Saturday 18 May 2019

ಮಹಾಭಾರತ ತಾತ್ಪರ್ಯನಿರ್ಣಯ, ಕನ್ನಡದಲ್ಲಿ 12: 120 - 125

ಯಸ್ಮಿನ್ನಬ್ದೇ ಭಾದ್ರಪದೇ ಸ ಮಾಸೇ ಸಿಂಹಸ್ಥಯೋರ್ಗ್ಗುರುರವ್ಯೋಃ ಪರೇಶಃ ।
ಉದೈತ್ ತತಃ ಫಾಲ್ಗುನೇ ಫಲ್ಗುನೋsಭೂದ್ ಗತೇ ತತೋ ಮಾದ್ರವತೀ ಬಭಾಷೇ ॥೧೨.೧೨೦॥
ಜಾತಾಃ ಸುತಾಸ್ತೇ ಪ್ರವರಾಃ ಪೃಥಾಯಾಮೇಕಾsನಪತ್ಯಾsಹಮತಃ ಪ್ರಸಾದಾತ್ ।
ತವೈವ ಭೂಯಾಸಮಹಂ ಸುತೇತಾ ವಿಧತ್ಸ್ವ ಕುನ್ತೀಂ ಮಮ ಮನ್ತ್ರದಾತ್ರೀಮ್ ॥೧೨.೧೨೧॥
ಯಾವ ವರ್ಷದ ಭಾದ್ರಪದಮಾಸದಲ್ಲಿ ಗುರು ಸೂರ್ಯ ಸಿಂಹರಾಶಿಯಲ್ಲಿದ್ದಾಗ,
ಕೃಷ್ಣ ಅವತರಿಸಿದ ಅದೇ ವರ್ಷದ ಫಾಲ್ಗುಣದಲ್ಲಿ ಅರ್ಜುನ ಹುಟ್ಟಿಬಂದ ಯೋಗ.
ಅರ್ಜುನನ ಜನನಾನಂತರ ಪಾಂಡುರಾಜನ ಕುರಿತು ಮಾದ್ರಿ ಹೇಳುತ್ತಾಳಾಗ.
ಕುಂತಿಯಲ್ಲಿ ನಿನಗಾಗಿದ್ದಾರೆ ಉತ್ಕೃಷ್ಟ ಮಕ್ಕಳು,
ಆದರೆ ನಾನೊಬ್ಬಳು ಮಾತ್ರ ಮಕ್ಕಳೇ ಇಲ್ಲದವಳು.
ನಿನ್ನ ಅನುಗ್ರಹದಿಂದ ನಾನು ಮಕ್ಕಳೊಂದಿಗಳಾಗಬೇಕು,
ಕುಂತಿಯನ್ನು ನನಗೆ ಆ ಮಂತ್ರ ಕೊಡುವವಳಾಗಿ ಮಾಡಬೇಕು.

ಇತೀರಿತಃ ಪ್ರಾಹ ಪೃಥಾಂ ಸ ಮಾದ್ರ್ಯೈ ದಿಶಸ್ವ ಮನ್ತ್ರಂ ಸುತದಂ ವರಿಷ್ಠಮ್ ।
ಇತ್ಯೂಚಿವಾಂಸಂ ಪತಿಮಾಹ ಯಾದವೀ ದದ್ಯಾಂ ತ್ವದರ್ತ್ಥೇ ತು ಸಕೃತ್ ಫಲಾಯ ॥೧೨.೧೨೨॥

ಈ ರೀತಿಯಾಗಿ ಮಾದ್ರಿಯಿಂದ ಹೇಳಲ್ಪಟ್ಟ ರಾಜಾ ಪಾಂಡು,
ಕುಂತಿಗ್ಹೇಳುತ್ತಾನೆ ಮಾದ್ರಿಗೆ ಮಕ್ಕಳ ಪಡೆವ ಮಂತ್ರ ಕೊಡು.
ಹೀಗೆ ಹೇಳಿಸಿಕೊಂಡು ನುಡಿಯುತ್ತಾಳೆ ಯದುಕುಲೋತ್ಪನ್ನಳಾದ  ಕುಂತಿ,
ನಿನಗಾಗಿ ಕೊಡುತ್ತಿರುವೆ ಆ ಮಂತ್ರ ಒಮ್ಮೆ ಮಾತ್ರ ಫಲವದರ ಶಕ್ತಿ.

ಉವಾಚ ಮಾದ್ರ್ಯೈ ಸುತದಂ ಮನುಂ ಚ ಪುನಃ ಫಲಂ ತೇ ನ ಭವಿಷ್ಯತೀತಿ ।
ಮನ್ತ್ರಂ ಸಮಾದಾಯ ಚ ಮದ್ರಪುತ್ರೀ ವ್ಯಚಿನ್ತಯತ್ ಸ್ಯಾಂ ನು ಕಥಂ ದ್ವಿಪುತ್ರಾ ॥೧೨.೧೨೩॥
ಮಾದ್ರಿಗೆ ಕುಂತಿಯಿಂದಾಗುತ್ತದೆ ಮಂತ್ರದ ಉಪದೇಶ,
ಇದರಿಂದ ಒಮ್ಮೆ ಫಲ ಎರಡನೇ ಬಾರಿಯಿಲ್ಲ ಅವಕಾಶ.
ಮಂತ್ರೋಪದೇಶ ಪಡೆದ ಮಾದ್ರಿಯಿಂದ ಆಲೋಚನೆ,
ಇಬ್ಬರು ಮಕ್ಕಳ ಹೇಗೆ ಪಡೆದೇನು ಎಂಬ ಚಿಂತನೆ.

ಸದಾsವಿಯೋಗೌ ದಿವಿಜೇಷು ದಸ್ರೌ ನಚೈತಯೋರ್ನ್ನಾಮಭೇದಃ ಕ್ವಚಿದ್ಧಿ।
ಏಕಾ ಭಾರ್ಯ್ಯಾ ಸೈತಯೋರಪ್ಯುಷಾ ಹಿ ತದಾಯಾತಃ ಸಕೃದಾವರ್ತ್ತನಾದ್ ದ್ವೌ ॥೧೨.೧೨೪॥
ದೇವತೆಗಳಲ್ಲಿ ಅಶ್ವೀದೇವತೆಗಳದು ಬಿಡದ ಬಂಧ,
ಇರುವುದಿಲ್ಲ ಅವರುಗಳಿಗೆ ಎಂದೂ ನಾಮಭೇದ.
ಒಟ್ಟಿಗಿರುವ ಅವರಿಗೆ ಉಷೆ ಒಬ್ಬಳೇ ಹೆಂಡತಿ,
ಬರುತ್ತಾರವರು ಮಂತ್ರ ಉಚ್ಚರಿಸಲು ಒಂದಾವರ್ತಿ.

ಇತೀಕ್ಷನ್ತ್ಯಾssಕಾರಿತಾವಶ್ವಿನೌ ತೌ ಶೀಘ್ರಪ್ರಾಪ್ತೌ ಪುತ್ರಕೌ ತತ್ಪ್ರಸೂತೌ ।
ತಾವೇವ ದೇವೌ ನಕುಲಃ ಪೂರ್ವಜಾತಃ ಸಹದೇವೋsಭೂತ್ ಪಶ್ಚಿಮಸ್ತೌ ಯಮೌ ಚ ॥೧೨.೧೨೫॥
ಈ ರೀತಿ ಯೋಚನೆ ಮಾಡಿದ ಅವಳು,
ಕರೆಯಲು ಬಂದರು ಅಶ್ವಿನೀದೇವತೆಗಳು.
ಶೀಘ್ರದಿ ಮಾಡಿದರು ಮಾದ್ರಿಯಲ್ಲಿ ಪುತ್ರೋತ್ಪತ್ತಿಯ  ಉತ್ಸವ,
ಅವಳಿಗಳಾಗಿ ಹುಟ್ಟಿಬಂದರು ನಕುಲ ಮತ್ತು ಸಹದೇವ.

No comments:

Post a Comment

ಗೋ-ಕುಲ Go-Kula