Saturday, 13 April 2019

ಮಹಾಭಾರತ ತಾತ್ಪರ್ಯನಿರ್ಣಯ, ಕನ್ನಡದಲ್ಲಿ 12: 37 - 41

ಸ ದೇವಕಾರ್ಯ್ಯಸಿದ್ಧಯೇ ರರಕ್ಷ ಗರ್ಭಮೀಶ್ವರಃ ।
ಪರಾಶರಾತ್ಮಜಃ ಪ್ರಭುರ್ವಿಚಿತ್ರವೀರ್ಯ್ಯಜೋದ್ಭವಮ್ ॥೧೨.೩೭॥
ಸರ್ವನಿಯಾಮಕನಾದ ವೇದವ್ಯಾಸರೂಪಿ ಭಗವಂತ ಶ್ರೀಮನ್ನಾರಾಯಣ,
ಮಾಡಿದ ದೇವತಾಕಾರ್ಯಕೆ ವಿಚಿತ್ರವೀರ್ಯ ಪುತ್ರ ಧೃತರಾಷ್ಟ್ರನ ಗರ್ಭರಕ್ಷಣ.

ಕಲಿಃ ಸುಯೋಧನೋsಜನಿ ಪ್ರಭೂತಬಾಹುವೀರ್ಯ್ಯಯುಕ್ ।
ಪ್ರಧಾನವಾಯುಸನ್ನಿಧೇರ್ಬಲಾಧಿಕತ್ವಮಸ್ಯ ತತ್ ॥೧೨.೩೮॥
ಬಹಳ ಬಾಹುವೀರ್ಯದಿಂದ ಕೂಡಿದ ಸುಯೋಧನನಾಗಿ ಕಲಿಯ ಹುಟ್ಟು,
ಮುಖ್ಯಪ್ರಾಣನ ಸಾನ್ನಿಧ್ಯವಿದ್ದುದೇ ಅವನಲ್ಲಿ ಬಲಾಧಿಕ್ಯದ ಒಳಗುಟ್ಟು.

ಪುರಾ ಹಿ ಮೇರುಮೂರ್ದ್ಧನಿ ತ್ರಿವಿಷ್ಟಪೌಕಸಾಂ ವಚಃ ।
ವಸುನ್ಧರಾತಳೋದ್ಭವೋನ್ಮುಖಂ ಶ್ರುತಂ ದಿತೇಃಸುತೈಃ ॥೧೨.೩೯॥
ಮೇರುಪರ್ವತದಲ್ಲಿ ದೇವತೆಗಳು ಭುವಿಯಲ್ಲಿ ತಾವವತರಿಸುವ ಬಗ್ಗೆ ಆಡಿದ ಮಾತು,
ದೇವತೆಗಳಿಂದ ಕೈಗೊಂಡ ತೀರ್ಮಾನವದು  ದೈತ್ಯರಿಂದ ಕೇಳಿಸಿಕೊಳ್ಳಲ್ಪಟ್ಟಿತು.

ತತಸ್ತು ತೇ ತ್ರಿಲೋಚನಂ ತಪೋಬಲಾದತೋಷಯನ್ ।
ವೃತಶ್ಚ ದೇವಕಣ್ಟಕೋ ಹ್ಯವಧ್ಯ ಏವ ಸರ್ವತಃ ॥೧೨.೪೦॥
ದೈತ್ಯರು ತಪೋಬಲದಿಂದ ಶಿವನನ್ನು ಸಂತೋಷ ಪಡಿಸಿದ ತೆರ,
ಪಡೆದರು ದೇವಕಂಟಕನಾಗಿ ಕಲಿ ಅವಧ್ಯನಾಗಬೇಕೆಂಬ ವರ.

ವರಾದುಮಾಪತೇಸ್ತತಃ ಕಲಿಃ ಸ ದೇವಕಣ್ಟಕಃ ।
ಬಭೂವ ವಜ್ರಕಾಯಯುಕ್ ಸುಯೋಧನೋ ಮಹಾಬಲಃ ॥೧೨.೪೧॥
ಹೀಗೆ  ದೈತ್ಯರಿಗೆ ದೇವಪೀಡಕ ಕಲಿಗೆ ಶಿವನಿಂದ ವರದಾನ,
ದೇವಕಂಟಕ ಕಲಿ ಹುಟ್ಟಿಬಂದ ತಾನು ಆಗಿ ಸುಯೋಧನ.
ಅವನೇ ಮಹಾಬಲಿಷ್ಠ ಅಭೇದ್ಯ ಶರೀರದ ದುರ್ಯೋಧನ.
[Contributed by Shri Govind Magal] 

No comments:

Post a Comment

ಗೋ-ಕುಲ Go-Kula