Thursday 18 April 2019

ಮಹಾಭಾರತ ತಾತ್ಪರ್ಯನಿರ್ಣಯ, ಕನ್ನಡದಲ್ಲಿ 12: 64 - 68

ಪಿತೃಕ್ರಮಂ ಮೋಹನಾರ್ತ್ಥಂ ಸಮೇತಿ ನ ತಾವತಾ ಶುಕ್ಲತೋ ರಕ್ತತಶ್ಚ ।
ಜಾತೋsಸ್ಯ ದೇಹಸ್ತ್ವಿತಿ ದರ್ಶನಾಯ ಸಶಙ್ಖಚಕ್ರಾಬ್ಜಗದಃ ಸ ದೃಷ್ಟಃ ॥೧೨.೬೪॥
ಅನೇಕ ಸೂರ್ಯ್ಯಾಭಕಿರೀಟಯುಕ್ತೋ ವಿದ್ಯುತ್ಪ್ರಭೇ ಕುಣ್ಡಲೇ ಧಾರಯಂಶ್ಚ ।
ಪೀತಾಮ್ಬರೋ ವನಮಾಲೀ ಸ್ವನನ್ತಸೂರ್ಯ್ಯೋರುದೀಪ್ತಿರ್ದ್ದದೃಶೇ ಸುಖಾರ್ಣ್ಣವಃ ॥೧೨.೬೫॥
ತಂದೆ ಹಾಗು ತಾಯಿಯರಲ್ಲಿ ಪ್ರವೇಶ ಎಂಬ ಕ್ರಮ,
ದುರ್ಜನ ಮೋಹಕ್ಕಾಗಿ ಭಗವಂತ ತೋರೋ ನೇಮ.
ರೇತಸ್ಸಿನಿಂದಾಗಲೀ ರಕ್ತದಿಂದಾಗಲೀ ತಾನು ಹುಟ್ಟಿಲ್ಲ ಎಂದು ತೋರಲೋಸುಗ,
ಶಂಖ -ಚಕ್ರ -ಪದ್ಮ -ಗದೆಯನ್ನು ಹಿಡಿದವನಾಗಿ ಹರಿ ಕಾಣಿಸಿಕೊಂಡನಾಗ.
ಅನೇಕ ಸೂರ್ಯಕಾಂತಿ ಬೀರುವ ಕಿರೀಟದಿಂದ ಒಪ್ಪಿದವ,
ಮಿಂಚಿನ ಬಣ್ಣವುಳ್ಳಂಥ ಕುಂಡಲಗಳನ್ನು ತಾನು ಧರಿಸಿದವ.
ಹಳದಿಬಣ್ಣದ ಬಟ್ಟೆಯುಟ್ಟ ವನಮಾಲಾಧಾರಿ,
ಅನಂತಸೂರ್ಯಕಾಂತಿಯ ಸುಖದಕಡಲಾಗಿ ಕಂಡ ಶ್ರೀಹರಿ.

ಸ ಕಞ್ಜಯೋನಿಪ್ರಮುಖೈಃ ಸುರೈಃ ಸ್ತುತಃ ಪಿತ್ರಾ ಚ ಮಾತ್ರಾ ಚ ಜಗಾದ ಶೂರಜಮ್ ।
ನಯಸ್ವ ಮಾಂ ನನ್ದಗೃಹಾನಿತಿ ಸ್ಮ ತತೋ ಬಭೂವ ದ್ವಿಭುಜೋ ಜನಾರ್ದ್ದನಃ ॥೧೨.೬೬॥
ಹುಟ್ಟಿದ ಕೂಡಲೆ ಬ್ರಹ್ಮಾದಿದೇವತೆಗಳಿಂದ,
ಜಗತ್ತಿಗೆ ಕಾಣುವಂಥ ತಂದೆ ತಾಯಿಗಳಿಂದ,
ಸ್ತೋತ್ರ ಮಾಡಲ್ಪಟ್ಟವನಾದ ಅವ ಗೋವಿಂದ.
ವಸುದೇವಗೆ ಹೇಳಿದ ನನ್ನ ನಂದಗೋಪನ ಮನೆಗೆ ಕೊಂಡೊಯ್ಯಿ,
ಇಂತೆಂದ ಜನಾರ್ದನ ಕಾಣಿಸಿಕೊಂಡ ಉಳ್ಳವನಾಗಿ ಎರಡೇ ಕೈಯ್ಯಿ.
 
ತದೈವ ಜಾತಾ ಚ ಹರೇರನುಜ್ಞಯಾ ದುರ್ಗ್ಗಾಭಿಧಾ ಶ್ರೀರನು ನನ್ದಪತ್ನ್ಯಾಮ್ ।
ತತಸ್ತಮಾದಾಯ ಹರಿಂ ಯಯೌ ಸ ಶೂರಾತ್ಮಜೋ ನನ್ದಗೃಹಾನ್ ನಿಶೀಥೇ ॥೧೨.೬೭॥
ಇದೇ ಸಮಯದಲ್ಲಿ ಹರಿಯಾಜ್ಞೆಯಂತೆ ಲಕ್ಷ್ಮೀದೇವಿ,
ದುರ್ಗೆಯಾಗಿ ನಂದಗೋಪಪತ್ನಿ ಯಶೋದೆಯಲ್ಲಿ ಹುಟ್ಟಿದಳಾ ತಾಯಿ.
ಇತ್ತ ಶಿಶುರೂಪದ ಶ್ರೀಹರಿಯನ್ನು ಹೊತ್ತು,
ವಸುದೇವ ಹೊರಟ ನಂದಗೋಪನ ಮನೆಕುರಿತು.

ಸಂಸ್ಥಾಪ್ಯ ತಂ ತತ್ರ ತಥೈವ ಕನ್ಯಕಾಮಾದಾಯ ತಸ್ಮಾತ್ ಸ್ವಗೃಹಂ ಪುನರ್ಯ್ಯಯೌ ।
ಹತ್ವಾ ಸ್ವಸುರ್ಗ್ಗರ್ಭಷಟ್ಕಂ ಕ್ರಮೇಣ ಮತ್ವಾsಷ್ಟಮಂ ತತ್ರ ಜಗಾಮ ಕಂಸಃ ॥೧೨.೬೮॥
ಶ್ರೀಕೃಷ್ಣನನ್ನು ನಂದಗೋಪನ ಮನೆಯಲ್ಲಿಟ್ಟ ವಸುದೇವನು,
ಅಲ್ಲಿದ್ದ ಶಿಶುರೂಪಿ ದುರ್ಗೆಯ ಕೊಂಡು ಹಿಂತಿರುಗಿದ ತಾನು.
ಇತ್ತ ದೇವಕಿಯ ಆರು ಮಕ್ಕಳನ್ನು ಕಂಸ ಕ್ರಮವಾಗಿ ಕೊಂದಿದ್ದ,
ಎಂಟನೇದು ಹುಟ್ಟಿದೆ ಎಂದು ತಿಳಿದು ದೇವಕಿಯೆಡೆಗೆ ಬಂದಿದ್ದ.
[Contributed by Shri Govind Magal]

No comments:

Post a Comment

ಗೋ-ಕುಲ Go-Kula