Thursday 16 May 2019

ಮಹಾಭಾರತ ತಾತ್ಪರ್ಯನಿರ್ಣಯ, ಕನ್ನಡದಲ್ಲಿ 12: 100 - 104

ಬೃಹಸ್ಪತಿಃ ಪೂರ್ವಮಭೂದ್ಧರೇಃ ಪದಂ  ಸಂಸೇವಿತುಂ ಪವನಾವೇಶಯುಕ್ತಃ ।
ಸ ಉದ್ಧವೋ ನಾಮ ಯದುಪ್ರವೀರಾಜ್ಜಾತೋ ವಿದ್ವಾನುಪಗವನಾಮಧೇಯಾತ್ ॥೧೨.೧೦೦॥
ಧರ್ಮರಾಯ, ಭೀಮ, ಬಲರಾಮ, ಕೃಷ್ಣ, ಅರ್ಜುನಾದಿಗಳ ಹುಟ್ಟಿನ ಮುನ್ನ,
ಹರಿಪಾದ ಸೇವೆಗಾಗಿ ಬೃಹಸ್ಪತ್ಯಾಚಾರ್ಯರಿಂದ ದ್ರೋಣನಾಮಕರಾಗಿ ಜನನ.
ಅವರೇ ಮತ್ತೆ ಮುಖ್ಯಪ್ರಾಣಾವೇಷದಿಂದ ಹುಟ್ಟಿದಾಗಿನ ಹೆಸರು ಉದ್ಧವ,
ಆ ಉದ್ಧವನ ಹುಟ್ಟಿಗೆ ಕಾರಣನಾದ ಯದುಶ್ರೇಷ್ಠನ ಹೆಸರದು ಉಪಗವ.

ದ್ರೋಣಾತ್ಮಕಂ ನಾತಿತರಾಂ ಸ್ವಸೇವಕಂ ಕುರ್ಯಾದ್ಧರಿರ್ಮ್ಮಾಮಿತಿ ಭೂಯ ಏವ ।
ಸ ಉದ್ಧವಾತ್ಮಾsವತತಾರ ಯಾದವೇಷ್ವಾಸೇವನಾರ್ತ್ಥಂ ಪುರುಷೋತ್ತಮಸ್ಯ ॥೧೨.೧೦೧॥
ದ್ರೋಣರೂಪದ ತನ್ನಿಂದ ಕೃಷ್ಣ ಅತ್ಯಂತ ಸೇವೆ ಮಾಡಿಸಿಕೊಳ್ಳಲಾರನೆಂದು,
ಉದ್ಧವ ನಾಮದಿಂದ ಯದುಗಳಲ್ಲವತರಿಸಿಬಂದ ನಾರಾಯಣ ಸೇವೆಗೆಂದು.

ಬೃಹಸ್ಪತೇರೇವ ಸ ಸರ್ವವಿದ್ಯಾ ಅವಾಪ ಮನ್ತ್ರೀ ನಿಪುಣಃ ಸರ್ವೇವೇತ್ತಾ ।
ವರ್ಷತ್ರಯೇ ತತ್ಪರತಃ ಸ ಸಾತ್ಯಕಿರ್ಜ್ಜಜ್ಞೇ ದಿನೇ ಚೇಕಿತಾನಶ್ಚ ತಸ್ಮಿನ್ ॥೧೨.೧೦೨॥
ಉದ್ಧವ ಬೃಹಸ್ಪತಿಯಿಂದ ಎಲ್ಲಾ ವಿದ್ಯೆಗಳ ಹೊಂದಿದ,
ಮಂತ್ರಾಲೋಚನೆಯ ನಿಪುಣನಾಗಿ ಎಲ್ಲಾ ಬಲ್ಲವನಾಗಿದ್ದ.
ಉದ್ಧವ ಹುಟ್ಟಿ ಮೂರುವರ್ಷಕ್ಕೆ ಸಾತ್ಯಕಿಯ ಜನನ,
ಅದೇ ಶುಭದಿನದಂದು ಚೇಕಿತಾನನದೂ ಆಗಮನ. 

ಮರುತ್ಸು ನಾಮ ಪ್ರತಿಭೋ ಯದುಷ್ವಭೂತ್ ಸ ಚೇಕಿತಾನೋ ಹರಿಸೇವನಾರ್ತ್ಥಮ್ ।
ತದೈವ ಜಾತೋ ಹೃದಿಕಾತ್ಮಜೋsಪಿ ವರ್ಷತ್ರಯೇ ತತ್ಪರತೋ ಯುಧಿಷ್ಠಿರಃ ॥೧೨.೧೦೩॥
ಮರುದ್ದೇವತೆಗಳಲ್ಲಿ ಪ್ರತಿಭಾ ಎನ್ನುವ ಮರುತ್ತು ತಾನು,
ಯದುಗಳಲ್ಲಿ ಹುಟ್ಟಿ ಚೇಕಿತಾನ ಎನಿಸಿಕೊಂಡ ಅವನು.
ಆಗಲೇ ಪರಮಾತ್ಮನ ಸೇವೆಗೆ ಹುಟ್ಟಿದ ಕೃತವರ್ಮ,
ಮೂರುವರ್ಷಾನಂತರ ಯುಧಿಷ್ಠಿರ ತಾಳಿದ ಜನ್ಮ.

ತತೋsಬ್ದತೋ  ಭೂಭರಸಂಹೃತೌ ಹರೇರಙ್ಗತ್ವಮಾಪ್ತುಂ ಗಿರಿಶೋsಜನಿಷ್ಟ ।
ಅಶ್ವತ್ಥಾಮಾ ನಾಮತೋsಶ್ವಧ್ವನಿಂ ಸ ಯಸ್ಮಾಚ್ಚಕ್ರೇ ಜಾಯಮಾನೋ ಮಹಾತ್ಮಾ ॥೧೨.೧೦೪॥
ತದನಂತರ ಒಂದು ವರ್ಷವಾದ ಮೇಲೆ,
ಭೂಭಾರಹರಣದಿ ಶಿವ ಸೇರುವ ಲೀಲೆ.
ಸದಾಶಿವ ಮಾಡಿದ ಭೂಮಿಯಲ್ಲಿ ಅವತಾರ,
ಹುಟ್ಟುತ್ತಲೇ ಕುದುರೆಯಂತೆ ಕೆನೆದ ಈಶ್ವರ.
ಹಾಗಾಗಿ ಅಶ್ವತ್ಥಾಮನೆಂದಾದ ಗಂಗಾಧರ.
[Contributed by Shri Govind Magal]

No comments:

Post a Comment

ಗೋ-ಕುಲ Go-Kula