ವರಂ ಸಮಾಶ್ರಿತಾ ಪತಿಂ ವ್ರಜೇತ ಯಾ ತತೋsಧಮಮ್ ।
ನ ಕಾಚಿದಸ್ತಿ ನಿಷ್ಕೃತಿರ್ನ್ನ
ಭರ್ತ್ತೃಲೋಕಮೃಚ್ಛತಿ ॥೧೨.೨೪ ॥
ನಿಯೋಗ ಪದ್ಧತಿಯ ಅಂದಿನ ರೀತಿ ನೀತಿ,
ಉತ್ತಮನ ಆರಿಸಿದ ಹೆಣ್ಣಿಗೆ ಆಗುವ ಸದ್ಗತಿ.
ತಾರತಮ್ಯದಲ್ಲಿ ಪತಿಗಿಂತ ಕೆಳಗಿನವರ ಸೇರಲು,
ಪ್ರಾಯಶ್ಚಿತ್ತವಿಲ್ಲದೇ ಗಂಡನಲೋಕ ಸೇರಲ್ಲ ಅವಳು.
ಕೃತೇ ಪುರಾ ಸುರಾಸ್ತಥಾ ಸುರಾಙ್ಗನಾಶ್ಚ
ಕೇವಲಮ್ ।
ನಿಮಿತ್ತತೋsಪಿ ತಾಃ ಕ್ವಚಿನ್ನ ತಾನ್ ವಿಹಾಯ ಮೇನಿರೇ ॥೧೨.೨೫॥
ಮನೋವಚಃ ಶರೀರತೋ ಯತೋ ಹಿ ತಾಃ
ಪತಿವ್ರತಾಃ ।
ಅನಾದಿಕಾಲತೋsಭವಂಸ್ತತಃ ಸಭರ್ತ್ತೃಕಾಃ ಸದಾ ॥೧೨.೨೬॥
ಸ್ವಭರ್ತ್ತೃಭಿರ್ವಿಮುಕ್ತಿಗಾಃ ಸಹೈವ ತಾ
ಭವನ್ತಿ ಹಿ ।
ಕೃತಾನ್ತಮಾಪ್ಯ ಚಾಪ್ಸರಃಸ್ತ್ರಿಯೋ
ಬಭೂವುರೂರ್ಜ್ಜಿತಾಃ ॥೧೨.೨೭॥
ಅನಾವೃತಾಶ್ಚ ತಾಸ್ತಥಾ
ಯಥೇಷ್ಟಭರ್ತ್ತೃಕಾಃ ಸದಾ ।
ಅತಸ್ತು ತಾ ನ
ಭರ್ತ್ತೃಭಿರ್ವಿಮುಕ್ತಿಮಾಪುರುತ್ತಮಾಮ್ ॥೧೨.೨೮ ॥
ಸುರಸ್ತ್ರಿಯೋsತಿಕಾರಣೈರ್ಯ್ಯದಾsನ್ಯಥಾ ಸ್ಥಿತಾಸ್ತದಾ ।
ದುರನ್ವಯಾತ್ ಸುದುಃಸಹಾ ವಿಪತ್ ತತೋ
ಭವಿಷ್ಯತಿ ॥೧೨.೨೯॥
ಅಯುಕ್ತಮುಕ್ತವಾಂಸ್ತತೋ ಭವಾಂಸ್ತಥಾsಪಿ ತೇ ವಚಃ ।
ಅಲಙ್ಘ್ಯಮೇವ ಮೇ ತತೋ ವದಸ್ವ ಪುತ್ರದಂ
ಸುರಮ್ ॥೧೨.೩೦॥
ಕೃತಯುಗದ ಪುರುಷ ಹಾಗೂ ಸ್ತ್ರೀ ದೇವತೆಗಳಿಬ್ಬರು ,
ಗಟ್ಟಿನಿಮಿತ್ತವಿದ್ದರೂ ನಿಯತ ಪತಿಪತ್ನಿಯಾಗಿರುತ್ತಿದ್ದರು.
ಮನಸ್ಸು ಮಾತು ಮತ್ತು ದೇಹ ಮೂರನ್ನು ಒಬ್ಬರಿಗೆ ಮೀಸಲಿಟ್ಟ ಸ್ಥಿತಿ,
ಆ ಕಾರಣಕ್ಕೆ ಅವರುಗಳನ್ನು ಪತಿವ್ರತೆಯರೆಂದು ಕರೆಯುತ್ತಿದ್ದ ರೀತಿ.
ಇದಾಗಿತ್ತು ಅನಾದಿ ಕಾಲದ ನಿಯಮ,
ಅವರಿಗಿತ್ತು ಸಭರ್ತೃಕರೆಂದೇ ನಾಮ.
ಇದು ಅನಾದಿಕಾಲದ ದೇವತೆಗಳ ರೀತಿ,
ಮೋಕ್ಷವನ್ನೂ ಜೊತೆಯಾಗಿ ಪಡೀತಿದ್ದ ಸ್ಥಿತಿ.
ಕೃತಯುಗದ ಕೊನೆಯಲ್ಲಿ ಅಪ್ಸರ ಸ್ತ್ರೀಯರ ಆಗಮನ,
ಅವರಿಗಿದ್ದಿಲ್ಲ ನಿಯತ ಪತಿಪತ್ನಿ ಎಂಬಂಥ ನಿಯಮನ.
ಅವರಿಗಿದ್ದಿಲ್ಲ ಒಬ್ಬರೊಂದಿಗೇ ಬಾಳಬೇಕೆಂಬ ಯಾವ
ಕಟ್ಟು ಪಾಡು,
ಮನದಿಚ್ಛೆಯಂತಿರುವವರಿಗಿದ್ದಿಲ್ಲ ಪತಿಯೊಡನೆ ಮುಕ್ತಿ ಎಂದು ನೋಡು.
ದೇವತಾಸ್ತ್ರೀಯರಿಗೆ ಇರುತ್ತದೆ ಕೆಲವೊಮ್ಮೆ ಪ್ರಬಲವಾದ ಕಾರಣ,
ಶಾಪ, ಪುಣ್ಯಹ್ರಾಸ ಪ್ರಬಲ ಪ್ರಾರಬ್ಧಗಳದೇ
ಆಗುವುದಲ್ಲಿ ನಿಯಮನ.
ಅಂತಹಾ ದೇವತಾ ಸ್ತ್ರೀಯರಿಗೆ ಎದುರಾಗುವ ಸ್ಥಿತಿ,
ನಿಯತಪತಿಯ ಬಿಟ್ಟು ಅನ್ಯಗಂಡಿನೊಡನೆ ಬಾಳಗತಿ.
ಅಂತಹವರ ಫಲ ದುಃಖದಾಯಕ ಅಸಹನೀಯ ವಿಪತ್ತು,
ಇಂಥ ಸ್ಥಿತಿಯಲ್ಲಿ ನೀನೇ ಹೇಳು ಮೀರಲಾಗಲ್ಲ ಪತಿ ನಿನ್ನ ಮಾತು.
No comments:
Post a Comment
ಗೋ-ಕುಲ Go-Kula