Wednesday 15 May 2019

ಮಹಾಭಾರತ ತಾತ್ಪರ್ಯನಿರ್ಣಯ, ಕನ್ನಡದಲ್ಲಿ 12: 89 - 93

ಯದಾssಪ ದೇವಶ್ಚತುರಃ ಸ ಮಾಸಾಂಸ್ತದೋಪನಿಷ್ಕ್ರಾಮಣಮಸ್ಯ ಚಾsಸೀತ್ ।
ಜನ್ಮರ್ಕ್ಷಮಸ್ಮಿನ್ ದಿನ ಏವ ಚಾsಸೀತ್ ಪ್ರಾತಃ ಕಿಞ್ಚಿತ್ ತತ್ರ ಮಹೋತ್ಸವೋsಭವತ್ ॥೧೨.೮೯॥
ನಾಕು ತಿಂಗಳುಗಳ ಕಳೆದ ಮಗು ಕೃಷ್ಣ,
ಆಗವನಿಗೆ ಸಂಭ್ರಮದ ಉಪನಿಷ್ಕ್ರಾಮಣ.
ಮಗುವ ಹೊರಗೆ ಕರೆದೊಯ್ಯುವ ಕಾರ್ಯಕ್ರಮ,
ಆ ದಿನವೇ ಕೂಡಿಬಂದಿತ್ತು ಜನ್ಮನಕ್ಷತ್ರದ ಸಂಗಮ.
ಬೆಳಿಗ್ಗೆ ಮೇಳವಿಸಿತ್ತಲ್ಲಿ ಮಹೋತ್ಸವದ ಸಂಭ್ರಮ.

ತದಾ ಶಯಾನಃ ಶಕಟಸ್ಯ ಸೋsಧಃ ಪದಾsಕ್ಷಿಪತ್ ತಂ ದಿತಿಜಂ ನಿಹನ್ತುಮ್ ।
ಅನಃ ಸಮಾವಿಶ್ಯ ದಿತೇಃ ಸುತೋsಸೌ ಸ್ಥಿತಃ ಪ್ರತೀಪಾಯ ಹರೇಃ ಸುಪಾಪಃ ॥೧೨.೯೦॥
ಕೃಷ್ಣನನ್ನು ಮಲಗಿಸಿದ್ದ ಜಾಗವದು ಗಾಡಿಯ ಕೆಳಭಾಗ,
ಕೃಷ್ಣಗೆ ಅಪಾಯ ಮಾಡಲು ಶಕಟಾಕ್ಷ ಗಾಡಿಯಲ್ಲಿ ಸೇರಿದ್ದನಾಗ.
ರಕ್ಕಸನ ಕೊಲ್ಲಲೆಂದೇ ಕಾಲಿಂದ ಗಾಡಿ ಒದ್ದ ಕೃಷ್ಣ ಮಹಾಭಾಗ.

ಕ್ಷಿಪ್ತೋsನಸಿಸ್ಥಃ ಶಕಟಾಕ್ಷನಾಮಾ ಸ ವಿಷ್ಣುನೇತ್ವಾಸಹಿತಃ ಪಪಾತ ।
ಮಮಾರ ಚಾsಶು ಪ್ರತಿಭಗ್ನಗಾತ್ರೋ ವ್ಯತ್ಯಸ್ತಚಕ್ರಾಕ್ಷಮಭೂದನಶ್ಚ ॥೧೨.೯೧॥
ಕೃಷ್ಣನ ಒದೆಗೆ ಶಕಟಾಕ್ಷನೊಂದಿಗಿನ ಬಂಡಿಯದು ಮುರಿದುಬಿತ್ತು,
ಅಂಗಾಂಗಗಳು ಭಗ್ನವಾದ ರಕ್ಕಸನ ಪ್ರಾಣವದು ಹಾರಿಹೋಯ್ತು.
ನೊಗ ಚಕ್ರ ಬಂಡಿಭಾಗಗಳೆಲ್ಲಾ ಅಸ್ತವ್ಯಸ್ತವಾಗಿ ಚೆಲ್ಲಾಡಿಹೋಯ್ತು.

ಸಸಮ್ಭ್ರಮಾತ್ತಂ ಪ್ರತಿಗೃಹ್ಯ ಶಙ್ಕಯಾ ಕೃಷ್ಣಂ ಯಶೋದಾ ದ್ವಿಜವರ್ಯ್ಯಸೂಕ್ತಿಭಿಃ ।
ಸಾ ಸ್ನಾಪಯಾಮಾಸ ನದೀತಟಾತ್ ತದಾ ಸಮಾಗತಾ ನನ್ದವಚೋsಭಿತರ್ಜ್ಜಿತಾ ॥೧೨.೯೨॥
ಉದ್ವೇಗ ಧಾವಂತದಿಂದ ಬರುತ್ತಾಳಾಗ ಯಶೋದೆ,
ಕೃಷ್ಣಗೇನಾಯಿತೋ ಎಂದವಳ ಅನುಮಾನದ ಬಾಧೆ.
ವಿಪ್ರರ ಆಶೀರ್ವಾದ ಮಂತ್ರಗಳಿಂದ ಕೃಷ್ಣಗೆ ಮಾಡಿಸುತ್ತಾಳೆ ಸ್ನಾನ,
ಆಗಲೇ ಬಂದ ನಂದನಿಂದ ಯಶೋದೆಗಾಯಿತು ಬೈಗುಳದ ಗಾನ. 

ಹತ್ವಾ ತು ತಂ ಕಂಸಭೃತ್ಯಂ ಸ ಕೃಷ್ಣಃ ಶಿಶ್ಯೇ ಪುನಃ ಶಿಶುವತ್ ಸರ್ವಶಾಸ್ತಾ ।
ಏವಂ ಗೋಪಾನ್ ಪ್ರೀಣಯನ್ ಬಾಲಕೇಳೀವಿನೋದತೋ ನ್ಯವಸತ್ ತತ್ರ ದೇವಃ ॥೧೨.೯೩॥
ಹೀಗೆ ಶ್ರೀಕೃಷ್ಣ ಕಂಸನ ಭೃತ್ಯ ಶಕಟಾಕ್ಷನ ಕೊಂದ,
ಸರ್ವ ನಿಯಂತ್ರಕನಾದರೂ ಮಗುವಿನಂತೆ ಮಲಗಿದ.
ಗೊಲ್ಲರೊಡನಿದ್ದೀಯುತ್ತಿದ್ದ ಆನಂದ ಕ್ರೀಡಾವಿನೋದದಿಂದ.

No comments:

Post a Comment

ಗೋ-ಕುಲ Go-Kula