಣುನೇಶೇನ ಯುತಃ ಸದೈವ ನಾಮ್ನಾ ಸೇನೋ ಭೀಮಸೇನಸ್ತತೋsಸೌ॥೧೨.೫೪॥
ಈರೀತಿ
ಕುಂತೀಪುತ್ರನಾಗಿ ಹುಟ್ಟಿದ ಪ್ರಧಾನವಾಯು,
ಭೀಮನಾಮಕನಾಗಿ
ಭಕ್ತಿ ಜ್ಞಾನದ ಅಮೂಲ್ಯ ಠಾವು.
ಭೀಮನೆಂದರೆ ಸಕಲ
ವಿದ್ಯೆಗಳ ಹೊತ್ತವ,
ಸೇನನೆಂದರೆ
ಭಗವಂತನಿಂದ ಕೂಡಿದವ.
ಭೀಮಸೇನ ಎಂದರೆ
ಎಲ್ಲಾ ವಿದ್ಯೆಗಳ ಮೂಲಗಣಿ,
ಅವನೊಡೆಯನೊಂದಿಗಿರುವ ಅವನ ಪ್ರೀತಿಯ ಗಿಣಿ.
No comments:
Post a Comment
ಗೋ-ಕುಲ Go-Kula