ಕದಾಚಿದೀಶ್ವರಃ ಸ್ತನಂ ಪಿಬನ್ ಯಶೋದಯಾ ಪಯಃ ।
ಶೃತಂ ನಿಧಾತುಮುಜ್ಝಿತೋ ಬಭಞ್ಜ ದದ್ಧ್ಯಮತ್ರಕಮ್ ॥೧೩.೦೭॥
ಒಮ್ಮೆ ಸರ್ವಜ್ಞನಾದ
ಕೃಷ್ಣಗೆ ತಾಯಿ ಮಾಡಿಸುತ್ತಿದ್ದಾಗ ಸ್ತನಪಾನ,
ಉಕ್ಕುವ ಹಾಲನ್ನು
ಇಳಿಸುವುದಕ್ಕೆಂದು ಕೃಷ್ಣನ ಕೆಳಗಿಟ್ಟಾಕ್ಷಣ.
ಆಗ ಅಲ್ಲಿದ್ದ ಮೊಸರ
ಪಾತ್ರೆಯನ್ನು ಒಡೆಯುತ್ತಾನೆ ಪುಟ್ಟಕೃಷ್ಣ.
ಸ ಮತ್ಥ್ಯಮಾನದದ್ಧ್ಯುರುಪ್ರಜಾತಮಿನ್ದುಸನ್ನಿಭಮ್ ।
ನವಂ ಹಿ ನೀತಮಾದದೇ ರಹೋ ಜಘಾಸ ಚೇಶಿತಾ ॥೧೩.೦೮॥
ಕಡೆದ ಮೊಸರಲ್ಲಿ
ದೊಡ್ಡ ಮುದ್ದೆಯಾಗಿ ಬಂದ,
ಚಂದ್ರನಂತೆ
ಬಿಳಿಯಾಗಿ ಕಾಣುವ ಬೆಣ್ಣೆಯ ಚೆಂದ.
ಅದನ್ನೆಲ್ಲ ಎತ್ತಿದ
ಕೃಷ್ಣ ಏಕಾಂತದಲ್ಲದನ ತಿಂದ.
ಪ್ರಜಾಯತೇ ಹಿ ಯತ್ಕುಲೇ ಯಥಾಯುಗಂ ಯಥಾವಯಃ ।
ತಥಾ ಪ್ರವರ್ತ್ತನಂ ಭವೇದ್ ದಿವೌಕಸಾಂ ಸಮುದ್ಭವೇ ॥೧೩.೦೯॥
ಇತಿ ಸ್ವಧರ್ಮ್ಮಮುತ್ತಮಂ ದಿವೌಕಸಾಂ ಪ್ರದರ್ಶಯನ್ ।
ಅಧರ್ಮ್ಮಪಾವಕೋsಪಿ ಸನ್ ವಿಡಮ್ಬತೇ ಜನಾರ್ದ್ದನಃ ॥೧೩.೧೦॥
ನೃತಿರ್ಯ್ಯಗಾದಿರೂಪಕಃ ಸ ಬಾಲ್ಯಯೌವನಾದಿ ಯತ್ ।
ಕ್ರಿಯಾಶ್ಚ ತತ್ತದುದ್ಭವಾಃ ಕರೋತಿ ಶಾಶ್ವತೋsಪಿ ಸನ್ ॥೧೩.೧೧॥
ಆದಾಗ ಭೂಮಿಯಲ್ಲಿ
ದೇವತೆಗಳ ಅವತಾರ,
ಯಾವ್ಯಾವ ಯುಗದ ಯಾವ
ಕುಲದ ದ್ವಾರ,
ನಡೆಯಬೇಕು ಯುಗ ಕುಲ
ಧರ್ಮಾನುಸಾರ.
ಕೃಷ್ಣ ಮಾಡಿದ ಅಂಥಾ
ಉತ್ಕೃಷ್ಟವಾದ ಧರ್ಮಪಾಲನೆ,
ಅಧರ್ಮಕ್ಕೆ
ಅಗ್ನಿಯಾದರೂ ತೋರಿದ ಲೋಕಾನುಕರಣೆ.
ಮನುಷ್ಯ ಪ್ರಾಣಿ
ಮುಂತಾದ ರೂಪಗಳಿಂದ ಅವತರಿಸುವ ಹರಿ,
ಆಯಾ ಕಾಲ ಯೋನಿ
ಯುಗಗಳ ಅನುಸರಿಸಿ ತೋರಿಸುವ ಪರಿ.
ವಾಸ್ತವಿಕವಾಗಿ
ಭಗವಂತ ನಿತ್ಯ -ಒಂದೇ ರೀತಿ,
ಆದರೂ ವಯೋಗುಣ
ಚೇಷ್ಟೆ ತೋರುವ ನೀತಿ.
ಸ ವಿಪ್ರರಾಜಗೋಪಕಸ್ವರೂಪಕಸ್ತದುದ್ಭವಾಃ ।
ತದಾತದಾ ವಿಚೇಷ್ಟತೇ ಕ್ರಿಯಾಃ ಸುರಾನ್ ವಿಶಿಕ್ಷಯನ್ ॥೧೩.೧೨॥
ಆಗಿ ಬಂದಾಗ ಅನೇಕ
ಬ್ರಾಹ್ಮಣ, ರಾಜ, ಗೋಪಸ್ವರೂಪ,
ವಿವಿಧ ಯೋನಿಗಳ ಕ್ರಿಯೆ
ತೋರೋ ದೇವತಾಶಿಕ್ಷಣ ರೂಪ.
ತಥಾsಪ್ಯನನ್ಯದೇವತಾಸಮಂ
ನಿಜಂ ಬಲಂ ಪ್ರಭುಃ ।
ಪ್ರಕಾಶಯನ್ ಪುನಃಪುನಃ ಪ್ರದರ್ಶಯತ್ಯಜೋ ಗುಣಾನ್ ॥೧೩.೧೩॥
ಹೀಗೆ
ಮಾಡುತ್ತಿದ್ದಾಗಲೂ ಅವನು ಎಲ್ಲಾ ದೇವತೆಗಳಿಗೂ ಮೇಲೆ,
ತನ್ನ ಬಲ ತೋರುತ್ತಾ ಮಾಡಿದ ಅಸಾಮಾನ್ಯ ಗುಣಗಳ ಲೀಲೆ.
No comments:
Post a Comment
ಗೋ-ಕುಲ Go-Kula