Wednesday 17 April 2019

ಮಹಾಭಾರತ ತಾತ್ಪರ್ಯನಿರ್ಣಯ, ಕನ್ನಡದಲ್ಲಿ 12: 59 - 63

ಸ ನಾಮತೋ ಬಲದೇವೋ ಬಲಾಢ್ಯೋ ಬಭೂವ ತಸ್ಯಾನು ಜನಾರ್ದ್ದನಃ ಪ್ರಭುಃ ।
ಆವಿರ್ಬಭೂವಾಖಿಲಸದ್ಗುಣೈಕಪೂರ್ಣ್ಣಃ ಸುತಾಯಾಮಿಹ ದೇವಕಸ್ಯ ॥೧೨.೫೯॥
ಹಾಗೆ ರೋಹಿಣಿಯ ಗರ್ಭದಲ್ಲಿ ಜನಿಸಿದ ಶೇಷ,
ಬಲಾಢ್ಯನಾಗಿದ್ದು ಬಲದೇವನೆಂದಾದದ್ದು ವಿಶೇಷ.
ಸಕಲಸದ್ಗುಣಪೂರ್ಣ ಪ್ರಭು ಜನಾರ್ದನ,
ದೇವಕಿಯ ಉದರದಲ್ಲಾಯಿತವನ ಜನನ.

ಯಃ ಸತ್ಸುಖಜ್ಞಾನಬಲೈಕದೇಹಃ ಸಮಸ್ತದೋಷಸ್ಪರ್ಶೋಜ್ಝಿತಃ ಸದಾ ।
ಅವ್ಯಕ್ತತತ್ಕಾರ್ಯ್ಯಮಯೋ ನ ಯಸ್ಯ ದೇಹಃ ಕುತಶ್ಚಿತ್ ಕ್ವಚ ಸ ಹ್ಯಜೋ ಹರಿಃ ॥೧೨.೬೦॥
ಯಾರು ಜ್ಞಾನ ಬಲಗಳೇ ಮೈವೆತ್ತು ಬಂದವನೋ,
ಯಾರು ಎಲ್ಲಾ ದೋಷಗಳ ಸ್ಪರ್ಶದಿಂದ ರಹಿತನೋ,
ಯಾರ ದೇಹ ಜಡ ಅಥವಾ ಜಡಸಂಬಂಧಿ ಪದಾರ್ಥದಿಂದ ಹುಟ್ಟಿಲ್ಲ,
ಅಂತಹಾ ನಾರಾಯಣಗೆ ಪ್ರಾಕೃತವಾದ ಹುಟ್ಟು ಎಂಬುದೊಂದು ಇಲ್ಲ.

ನ ಶುಕ್ಲರಕ್ತಪ್ರಭವೋsಸ್ಯ ಕಾಯಸ್ತಥಾsಪಿ ತತ್ಪುತ್ರತಯೋಚ್ಯತೇ ಮೃಷಾ ।
ಜನಸ್ಯ ಮೋಹಾಯ ಶರೀರತೋsಸ್ಯಾ ಯದಾವಿರಾಸೀದಮಲಸ್ವರೂಪಃ ॥೧೨.೬೧॥
ನಾರಾಯಣನ ಶರೀರ ರೇತಸ್ಸು ಹಾಗೂ ರಕ್ತ ಸಂಪರ್ಕದಿಂದಾದದ್ದಲ್ಲ,
ಆದರೂ ಹಾಗೇ ತೋರಿಸಿಕೊಳ್ಳುವ ಅವ ದುರ್ಜನಮೋಹಕ್ಕಾಗಿ ಎಲ್ಲ.
ಅಮಲಸ್ವರೂಪನಾಗಿ ಆಗಿದ್ದರೂ ಆವಿರ್ಭಾವ,
ದೇವಕೀಪುತ್ರನೆಂದು ಕರೆಸಿಕೊಳ್ಳುವ ಮೋಹಭಾವ.

ಆವಿಶ್ಯ ಪೂರ್ವಂ ವಸುದೇವಮೇವ ವಿವೇಶ ತಸ್ಮಾದೃತುಕಾಲ ಏವ ।
ದೇವೀಮುವಾಸಾತ್ರ ಚ ಸಪ್ತ ಮಾಸಾನ್  ಸಾರ್ದ್ಧಾಂಸ್ತತಶ್ಚಾsವಿರಭೂದಜೋsಪಿ ॥೧೨.೬೨॥
ಮೊದಲು ವಸುದೇವನನ್ನು ಪ್ರವೇಶಮಾಡಿ,
ಅವನ ಮೂಲಕ ಋತುಕಾಲದಿ ದೇವಕಿಯಲ್ಲಿ ಕೂಡಿ,
ಅಲ್ಲಿ ಮಾಡಿದಂತೆ ಏಳೂವರೆ ತಿಂಗಳುಗಳ ಕಾಲ ವಾಸ,
ಹುಟ್ಟಿಲ್ಲದವನಾದರೂ ಹುಟ್ಟಿದವನಂತೆ ತೋರಿದ ವೇಷ.

ಯಥಾ ಪುರಾ ಸ್ತಮ್ಭತ ಆವಿರಾಸೀದಶುಕ್ಲರಕ್ತೋsಪಿ ನೃಸಿಂಹರೂಪಃ ।
ತಥೈವ ಕೃಷ್ಣೋsಪಿ ತಥಾsಪಿ ಮಾತಾಪಿತೃಕ್ರಮಾದೇವ ವಿಮೋಹಯತ್ಯಜಃ ॥೧೨.೬೩॥
ಹೇಗೆ ಹಿಂದೆ ರೇತಸ್ಸು ರಕ್ತ ಸಂಪರ್ಕವಿಲ್ಲದೇ ನೃಸಿಂಹನಾಗಿ ಕಂಬದಿ ಬಂದ,
ಹಾಗೆಯೇ ಕೃಷ್ಣನಾಗಿ ನಾರಾಯಣ ಎಲ್ಲರ ಬಿಗಿದ ಮೋಹದಾನಂದದಿಂದ.
[Contributed by Shri Govind Magal] 

No comments:

Post a Comment

ಗೋ-ಕುಲ Go-Kula